ಪ್ರತಿಭಟನಾನಿರತ ಕುಸ್ತಿಪಟುಗಳು ಕಾಂಗ್ರೆಸ್ ಮಡಿಲಲ್ಲಿ ಕುಳಿತಿರುವುದರಿಂದ ಬಹುತೇಕ ಪ್ರಮುಖ ಕುಸ್ತಿಪಟುಗಳು ಅವರನ್ನು ಬೆಂಬಲಿಸುತ್ತಿಲ್ಲ ಎಂದು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್ ಸಿಂಗ್, ”ಕುಸ್ತಿಪಟುಗಳು ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿರುವುದರಿಂದ ಪ್ರಮುಖ ಹಲವು ಪ್ರತಿಭಟನಾಕಾರರು ಅವರನ್ನು ಬೆಂಬಲಿಸುತ್ತಿಲ್ಲ. ಈಗ, ಅವರೊಂದಿಗೆ ಹೋರಾಡಲು ನಾನು ನೇಣು ಹಾಕಿಕೊಳ್ಳಬೇಕೇ?” ಎಂದು ಪ್ರಶ್ನಿಸಿದ್ದಾರೆ.
“ಕುಸ್ತಿಯ ಅಭಿವೃದ್ಧಿ ಕಳೆದ 11 ತಿಂಗಳುಗಳಿಂದ ಕುಂಠಿತವಾಗಿದೆ. ನ್ಯಾಯಯುತ ಚುನಾವಣೆ ನಡೆದು ನಮ್ಮ ಪಾಳಯದಿಂದ ಸಂಜಯ್ ಸಿಂಗ್ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾದರು. ಇತರ ಅಭ್ಯರ್ಥಿಯು 33 ಮತಗಳಿಂದ ಸೋತರು. ಸಂಜಯ್ ಸಿಂಗ್ ಅವರು ಕ್ರೀಡೆಯ ಸುಧಾರಣೆಗೆ ಉತ್ತಮ ಕೆಲಸ ಮಾಡುವ ಗುರಿಯನ್ನು ಹೊಂದಿದ್ದಾರೆ” ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದರು.
“ಕುಸ್ತಿಪಟುಗಳು ಇನ್ನೂ ಪ್ರತಿಭಟನೆ ನಡೆಸುತ್ತಿದ್ದರೆ ಮತ್ತು ಸಾಕ್ಷಿ ಮಲಿಕ್ ಅವರು ಕ್ರೀಡೆಗೆ ವಿದಾಯ ಹೇಳಿದರೆ, ನಾನು ಅವರಿಗೆ ಏನು ಸಹಾಯ ಮಾಡಬಹುದು ಎಂದು ಪ್ರಶ್ನಿಸಿದ ಬ್ರಿಜ್, ಅವರು ತಿಂಗಳಿನಿಂದ ನನ್ನ ಮೇಲೆ ನಿಂದನೆ ಮಾಡುತ್ತಿದ್ದಾರೆ. ಹಾಗೆ ಮಾಡಲು ಅವರಿಗೆ ಯಾರು ಬೆಂಬಲ ನೀಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಿ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಭಾರತದ ಅಗ್ರಗಣ್ಯ ಕುಸ್ತಿಪಟುಗಳು ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಹಲವು ತಿಂಗಳುಗಳ ಕಾಲ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ನಂತರ ಅವರು ಜೂನ್‌ನಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ದೂರುಗಳಲ್ಲಿ ಅನುಚಿತವಾಗಿ ಸ್ಪರ್ಶಿಸುವುದು, ಮಹಿಳೆಯರ ಖಾಸಗಿ ಭಾಗಗಳ ಮೇಲೆ ಕೈ ಹಾಕುವುದು ಸೇರಿದಂತೆ ಹಲವು ಆರೋಪಗಳು ದಾಖಲಾಗಿವೆ.
ತನ್ಅನ ನಾಚಾರಕ್ಕೆ ಇತರರನ್ನು ದೂಷಣೆಗೆ ನಿಂತಿರುವ ಫ್ಯಾಸಿಸ್ಟ್