ತನ್ನ ಬೇಡಿಕೆ ಈಡೇರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಎಎಪಿ ಸಂಚಾಲಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ‘ಜನತಾ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಜನತಾ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಮೊದಲು ಎನ್‌ಡಿಎ ಆಡಳಿತ ಇರುವ ಎಲ್ಲಾ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡಿ” ಎಂದು ಪ್ರಧಾನಿ ಮೋದಿಗೆ ಸವಾಲು ಹಾಕಿದ ಕೇಜ್ರಿವಾಲ್ ಈ ಬೇಡಿಕೆ ಈಡೇರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ | ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು
“ಪ್ರಧಾನಿ ಮೋದಿ ತಮ್ಮ 10 ವರ್ಷಗಳ ಅಧಿಕಾರದಲ್ಲಿ ಏನನ್ನೂ ಮಾಡಿಲ್ಲವೆಂದು ಜನರು ಹೇಳುತ್ತಿದ್ದಾರೆ. ಈಗ ಏನಾದರೂ ಮಾಡಿದರೆ, ಚುನಾವಣೆಗೂ ಮುನ್ನವಾದರೂ ಪ್ರಧಾನಿ ಏನೋ ಒಂದು ಸಾಧಿಸಿದ್ದಾರೆ ಎಂದು ಜನರು ಹೇಳಬಹುದು” ಎಂದರು.
“ದೆಹಲಿಯಲ್ಲಿ ಫೆಬ್ರವರಿಯಲ್ಲಿ ಚುನಾವಣೆಯಿದೆ. ಇದಕ್ಕೂ ಮುನ್ನ ಅವರು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡಲು ನಾನು ಆಗ್ರಹಿಸುತ್ತೇನೆ. ಈ ಬೇಡಿಕೆ ಈಡೇರಿಸಿದರೆ ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ | ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಇನ್ನು ಈ ಸಂದರ್ಭದಲ್ಲೇ ‘ಡಬಲ್ ಇಂಜಿನ್’ ಆಡಳಿತ ಮಾದರಿಯನ್ನು ‘ಡಬಲ್ ಲೂಟಿ ಮತ್ತು ಡಬಲ್ ಭ್ರಷ್ಟಾಚಾರ’ ಎಂದು ಬಣ್ಣಿಸಿದರು. “ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ದಿನನಿತ್ಯ ಗುಂಡಿನ ದಾಳಿ ನಡೆಯುತ್ತಿದೆ. ಅಪರಾಧಗಳು ಹೆಚ್ಚಾಗುತ್ತಿವೆ. ದೆಹಲಿ ಸರ್ಕಾರದ ಕಾರ್ಯಗಳಲ್ಲಿ ಬಿಜೆಪಿ ತಡೆಯೊಡ್ಡುತ್ತಿದೆ. ನಾವು ಮಹಿಳೆಯರ ರಕ್ಷಣೆಗಾಗಿ ಬಸ್ ಮಾರ್ಷಲ್‌ಗಳನ್ನು ಪರಿಚಯಿಸಿದ್ದೆವು. ಆದರೆ ಅವರು ಅದನ್ನೂ ಕೂಡಾ ತಡೆದಿದ್ದಾರೆ” ಎಂದು ದೂರಿದ್ದಾರೆ.
ಈ ವೇಳೆಯೇ ತನ್ನನ್ನು ಜೈಲಿನಲ್ಲಿದ್ದಾಗ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ನನಗೆ ಇನ್ಸುಲಿನ್ ಪೂರೈಕೆಯನ್ನು ಜೈಲಿನಲ್ಲಿ ನಿಲ್ಲಿಸಲಾಗಿತ್ತು. ನನ್ನ ಮೂತ್ರಪಿಂಡಗಳು ವಿಫಲವಾಗುವ ಅಪಾಯವಿತ್ತು ಮತ್ತು ನಾನು ಸಾಯುವ ಅಪಾಯವೂ ಇತ್ತು ಎಂದು ಹೇಳಿದರು.
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿ ಐದು ತಿಂಗಳುಗಳ ಕಾಲ ತಿಹಾರ್ ಜೈಲಿನಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಜಾಮೀನಿನಲ್ಲಿ ಸೆಪ್ಟೆಂಬರ್ 13ರಂದು ಬಿಡುಗಡೆಯಾದರು.
📍 जनता की अदालत, छत्रसाल स्टेडियम, दिल्ली@ArvindKejriwal जी की PM मोदी को चुनौती👇
— AAP (@AamAadmiParty) October 6, 2024
"मोदी जी, फ़रवरी में दिल्ली का चुनाव है। 22 राज्यों में BJP की सरकार है। इन राज्यों में बिजली Free कर दो, मैं दिल्ली चुनाव में मोदी जी का प्रचार करूँगा।"#JantaKiAdalatMeinKejriwal pic.twitter.com/nhBmwH2URL
