ಅಲ್ಲಾಹ್ ಎಂದು ಪ್ರಾರ್ಥಿಸಬೇಡ. ‘ಜೈ ಶ್ರೀರಾಮ್’ ಎಂದು ಜಪಿಸಬೇಕು ಎಂದು ಒತ್ತಾಯಿಸಿ ಮೂವರು ಮಕ್ಕಳಿಗೆ ಕೋಮುವಾದಿ ವಿಕೃತ ಯುವಕನೊಬ್ಬ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಅಮೃತಸಾಗರದ ತಲಾಬ್‌ನಲ್ಲಿ ಘಟನೆ ನಡೆದಿದೆ. ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಿಳಿದ ಯುವಕ, ಅವರನ್ನು ‘ಜೈ ಶ್ರೀರಾಮ್’ ಎಂದು ಕೂಗುವಂತೆ ಒತ್ತಾಯಿಸಿದ್ದಾನೆ. ನಿರಾಕರಿಸಿದ ಮಕ್ಕಳಿಗೆ ಚಪ್ಪಲ್ಲಿಯಲ್ಲಿ ಹೊಡೆದಿದ್ದಾನೆ.
ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರತ್ನಂ ಜಿಲ್ಲೆಯ ಮನಕ್ ಚೌಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ.
In MP's Ratlam, 3 Muslim children were assaulted and forced to say 'Jai Shri Ram' by a man. They were hit with slippers repeatedly even though the children kept saying JSR. The man hits them when the children say 'Allah'. pic.twitter.com/ltGmFd0erF
— Waquar Hasan (@WaqarHasan1231) December 6, 2024
ಘಟನೆಯು ಅಮೃತಸಾಗರದ ತಲಾಬ್‌ನಲ್ಲಿ ಪ್ರದೇಶದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.