ಹಿಂದೂ ಧರ್ಮ ಪ್ರಚಾರಕ ಪ್ರೇಮಾನಂದರಿಗೆ ತನ್ನ ಕಿಡ್ನಿ ದಾನ ಮಾಡಲು ಮುಂದಾದ ಮುಸ್ಲಿಂ ಯುವಕ

Date:

Advertisements

ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ 26 ವರ್ಷದ ಮುಸ್ಲಿಂ ಯುವಕನೊಬ್ಬ ತನ್ನ ಒಂದು ಕಿಡ್ನಿಯನ್ನು (ಮೂತ್ರಪಿಂಡ) ಹಿಂದೂ ಧರ್ಮಪ್ರಚಾರಕ ಪ್ರೇಮಾನಂದ ಗೋವಿಂದ ಶರಣ್ ‘ಪ್ರೇಮಾನಂದ ಜಿ ಮಹಾರಾಜ್’ ಅವರಿಗೆ ದಾನ ಮಾಡಲು ಮುಂದಾಗಿದ್ದಾನೆ. ಹಾಗೆಯೇ ಇದನ್ನು ಕೋಮು ಸಾಮರಸ್ಯಕ್ಕೆ ನೀಡುವ ಕೊಡುಗೆ ಎಂದು ಕರೆದಿದ್ದಾನೆ.

ಪ್ರೇಮಾನಂದ ಗೋವಿಂದ ಶರಣ್ ಅವರು ಸುಮಾರು ಎರಡು ದಶಕಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುಮಾರು 18–19 ವರ್ಷಗಳ ಹಿಂದೆ ಎರಡೂ ಮೂತ್ರಪಿಂಡಗಳು ವಿಫಲವಾದ ಕಾರಣ, ಅವರು ನಿಯಮಿತ ಡಯಾಲಿಸಿಸ್ ಮೂಲಕ ಬದುಕುಳಿದಿದ್ದಾರೆ. ಅವರ ಜೀವನ ಮತ್ತು ಸಂದೇಶದಿಂದ ಪ್ರೇರಿತರಾಗಿರುವುದಾಗಿ ಹೇಳಿಕೊಂಡಿರುವ ಇತಾರ್ಸಿಯ ಆನ್‌ಲೈನ್ ಮತ್ತು ಕಾನೂನು ಸಲಹೆಗಾರ ಆರಿಫ್ ಖಾನ್ ಚಿಶ್ತಿ ಅವರು ಆಗಸ್ಟ್ 20ರಂದು ಪ್ರೇಮಾನಂದರಿಗೆ ತಮ್ಮ ಕಿಡ್ನಿ ನೀಡುವುದಾಗಿ ಜಿಲ್ಲಾಧಿಕಾರಿ ಮತ್ತು ಪ್ರೇಮಾನಂದ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನು ಓದಿದ್ದೀರಾ? ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪತ್ನಿಗೆ ಫೋನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ

Advertisements

“ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅಜ್ಮೇರಿ ಮತ್ತು ಅಮೀರ್ ಖುಸ್ರೋ ಬಗ್ಗೆ ಮಹಾರಾಜ್ ಜಿ ತುಂಬಾ ಗೌರವದಿಂದ ಮಾತನಾಡಿದ ರೀಲ್ ಅನ್ನು ನಾನು ನೋಡಿದೆ. ಸುಲಭವಾಗಿ ದ್ವೇಷ ಹರಡುವ ಸಮಯದಲ್ಲಿ ಅವರು ಸಹೋದರತ್ವಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ಅನಿಸಿತು. ಆ ಮನೋಭಾವವನ್ನು ಜೀವಂತವಾಗಿಡಲು ಅವರ ದೀರ್ಘಾಯುಷ್ಯ ಅತ್ಯಗತ್ಯ” ಎಂದು ಚಿಶ್ತಿ ಅಭಿಪ್ರಾಯಿಸಿದ್ದಾರೆ.

ಸೂಫಿ ಸಂಪ್ರದಾಯವನ್ನು ಪಾಲಿಸುವ ಚಿಶ್ತಿ, ಮೊದಲು ತಮ್ಮ ಪತ್ನಿಯೊಂದಿಗೆ ಕಿಡ್ನಿ ದಾನದ ಬಗ್ಗೆ ಮಾತನಾಡಿರುವುದಾಗಿಯೂ ಹೇಳಿದ್ದಾರೆ. “ನಾನು 2023ರಲ್ಲಿ ನನ್ನ ತಾಯಿಯನ್ನು ಕಳೆದುಕೊಂಡೆ, ಅದರಿಂದಾಗಿ ನಾನು ಬಹುತೇಕ ನಿರ್ಜೀವ ಎನಿಸಿತು. ನಾನು ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದು, ನನ್ನ ಸಂಗಾತಿಯ ಬಳಿ ಹಿಂದೂ ಧಾರ್ಮಿಕ ಬೋಧಕರ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಕಿಡ್ನಿ ದಾನ ಮಾಡುವ ಬಗ್ಗೆ ಮಾತನಾಡಿದೆ. ದೇಶದಲ್ಲಿ ಸಮುದಾಯ ಸೌಹಾರ್ದತೆ ಮತ್ತು ಏಕತೆಯನ್ನು ಉತ್ತೇಜಿಸುವಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಗುರುವಿನ ಜೀವನಕ್ಕಿಂತ ನನ್ನ ಜೀವನ ದೊಡ್ಡದಲ್ಲ” ಎಂದು ಹೇಳಿದ್ದಾರೆ.

ಆರಿಫ್ ಖಾನ್ ಚಿಶ್ತಿಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ನಿಜವಾದ ಭಾರತ ಎಂದು ನೆಟ್ಟಿಗರು ಹೇಳಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X