ತರಕಾರಿ ಕದ್ದ ಆರೋಪದಲ್ಲಿ ಮಹಿಳೆ ಮತ್ತು ಆಕೆಯ ಪುತ್ರಿಗೆ ಕೂದಲು ಹಿಡಿದು ಎಳೆದಾಡಿ ಅಮಾನುಷವಾಗಿ ಥಳಿಸಿದ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತರಕಾರಿ ಮಾರುಕಟ್ಟೆಯ ರಸ್ತೆಯಲ್ಲಿ ಮಹಿಳೆ ಮತ್ತು ಆಕೆಯ ಪುತ್ರಿಯ ಕೂದಲು ಎಳೆದು, ಹೊಟ್ಟೆಗೆ ಒದ್ದು, ಕೋಲುಗಳಿಂದ ಹೊಡೆದಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಇಬ್ಬರು ಪುರುಷರು ಮಹಿಳೆ ಮತ್ತು ಆಕೆಯ ಮಗಳನ್ನು ಥಳಿಸುತ್ತಿರುವುದು ಕಂಡುಬಂದಿದೆ. ಹಲವು ಮಂದಿ ನಿಂತು ನೋಡುತ್ತಿರುವುದು ಕಂಡು ಬಂದಿದೆ. ಆದರೆ ಯಾರೂ ಕೂಡಾ ಮಹಿಳೆಯರ ಸಹಾಯಕ್ಕೆ ಬಂದಿಲ್ಲ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಅಮಾನುಷ ಕೃತ್ಯ | ದಲಿತ ಬಾಲಕಿಯ ಅಪಹರಣ, ನಿರಂತರ ಸಾಮೂಹಿಕ ಅತ್ಯಾಚಾರ
ಸೆಕ್ಯುರಿಟಿ ಗಾರ್ಡ್‌ನಂತೆ ಕಾಣುವ ವ್ಯಕ್ತಿಯೊಬ್ಬರ ಹಣೆಯಲ್ಲಿ ರಕ್ತಸ್ರಾವವಾಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವ್ಯಕ್ತಿಯೇ ಕೋಲು ಹಿಡಿದುಕೊಂಡು ಮಹಿಳೆಯ ಕಡೆಗೆ ಹೋಗಿ ಕೂದಲು ಹಿಡಿದು ರಸ್ತೆಯಲ್ಲಿ ಎಳೆದಾಡಿ ಹೊಡೆದಿದ್ದಾರೆ. ಅದೇ ಸಮಯದಲ್ಲಿ, ಇತರ ಇಬ್ಬರು ಪುರುಷರು ಯುವತಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಆಕೆಯ ಕೂದಲನ್ನು ಎಳೆದು, ನೆಲಕ್ಕೆ ತಳ್ಳಿ ಹೊಟ್ಟೆಗೆ ಒದ್ದಿದ್ದಾರೆ.
ಸೂರತ್ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ವಿಡಿಯೋವನ್ನು ಕೂಡಾ ಸೇರಿಸಲಾಗಿದೆ. “ಸೂರತ್ ಎಪಿಎಂಸಿಯಲ್ಲಿ ತರಕಾರಿಗಳನ್ನು ಕದ್ದ ಆರೋಪದ ಮೇಲೆ ಮಹಿಳೆ ಮತ್ತು ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ ಸೂರತ್ ನಗರ ಪುಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ” ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
સુરત APMCમાં શાકભાજી ચોરીના આક્ષેપ બાદ મહિલા અને એક યુવતી પર કરાયેલ હુમલાની ઘટનામાં સુરત શહેર પુણા પોલીસે બે આરોપીને ઝડપી કરાવ્યું કાયદાનું ભાન.#સુરત_શહેર_પોલીસ_તમારી_સાથે_તમારા_માટે
— Surat City Police (@CP_SuratCity) April 10, 2025
.
.#surat #suratcitypolice #suratpolice #suratcitypunapolice #puna #punapolice pic.twitter.com/PhFViMPV68
ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಪೊಲೀಸರು ಈ ಆರೋಪಿಗಳಿಗೂ ಥಳಿಸಿದ್ದಾರೆ ಎಂದು ಹೇಳಿದ್ದಾರೆ. ಆರೋಪಿಗಳಿಗೆ ಥಳಿಸಿ ಶಿಕ್ಷಿಸುವುದು ಸರಿಯಲ್ಲ. ನ್ಯಾಯಾಲಯವೇ ತೀರ್ಪು ನೀಡಬೇಕು. ಪೊಲೀಸರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.
ಇನ್ನು ಕೆಲವು ಪೊಲೀಸರನ್ನು ಪ್ರಶಂಸಿಸಿದ್ದಾರೆ. ಇವೆಲ್ಲವುದರ ನಡುವೆ ಬೆಲೆ ಏರಿಕೆ, ಬಡತನದ ವಿಚಾರವನ್ನು ಕೆಲವು ನೆಟ್ಟಿಗರು ಮುಂದಿಟ್ಟಿದ್ದಾರೆ. ಮಹಿಳೆಯರು ತರಕಾರಿ ಕದ್ದಿರುವುದು ನಿಜವೇ ಆಗಿದ್ದರೆ, ಅವರ ಬಡತನದ ಬಗ್ಗೆ ಚಿಂತಿಸಬೇಕು. ಪ್ರಸ್ತುತ ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡವರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
