ವಿದೇಶಿಯರನ್ನು ಆಹ್ವಾನಿಸಿ, ವಿಷಕಾರಿ ಹಾವುಗಳ ವಿಷವನ್ನು ಬಳಸಿಕೊಂಡು ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆರೋಪದಲ್ಲಿ ಬಿಗ್ಬಾಸ್ ಸ್ಪರ್ಧಿ, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು ನೋಯ್ಡಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಹಾವಿನ ಪ್ರಕರಣದಲ್ಲಿ ಎಲ್ವಿಶ್ ಯಾದವ್ ವಿರುದ್ಧ ನೋಯ್ಡಾ ಪೊಲೀಸರು ಸೆಕ್ಟರ್ 38ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಭಾನುವಾರ ಎಲ್ವಿಶ್ ಅವರನ್ನು ವಿಚಾರಣೆಗೆ ಕರೆಯಲಾಗಿದ್ದು, ಅಲ್ಲಿಯೇ ಬಂಧಿಸಲಾಗಿದೆ. ಅದಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
#WATCH | On the arrest of YouTuber and Bigg Boss OTT 2 winner Elvish Yadav, DCP Noida Vidya Sagar Mishra says, “A case under Wild Life Protection Act-1972, was filed (against Elvish Yadav and others). Today he was called for interrogation and was produced before the court by… https://t.co/gAVCgePVs3 pic.twitter.com/7eHHwffpsR
— ANI (@ANI) March 17, 2024
2023ರ ನವೆಂಬರ್ ತಿಂಗಳಲ್ಲಿ ನೋಯ್ಡಾದಲ್ಲಿ ಆಯೋಜನೆಗೊಂಡಿದ್ದ ರೇವ್ ಪಾರ್ಟಿಗೆ ದಾಳಿ ನಡೆಸಿ ನೋಯ್ಡಾ ಪೊಲೀಸರು ಐವರನ್ನು ಬಂಧಿಸಿದ್ದರು. ಈ ವೇಳೆ ಐದು ನಾಗರ ಹಾವು ಸೇರಿ ಒಟ್ಟಾಗಿ ಒಂಬತ್ತು ಹಾವುಗಳನ್ನು ಮತ್ತು ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನು ಓದಿದ್ದೀರಾ? ಶ್ರೀಲಂಕಾದಿಂದ 21 ಮೀನುಗಾರರ ಬಂಧನ: ಬಿಡುಗಡೆಗೆ ಒತ್ತಾಯಿಸಿ ತಮಿಳುನಾಡು ಪಕ್ಷಗಳಿಂದ ಕೇಂದ್ರಕ್ಕೆ ಒತ್ತಾಯ
ಈ ಬಂಧಿತರನ್ನು ಪೊಲೀಸರು ವಿಚಾರಣೆ ಮಾಡಿದಾಗ ಬಿಗ್ ಬಾಸ್ ಒಟಿಟಿ ಆವೃತ್ತಿಯ ವಿಜೇತ ಎಲ್ವಿಶ್ ಯಾದವ್ ಹೆಸರು ಮುನ್ನೆಲೆಗೆ ಬಂದಿತ್ತು. ಎಲ್ವಿಶ್ ಪಾರ್ಟಿಗಳಿಗೆ ನಾವು ಹಾವುಗಳನ್ನು ಸರಬರಾಜು ಮಾಡುತ್ತಿದ್ದೆವು ಎಂದು ಆರೋಪಿಗಳು ಬಹಿರಂಗಪಡಿಸಿದ್ದರು.
ಇದಾದ ಬಳಿಕ ನೋಯ್ಡಾದ ತೋಟಗಳಲ್ಲಿ ಹಾವುಗಳನ್ನು ಮತ್ತು ಹಾವಿನ ವಿಷದೊಂದಿಗೆ ಎಲ್ವಿಶ್ ಯಾದವ್ ಮತ್ತು ಕೆಲವು ದೃಶ್ಯ ನಿರ್ಮಾಣಕಾರರು ವೀಡಿಯೋ ಮಾಡುತ್ತಿದ್ದಾರೆ ಎಂದು ಪೀಪಲ್ ಫಾರ್ ಅನಿಮಲ್ (ಪಿಎಫ್ಎ) ಸಂಘಟನೆಯ ಗೌರವ್ ಗುಪ್ತ ದೂರು ನೀಡಿದ್ದರು.
#ElvishYadav arrested by @noidapolice in connection with a probe into the suspected use of snake venom as drugs at a party.
Self proclaimed Ram Bhakts bring biggest shame to my religion. https://t.co/zfkun8geFc pic.twitter.com/ha9pAyOVXQ— The DeshBhakt 🇮🇳 (@TheDeshBhakt) March 17, 2024
ಇತ್ತೀಚೆಗಷ್ಟೇ ಎಲ್ವಿಶ್ ಯಾದವ್ ಮತ್ತು ಅವರ ಸಹಚರರು ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿಯಲ್ಲಿ ಹಾವಿನ ವಿಷ ಗ್ರಂಥಿಗಳನ್ನು ತೆಗೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ಸುಮಾರು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.