ಯುವತಿಯನ್ನು ಅಪಹರಿಸಿ, ಕಾರಿನಲ್ಲಿ ಅತ್ಯಾಚಾರ ಎಸಗಿ, ಆಕೆಯನ್ನು ಕಾಮುಕರು ರಸ್ತೆಬದಿ ಎಸೆದುಹೋಗಿರುವ ಅಮಾನುಷ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.
ಪುಣೆ ಜಿಲ್ಲೆಯ ಲೋನಾವಾಲ ಬೆಟ್ಟದ ಮಾವಲ್ ಪ್ರದೇಶದ ತುಂಗರ್ಲಿಯಲ್ಲಿ ಘಟನೆ ನಡೆದಿದೆ. ಲೋನಾವಾಲ ಬೆಟ್ಟದ ಬಳಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಪ್ರಕರಣ ಸಂಬಂಧ ತುಂಗರ್ಲಿ ನಿವಾಸಿಯಾಗಿರುವ 35 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದು, “ಶುಕ್ರವಾರ ರಾತ್ರಿ ಮಾವಲ್ ಪ್ರದೇಶದಲ್ಲಿರುವ ನನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಕಾರೊಂದು ನನ್ನ ಬಳಿ ಬಂದು ನಿಂತುಕೊಂಡಿತು. ಕಾರಿನಲ್ಲಿದ್ದ ಮೂವರು ಬಲವಂತವಾಗಿ ನನ್ನನ್ನು ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಆರೋಪಿಯನ್ನು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಲಿಸುವ ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಂಗರ್ಲಿಯ ವಿವಿಧ ಸ್ಥಳಗಳಿಗೆ ತನ್ನನ್ನು ಕರೆದೊಯ್ದು ಪದೇ ಪದೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಬಳಿಕ, ಶನಿವಾರ ಬೆಳಗಿನ ಜಾವ ರಸ್ತೆಬದಿಯಲ್ಲಿ ನನ್ನನ್ನು ಎಸೆದು ಹೋಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿರುವಾಗಿ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಪೊಲೀಸರು ಬಿಎನ್‌ಎಸ್ ಸೆಕ್ಷನ್ 64(2)(m) ಮತ್ತು 138 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.