ಆಟವಾಡುತ್ತಿದ್ದ ಮಕ್ಕಳು ಸೂಟ್‌ಕೇಸ್ ಒಂದನ್ನು ನೋಡಿ ಕುತೂಹಲದಿಂದ ಸೂಟ್‌ಕೇಸ್ ತೆರೆದಾಗ ಅದರಲ್ಲಿ ಮಹಿಳೆಯೊಬ್ಬರ ರುಂಡ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ.
ಪಾಲ್ಘಾರ್ ಜಿಲ್ಲೆಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುರುವಾರ ಸಂಜೆ ಪಿರ್ಕುಂಡ ದರ್ಗಾ ಸಮೀಪದಲ್ಲಿ ಸೂಟ್‌ಕೇಸ್ ಪತ್ತೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಕಾರ್ಯಕರ್ತೆ ಶವ ಸೂಟ್‌ಕೇಸ್‌ನಲ್ಲಿ ಪತ್ತೆ
ಸ್ಥಳೀಯ ಮಕ್ಕಳು ಸೂಟ್‌ಕೇಸ್ ಅನ್ನು ನೋಡಿದ್ದು, ಕುತೂಹಲದಿಂದ ಸೂಟ್‌ಕೇಸ್ ತೆರೆದಿದ್ದಾರೆ. ಈ ವೇಳೆ ಮಹಿಳೆಯ ಕತ್ತರಿಸಿದ ಶಿರ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಸದ್ಯ ಸಾಕ್ಷ್ಯಗಳ ಸಂಗ್ರಹಕ್ಕಾಗಿ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿದ್ದಾರೆ ಎಂದು ಮಾಂಡ್ವಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗಿಲ್ಲ, ತನಿಖೆ ನಡೆಯುತ್ತಿದೆ.
