ಮಾಂಸಾಹಾರ ನಿಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗುವುದಾದರೆ, ಹಾನಿಯನ್ನುಂಟುಮಾಡಿದರೆ ಸಸ್ಯಾಹಾರ ಮತ್ತು ಮಾಂಸಹಾರ ಎರಡನ್ನೂ ಪೂರೈಸು ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡುವುದೇಕೆ ಎಂದು ಗ್ರಾಹಕರ ಆಯೋಗ ಪ್ರಶ್ನಿಸಿದೆ.
“ಒಬ್ಬ ವಿವೇಕಯುತ ವ್ಯಕ್ತಿಯು ಆಹಾರ ಸೇವಿಸುವ ಮೊದಲು ಅದು ಸಸ್ಯಾಹಾರವೇ ಅಥವಾ ಮಾಂಸಹಾರವೇ ಎಂಬ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತದೆ” ಎಂದು ಮುಂಬೈ ಉಪನಗರ(ಹೆಚ್ಚುವರಿ) ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಆಹಾರ ಸಮಾನತೆಗೆ ಸರ್ಕಾರದಿಂದ ಮತ್ತೊಂದು ಸ್ವಾಗತಾರ್ಹ ಹೆಜ್ಜೆ
ತಪ್ಪಾಗಿ ಮಾಂಸಾಹಾರಿ ಆಹಾರವನ್ನು ನೀಡಲಾಗುತ್ತಿದೆ ಎಂದು ಆರೋಪ ಮಾಡಿ ಇಬ್ಬರು ಸಲ್ಲಿಸಿದ್ದ ದೂರನ್ನು ಆಯೋಗ ವಜಾಗೊಳಿಸಿದೆ. “ದೂರುದಾರರು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿದ್ದರೆ ಮತ್ತು ಮಾಂಸಾಹಾರ ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದಾದರೆ ಅವರು ಸಸ್ಯಾಹಾರವನ್ನು ಮಾತ್ರ ಪೂರೈಸುವ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡುವ ಬದಲು, ಸಸ್ಯಾಹಾರ ಮತ್ತು ಮಾಂಸಹಾರ ಎರಡನ್ನೂ ಪೂರೈಸುವ ರೆಸ್ಟೋರೆಂಟ್‌ನಿಂದ ಆಹಾರವನ್ನು ಯಾಕೆ ಆರ್ಡ್ ಮಾಡುವುದ” ಎಂದು ಪ್ರಶ್ನಿಸಿದೆ.
2020ರ ಡಿಸೆಂಬರ್ 19ರಂದು ಮುಂಬೈನ ಸಿಯಾನ್‌ನಲ್ಲಿರುವ ವಾವ್ ಮೊಮೊಸ್ ಔಟ್‌ಲೆಟ್‌ನಿಂದ ತಂಪು ಪಾನೀಯದೊಂದಿಗೆ ‘ಡಾರ್ಜಿಲಿಂಗ್ ಮೊಮೊ ಕಾಂಬೊ’ ಅನ್ನು ಆರ್ಡರ್ ಮಾಡಿದ್ದರು. ಸಸ್ಯಹಾರ ಆಯ್ಕೆಯನ್ನು ಎರಡು ಬಾರಿ ಒತ್ತಿದ್ದರು. ಆದರೆ ಡಾರ್ಜಿಲಿಂಗ್ ಚಿಕನ್ ಮೊಮೊಸ್ ಲಭಿಸಿದೆ ಎಂದು ದೂರುದಾರರು ಹೇಳಿದ್ದಾರೆ.
ತಾನು ಸಸ್ಯಹಾರಕ್ಕೆ ಆದ್ಯತೆ ನೀಡುವುದಾಗಿ ಉಲ್ಲೇಖಿಸಿದ್ದರೂ ರೆಸ್ಟೋರೆಂಟ್‌ನವರು ತನ್ನ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ. ಕಾಂಬೋ ಆಫರ್‌ನಲ್ಲಿ ಸಸ್ಯಾಹಾರ ಅಥವಾ ಮಾಂಸಾಹಾರ ಆಯ್ಕೆಗಳನ್ನು ಸ್ಪಷ್ಟವಾಗಿ ಸೂಚಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಕಂಪನಿಯ ನಿರ್ಲಕ್ಷ್ಯದಿಂದಾಗಿ ನಾವು ಮಾನಸಿಕ ಆಘಾತ, ಭಾವನಾತ್ಮಕವಾಗಿ ಕುಗ್ಗಿದ್ದೇವೆ. ನಮ್ಮ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ಅದಕ್ಕಾಗಿ ಪರಿಹಾರವಾಗಿ ಆರು ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ದೂರುದಾರರು ಕೋರಿದ್ದಾರೆ.
ಇದನ್ನು ಓದಿದ್ದೀರಾ? ರಾಮ ಮಾಂಸಾಹಾರಿಯಾಗಿದ್ದ: ಮಹಾರಾಷ್ಟ್ರದಲ್ಲಿ ವಿವಾದ ಸೃಷ್ಟಿಸಿದ ಎನ್‌ಸಿಪಿ ಶಾಸಕನ ಹೇಳಿಕೆ
ಮತ್ತೊಂದೆಡೆ ಬಿಲ್‌ನಲ್ಲಿ(ಇನ್‌ವಾಯ್ಸ್) ಸೂಚಿಸಿದಂತೆ ಕಂಪನಿಯು ದೂರುದಾರರೇ ಮಾಂಸಾಹಾರ ಆರ್ಡರ್ ಮಾಡಿದ್ದಾರೆ ಎಂದು ವಾದಿಸಿದೆ. ದೂರುದಾರರು ತಮ್ಮ ಉದ್ಯೋಗಿ ಮೇಲೆ ಹಲ್ಲೆ ಮಾಡಿದ್ದಾರೆ, ಗದ್ದಲ ಸೃಷ್ಟಿಸಿದ್ದಾರೆ. ಈ ವೇಳೆ ರಿಫಂಡ್ ಮಾಡಿ, ಉಚಿತವಾಗಿ ಆಹಾರ ನೀಡಲಾಗಿದೆ ಎಂದು ರೆಸ್ಟೋರೆಂಟ್ ಹೇಳಿದೆ.
ಮರುಪಾವತಿ ಮಾಡಿರುವುದರಿಂದಾಗಿ ದೂರುದಾರರು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಬರುವ ಗ್ರಾಹಕರಲ್ಲ. ಕಂಪನಿ ಮರುಪಾವತಿ ಮಾಡಿದ್ದರೂ 1,200 ರೂ. ಮೌಲ್ಯದ ಉಡುಗೊರೆ ವೋಚರ್ ನೀಡುವುದಾಗಿ ಹೇಳಿದೆ. ಆದರೆ ದೂರುದಾರರು ತಲಾ 3 ಲಕ್ಷ ರೂ.ಗಳನ್ನು ಕೇಳಿದ್ದಾರೆ. ಕಂಪನಿಯ ಸಿಬ್ಬಂದಿಗಳಿಗೆ ಕಿರುಕುಳ ನೀಡುವ ದುರುದ್ದೇಶಪೂರಿತ ಉದ್ದೇಶ ದೂರುದಾರರು ಹೊಂದಿದ್ದಾರೆ ಎಂದು ಕಂಪನಿ ಹೇಳಿದೆ.
ಡಾರ್ಜಿಲಿಂಗ್ ಮೊಮೊ ಕಾಂಬೊ ಸಸ್ಯಾಹಾರ ಅಥವಾ ಮಾಂಸಾಹಾರವೇ ಎಂದು ಆಫರ್ ಬೋರ್ಡ್‌ನ ಫೋಟೋ ಸ್ಪಷ್ಟವಾಗಿ ಹೇಳದಿದ್ದರೂ, ಕೆಳಭಾಗದಲ್ಲಿ ಸಸ್ಯಹಾರ/ಮಾಂಸಹಾರ ಎಂದಿದೆ. ಎರಡೂ ಆಯ್ಕೆಗಳ ಲಭ್ಯತೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಆಯೋಗ ತಿಳಿಸಿದೆ.
