ಉತ್ತರ ಪ್ರದೇಶದ ಪಶ್ವಿಮ ಗ್ರೇಟರ್ ನೋಯ್ಡಾ ನಗರದಲ್ಲಿನ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಗುರುವಾರ (ಜುಲೈ 13) ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಅಗ್ನಿ ದುರಂತ ಸಂಭವಿಸಿದೆ.
ಜನರು ಮೂರನೇ ಮಹಡಿಯಿಂದ ಜಿಗಿದು ಬೆಂಕಿಯಿಂದ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಗ್ರೇಟರ್ ನೋಯ್ಡಾ ನಗರದ ಹೌಸಿಂಗ್ ಸೊಸೈಟಿಯಾದ ಗೌರ್ ಸಿಟಿ 1 ನಲ್ಲಿರುವ ಗ್ಯಾಲಾಕ್ಸಿ ಪ್ಲಾಜಾ ವಾಣಿಜ್ಯ ಸಂಕೀರ್ಣ ಅನೇಕ ಅಂಗಡಿಗಳು, ಫುಡ್ ಕೋರ್ಟ್‌ಗಳು, ರೆಸ್ಟೋರೆಂಟ್‌ಗಳು, ಜಿಮ್ ಇತ್ಯಾದಿಗಳನ್ನು ಹೊಂದಿದೆ.
ಸಂಕೀರ್ಣದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿಮಾಚಲ ಪ್ರದೇಶ ಸೇರಿ ಉತ್ತರ ಭಾರತದಲ್ಲಿ ಭಾರೀ ಮಳೆ, ಪ್ರವಾಹಕ್ಕೆ 41 ಸಾವು
ಗ್ರೇಟರ್ ನೋಯ್ಡಾ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಇಬ್ಬರು ವ್ಯಕ್ತಿಗಳು ಮೂರನೇ ಮಹಡಿಯ ಗಾಜುಗಳನ್ನು ಒಡೆದು ಜಿಗಿಯುತ್ತಿರುವ ದೃಶ್ಯ ಕಂಡು ಬಂದಿದ್ದು ಎಲ್ಲೆಡೆ ವೈರಲ್ ಆಗಿದೆ.
ಕಳೆದ ಎಪ್ರಿಲ್‌ನಲ್ಲಿ, ಗ್ರೇಟರ್ ನೋಯ್ಡಾ ನಗರದ ಗೌರ್ ಸಿಟಿ 2ರ 14 ನೇ ಅವೆನ್ಯೂನಲ್ಲಿರುವ ಫ್ಲಾಟ್ಗೆ ದೀಪದಿಂದ ಬೆಂಕಿ ಹೊತ್ತಿಕೊಂಡು ಪಕ್ಕದ ಫ್ಲಾಟ್ಗಳಿಗೂ ಹಾನಿಯಾದ ಘಟನೆ ವರದಿಯಾಗಿತ್ತು.