ಪತಿ ಹೋದಲ್ಲೆಲ್ಲಾ ಪಗ್‌ ನಾಯಿಯಂತೆ ಪತ್ನಿ ಹಿಂಬಾಲಿಸಬೇಕಿಲ್ಲ: ಮದ್ರಾಸ್‌ ಹೈಕೋರ್ಟ್‌

Date:

ಉದ್ಯೋಗದ ಕಾರಣಕ್ಕೆ ಪತಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸ್ಥಳಾಂತರಗೊಂಡಾಗಲೆಲ್ಲ ಪತ್ನಿಯೂ ಆತನನ್ನು ಹಿಂಬಾಲಿಸಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ವೊಡಾಫೋನ್‌ ಕಂಪನಿಯ ಹಳೆಯ ಜಾಹೀರಾತಿನಲ್ಲಿದ್ದ ಪಗ್‌ ನಾಯಿಯಂತೆ ಪತ್ನಿ ಪತಿಯನ್ನು ಹಿಂಬಾಲಿಸಬೇಕೆಂಬುದು ಕಡ್ಡಾಯವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

- Advertisement -

ವೈವಾಹಿಕ ವಿವಾದವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ.ಆರ್‌. ಸ್ವಾಮಿನಾಥನ್‌ ಮತ್ತು ಎಂ.ಡಿ. ಸುಮತಿ ಅವರ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ʼಪತಿಯೊಬ್ಬರು ಉದ್ಯೋಗದ ನಿಮಿತ್ತ ಮತ್ತೊಂದು ನಗರಕ್ಕೆ ತೆರಳಿದಾಗ ಪತ್ನಿಯನ್ನು ತಮ್ಮೊಂದಿಗೆ ಕರೆದೊಯ್ಯದೇ ಇರುವುದು ವೈವಾಹಿಕ ಕರ್ತವ್ಯದ ಉಲ್ಲಂಘನೆʼ ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

“ಎಲ್ಲ ಸಂದರ್ಭಗಳಲ್ಲೂ ಪತ್ನಿಯನ್ನು ತನ್ನೊಂದಿಗೆ ಕರೆದೊಯ್ಯುವುದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಪತಿ ಸೈನಿಕನಾಗಿದ್ದರೆ, ಸೇನಾ ಬ್ಯಾರಕ್‌ನಲ್ಲಿದ್ದಾಗ ಅಲ್ಲಿ ವೈವಾಹಿಕ ಜೀವನ ನಡೆಸಲು ಸಾಧ್ಯವಿಲ್ಲ. ಪತ್ನಿಯೂ ಸ್ವತಃ ಉದ್ಯೋಗದಲ್ಲಿರಬಹುದು. ಹೀಗಾಗಿ, ವೊಡಾಫೋನ್‌ನ ಮರೆಯಲಾಗದ ಜಾಹೀರಾತಿನಲ್ಲಿದ್ದ ಪಗ್‌ ನಾಯಿಯಂತೆ ಪತ್ನಿ ವರ್ತಿಸಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿದೆ.

ಸಿವಗಂಗೈ ಮೂಲದ ಈ ದಂಪತಿ 1992ರ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದರು. ಅವರಿಗೆ ನಾಲ್ವರು ಮಕ್ಕಳಿದ್ದಾರೆ. ದಂಪತಿ ಕಳೆದ 16 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪ್ರಕರಣದ ವಿಚಾರಣೆ ವೇಳೆಗೆ ಪತಿಗೆ 67 ವರ್ಷ ವಯಸ್ಸಾಗಿತ್ತು. ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಿವಗಂಗೈ ಕೌಟುಂಬಿಕ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಉದ್ಯೋಗಕ್ಕಾಗಿ ಪತಿ ಸಿವಗಂಗೈ ತೊರೆದು ಮುಂಬೈಗೆ ತೆರಳುವಾಗ ಪತ್ನಿಯನ್ನು ತಮ್ಮೊಂದಿಗೆ ಕರೆದೊಯ್ಯದಿರುವುದೇ ವೈವಾಹಿಕ ಕರ್ತವ್ಯದ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 23(1)(a) ಅಡಿಯಲ್ಲಿ ತನ್ನದೇ ತಪ್ಪಿನ ಲಾಭವನ್ನು ಪಡೆದುಕೊಂಡು ವಿಚ್ಛೇದನ ಪಡೆಯಲು ಪತಿ ಮುಂದಾಗಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು.

ಅಲ್ಲದೆ, ಲೈಂಗಿಕ ಬಯಕೆಯನ್ನು ನಿಯಂತ್ರಿಸುವುದು ಯಾರಿಗಾದರೂ “ಅತ್ಯಂತ ಕಷ್ಟ” ಎಂದು ಹೇಳಿದ್ದ ಕೌಟುಂಬಿಕ ನ್ಯಾಯಾಲಯ, ಪತಿ ಎಲ್ಲಿಗೆ ಹೋದರೂ ಪತ್ನಿಯನ್ನು ತಮ್ಮೊಂದಿಗೆ ಕರೆದೊಯ್ಯುವುದು ಅವರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿತ್ತು.

ಈ ನಿಲುವನ್ನು ಮದ್ರಾಸ್‌ ಹೈಕೋರ್ಟ್‌ ಅಲ್ಲಗಳೆದಿದೆ. “ರ್ಯಾಡಿಕಲ್‌ ಫೆಮಿನಿಸ್ಟ್‌ಗಳು ಕೌಟುಂಬಿಕ ನ್ಯಾಯಾಲಯದ ಈ ಕ್ರಾಂತಿಕಾರಿ ನಿಲುವನ್ನು ಮೆಚ್ಚಬಹುದು. ಆದರೆ ನಾವು ವಿಷಾದದಿಂದ ಹೇಳುವುದೇನೆಂದರೆ, ಇದಕ್ಕೆ ನಮ್ಮ ಅನುಮೋದನೆ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿತು. ಉದ್ಯೋಗದ ಸ್ವರೂಪ, ಕೆಲಸದ ಸ್ಥಳ ಹಾಗೂ ವೈಯಕ್ತಿಕ ಪರಿಸ್ಥಿತಿಗಳ ಆಧಾರದ ಮೇಲೆ ದಂಪತಿ ಯಾವಾಗಲೂ ಒಂದೇ ಸ್ಥಳದಲ್ಲಿ ವಾಸಿಸುವುದು ಸಾಧ್ಯವಾಗದಿರಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಸೈನಿಕರ ಉದಾಹರಣೆ ನೀಡಿದ ನ್ಯಾಯಾಲಯ, ಸೇನಾ ಬ್ಯಾರಕ್‌ನಲ್ಲಿ ಪತ್ನಿಯೊಂದಿಗೆ ಪ್ರತ್ಯೇಕ ವೈವಾಹಿಕ ಮನೆ ಸ್ಥಾಪಿಸುವುದು ಸಾಧ್ಯವಿಲ್ಲ. ಮತ್ತೊಂದೆಡೆ, ಪತ್ನಿಯೂ ಬೇರೆ ಪ್ರದೇಶದಲ್ಲಿ ಸ್ವತಃ ಉದ್ಯೋಗದಲ್ಲಿದ್ದಾಗ ಒಟ್ಟಿಗೆ ವಾಸಿಸುವುದು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ಆದರೆ ಪತಿ ಮಾಡಿದ್ದ ಪತ್ನಿಯ ಮೇಲಿನ ವಿವಾಹೇತರ ಸಂಬಂಧದ ಆರೋಪವನ್ನೂ ಹೈಕೋರ್ಟ್‌ತಳ್ಳಿಹಾಕಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿದ್ದ ವ್ಯಕ್ತಿಯನ್ನು ಪ್ರಕರಣದಲ್ಲಿ ಪ್ರತಿವಾದಿಯಾಗಿ ಸೇರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ, ಆ ಸಂಬಂಧವನ್ನು ಸಾಬೀತುಪಡಿಸಲು ಅಗತ್ಯವಿರುವ ಪಕ್ಷವನ್ನೇ ಪ್ರಕರಣದಲ್ಲಿ ಸೇರಿಸದಿರುವುದು ಗಂಭೀರ ಲೋಪ ಎಂದು ನ್ಯಾಯಾಲಯ ಹೇಳಿತು. ಅಲ್ಲದೆ, ಪತ್ನಿಯೂ ಪತಿಯೊಂದಿಗೆ ಮತ್ತೆ ವಾಸಿಸಲು ಯಾವುದೇ ಪ್ರಯತ್ನ ಮಾಡಿರಲಿಲ್ಲ. ಪತಿಗೆ ಮರಳಿ ಬರುವಂತೆ ಯಾವುದೇ ಅಧಿಕೃತ ಪತ್ರ ಅಥವಾ ನೋಟಿಸ್‌ ಕೂಡ ಕಳುಹಿಸಿರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಇದನ್ನೂ ಓದಿ: SIR | ಮತದಾರರ ಪಟ್ಟಿಗೆ ಕತ್ತರಿ: ಇತ್ತೀಚೆಗೆ ಚುನಾವಣೆ ನಡೆದ ರಾಜ್ಯಗಳಲ್ಲೇ ಅತಿ ಹೆಚ್ಚು ಕಡಿತ

“ದಂಪತಿಯ ನಡುವಿನ ಸಂಬಂಧವು ಸರಿಪಡಿಸಲಾಗದಷ್ಟು ಹದಗೆಟ್ಟಿದೆ ಎಂಬುದರಲ್ಲಿ ನಮಗೆ ಯಾವುದೇ ಅನುಮಾನವಿಲ್ಲ” ಎಂದೂ ನ್ಯಾಯಪೀಠ ಹೇಳಿದೆ. ಸುಪ್ರೀಂ ಕೋರ್ಟ್‌ನ Rakesh Raman v. Kavitha ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್‌, ದೀರ್ಘಕಾಲದ ಪ್ರತ್ಯೇಕ ವಾಸ, ದಾಂಪತ್ಯ ಜೀವನದ ಅನುಪಸ್ಥಿತಿ ಮತ್ತು ವೈವಾಹಿಕ ಬಾಂಧವ್ಯದ ಸಂಪೂರ್ಣ ಕುಸಿತವು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13(1)(ia) ಅಡಿಯಲ್ಲಿ ಮಾನಸಿಕ ಕ್ರೌರ್ಯಕ್ಕೆ ಸಮನಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

ದಂಪತಿಯೊಂದಿಗೆ ನ್ಯಾಯಾಧೀಶರು ನೇರವಾಗಿ ಮಾತುಕತೆ ನಡೆಸಿ, ಪರಸ್ಪರ ಒಪ್ಪಂದದ ಮೂಲಕ ವಿವಾದ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನವೂ ವಿಫಲವಾಯಿತು. ದಂಪತಿಯ ನಡುವೆ ತೀವ್ರ ವೈಮನಸ್ಸು ಇದ್ದು, ಮತ್ತೆ ಒಂದಾಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಕಂಡುಕೊಂಡ ಹೈಕೋರ್ಟ್‌ ವಿವಾಹವನ್ನು ವಿಸರ್ಜಿಸಿ ವಿಚ್ಛೇದನ ಮಂಜೂರು ಮಾಡಿತು.

ಅದೇ ವೇಳೆ, ಪತ್ನಿಗೆ ₹7 ಲಕ್ಷ ಜೀವನಾಂಶ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಈ ಮೊತ್ತವನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಠೇವಣಿ ಇಟ್ಟ ಬಳಿಕವೇ ವಿಚ್ಛೇದನ ಆದೇಶ ಜಾರಿಗೆ ಬರಲಿದೆ.

ಪಗ್‌ ನಾಯಿಗಳು ತಮ್ಮ ಮಾಲೀಕರನ್ನು ಹೋದಲ್ಲಿ ಬಂದಲ್ಲಿ ಹಿಂಬಾಲಿಸುತ್ತಲೇ ಇರುವ ಸ್ವಭಾವಕ್ಕೆ ಹೆಸರುವಾಸಿ. ಅವುಗಳನ್ನು ಬೇಟೆ ಅಥವಾ ಇತರ ಕೆಲಸಗಳಿಗಾಗಿ ಬೆಳೆಸುವುದಕ್ಕಿಂತ, ಮುಖ್ಯವಾಗಿ ಮನುಷ್ಯರ ಸಂಗಾತಿ ಪ್ರಾಣಿಗಳಾಗಿ ಸಾಕಲಾಗುತ್ತದೆ. ಹೀಗಾಗಿ ಅವು ಸದಾ ತಮ್ಮ ಮಾಲೀಕರ ಗಮನ ಮತ್ತು ಸಾಂಗತ್ಯ ಬಯಸುತ್ತವೆ. ಮಾಲೀಕರು ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಹೋದರೂ ಅವು ಹಿಂಬಾಲಿಸುತ್ತವೆ. ಈ ಸ್ವಭಾವದಿಂದಲೇ ಪಗ್‌ ನಾಯಿಗಳನ್ನು ಕೆಲವೊಮ್ಮೆ ‘ಶ್ಯಾಡೋ’ (ನೆರಳು) ಎಂದೂ ಕರೆಯಲಾಗುತ್ತದೆ.

ಪಗ್‌ ನಾಯಿಯ ಇದೇ ಹಿಂಬಾಲಿಸುವ ಸ್ವಭಾವ ವೊಡಾಫೋನ್‌ನ ಜಾಹೀರಾತಿನ ಮೂಲಕ ಮತ್ತಷ್ಟು ಜನಪ್ರಿಯವಾಯಿತು. ಆ ಜಾಹೀರಾತಿನಲ್ಲಿ ಪಗ್‌ ನಾಯಿಯೊಂದು ತನ್ನ ಮಾಲೀಕನನ್ನು ನಿರಂತರವಾಗಿ ಹಿಂಬಾಲಿಸುತ್ತಿತ್ತು. ಬಳಿಕ ಯಾರನ್ನಾದರೂ ಸದಾ ಹಿಂಬಾಲಿಸುವುದನ್ನು ಸೂಚಿಸಲು ‘ವೊಡಾಫೋನ್‌ ಜಾಹೀರಾತಿನ ಪಗ್‌ ನಾಯಿಯಂತೆ ಹಿಂಬಾಲಿಸುವುದು’ ಎಂಬ ಮಾತು ಜನಪ್ರಿಯ ಉಲ್ಲೇಖವಾಗಿ ಬಳಕೆಗೆ ಬಂತು.

ಇದೇ ಹಿನ್ನೆಲೆಯಲ್ಲೇ ಮದ್ರಾಸ್‌ ಹೈಕೋರ್ಟ್‌, ಪತ್ನಿ ಕೂಡ ಪತಿ ಎಲ್ಲಿಗೆ ಹೋದರೂ ಆತನನ್ನು ಹಿಂಬಾಲಿಸಬೇಕು ಎಂದು ನಿರೀಕ್ಷಿಸಲಾಗದು ಎಂದು ಹೇಳಲು ಪಗ್‌ ನಾಯಿಯ ಉದಾಹರಣೆಯನ್ನು ಬಳಸಿದೆ. ಪತಿ ಉದ್ಯೋಗಕ್ಕಾಗಿ ಬೇರೆ ನಗರಕ್ಕೆ ತೆರಳಿದಾಗಲೆಲ್ಲ ಪತ್ನಿಯೂ ಅವರೊಂದಿಗೆ ಹೋಗಲೇಬೇಕು ಎಂಬ ನಿಯಮ ಇರಲು ಸಾಧ್ಯವಿಲ್ಲ. ಪತ್ನಿ ಸ್ವತಃ ಉದ್ಯೋಗದಲ್ಲಿರಬಹುದು ಅಥವಾ ತನ್ನದೇ ವೃತ್ತಿ ಮತ್ತು ಜೀವನವನ್ನು ಹೊಂದಿರಬಹುದು. ಪತಿಯಷ್ಟೇ ಆಕೆಗೂ ಸ್ವಾತಂತ್ರ್ಯ, ವೈಯಕ್ತಿಕ ಗಡಿ ಇರುತ್ತದೆ. ಅದನ್ನು ಗೌರವಿಸುವುದು ಸಂಗಾತಿಗಳಿಬ್ಬರ ಕರ್ತವ್ಯ. ಆದರೆ ಆ ಗೌರವವನ್ನ ಪತ್ನಿಯಿಂದ ಮಾತ್ರ ನಿರೀಕ್ಷಿಸುವುದು ಸರಿಯಲ್ಲ. ಹೀಗಾಗಿ ಪತಿಯ ಉದ್ಯೋಗದ ಕಾರಣಕ್ಕೆ ಆಕೆ ಪ್ರತಿಯೊಂದು ಸಂದರ್ಭದಲ್ಲೂ ಆತನೊಂದಿಗೆ ತೆರಳಬೇಕು ಎಂದು ನಿರೀಕ್ಷಿಸುವುದು ತಪ್ಪು ಎಂದು ನ್ಯಾಯಾಲಯದ ಅಭಿಪ್ರಾಯಪಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...

CJP ನಾಯಕರ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರ ಮನವಿ; ಮ್ಯಾಜಿಸ್ಟ್ರೇಟ್ ಮುಂದೆ ಹಾಜರು

CJP ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಸೋಮವಾರ...

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ: ಮೊದಲ ದಿನವೇ 4 ಚಿನ್ನ ಸೇರಿ 11 ಪದಕಗಳ ಸಾಧನೆ!

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ಭರ್ಜರಿ...