2009 ಮತ್ತು 2024ರ ನಡುವೆ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಕೋರಿ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಸಲ್ಲಿಸಿರುವ ಅರ್ಜಿಯನ್ನು ಮೂರು ತಿಂಗಳ ಒಳಗಾಗಿ ಇತ್ಯರ್ಥಗೊಳಿಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗವು (ಇಸಿಐ) ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಚುನಾವಣಾ ಆಯೋಗದ (ಇಸಿಐ) ವಕೀಲರ ಅರ್ಜಿಯನ್ನು ದಾಖಲಿಸಿಕೊಂಡರು. 2009ಕ್ಕೆ ಸಂಬಂಧಿಸಿದ ವಿವರಗಳು ಕೋರಿರುವ ಕಾರಣ ತಕ್ಷಣ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು. ಮೂರು ತಿಂಗಳುಗಳ ಅವಕಾಶಬೇಕು ಎಂದು ಇಸಿಐ ಪರ ವಕೀಲರು ಅರ್ಜಿಯಲ್ಲಿ ಕೋರಿದ್ದಾರೆ.
“ಇಸಿಐ ಅರ್ಜಿಯಲ್ಲಿ 2024ರ ಡಿಸೆಂಬರ್ 29ರಂದು ಸಲ್ಲಿಸಲಾದ ಅರ್ಜಿಯನ್ನು ಸಾಧ್ಯವಾದಷ್ಟು ಬೇಗ ಮತ್ತು ಇಂದಿನಿಂದ ಮೂರು ತಿಂಗಳ ನಂತರ ನಿರ್ಧರಿಸಲಾಗುವುದು ಎಂದು ಇಸಿಐ ತಿಳಿಸಿದ ಕಾರಣ ಈ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಇದನ್ನು ಓದಿದ್ದೀರಾ? ಮತದಾರರ ಪಟ್ಟಿಯಲ್ಲಿ ಅಕ್ರಮ; ಮಹಾರಾಷ್ಟ್ರ ಸರ್ಕಾರ ಕಾನೂನುಬದ್ಧವಾಗಿ ಆಯ್ಕೆಯಾಗಿಲ್ಲ : ಕಾಂಗ್ರೆಸ್ ಆರೋಪ
ಸುರ್ಜೆವಾಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, 2009 ಮತ್ತು 2024ರ ನಡುವೆ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಪೂರೈಸುವಂತೆ ಕೋರಿ 2024ರ ಡಿಸೆಂಬರ್ 29ರಂದು ಸಲ್ಲಿಸಿದ ಅರ್ಜಿಯ ಬಗ್ಗೆ ಇಸಿಐ ಇನ್ನೂ ಕೂಡಾ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
2025ರ ಫೆಬ್ರವರಿಯಲ್ಲಿ ಕಾನೂನಿನ ಪ್ರಕಾರ ಪ್ರಾತಿನಿಧ್ಯವನ್ನು ನಿರ್ಧರಿಸಲು ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಇಸಿಐ ಪತ್ರವನ್ನು ನೀಡಿತ್ತು. ಆದರೆ ಈ ಬಗ್ಗೆ ನಿರ್ಧರಿಸಲು ಕಾನೂನಿನ ಪ್ರಕಾರ ಪ್ರಾತಿನಿಧ್ಯವನ್ನು ನಿರ್ಧರಿಸಲು ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಇಸಿಐ ಪತ್ರವನ್ನು ನೀಡಿತ್ತು ಎಂದು ಸಿಂಘ್ವಿ ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? 2024ರಲ್ಲಿ ದ್ವೇಷ ಭಾಷಣಗಳ ಸಂಖ್ಯೆ 74.4% ಹೆಚ್ಚಳ; ಬಿಜೆಪಿಗರೇ ಪ್ರಮುಖ ಆರೋಪಿಗಳು!
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಚುನಾವಣೆಯಲ್ಲಿ ಮತ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಅದರಲ್ಲೂ ಮಹಾರಾಷ್ಟ್ರದ ಹಲವು ಬೂತ್‌ಗಳಲ್ಲಿ ಮತದಾರರ ಪ್ರಮಾಣ ಮತ್ತು ಎಣಿಕೆಯಾದ ಮತದ ನಡುವೆ ತೀವ್ರ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಸ್ಥಳೀಯವಾಗಿ ಪ್ರತಿಭಟನೆಗಳು ನಡೆದಿದೆ. ಗ್ರಾಮಕ್ಕೆ ಗ್ರಾಮವೇ ಪ್ರತಿಭಟನೆ ನಡೆಸಿದೆ.
ಇವೆಲ್ಲವುದರ ನಡುವೆ 2009 ಮತ್ತು 2024ರ ನಡುವೆ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಕೋರಿ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ ಇಸಿಐ ಈವರೆಗೂ ಸರಿಯಾದ ಮಾಹಿತಿ ನೀಡಿಲ್ಲ. ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಮೂರು ತಿಂಗಳ ಅವಕಾಶ ಕೋರಿದೆ.
