ಕ್ರಿಸ್‌ಮಸ್ ಹಬ್ಬ | ಸೌಹಾರ್ದತೆಯ ಸೋಗು ಹಾಕಿದ ಕೋಮುವಾದಿ ಮೋದಿ

Date:

Advertisements

ಭಾರತದಲ್ಲಿ ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ಕೋಮುವಾದ, ಕೋಮುದ್ವೇಷವು ಹಲವು ಪಟ್ಟುಗಳಷ್ಟು ಹೆಚ್ಚಾಗಿದೆ. ಧಾರ್ಮಿಕ ದ್ವೇಷವು ಮಾನವ ದ್ವೇಷ, ಹಿಂಸಾಚಾರ, ಹತ್ಯೆ, ಅಸಹಿಷ್ಣುತೆಯ ಅತ್ಯಂತ ತುತ್ತ ತುದಿಯನ್ನು ತಲುಪಿದೆ. ಭಾರತದಲ್ಲಿ ಕೇವಲ ಮುಸ್ಲಿಮರು ಮಾತ್ರವೇ ಕೋಮುಹಿಂಸೆಗಳಿಗೆ ಬಲಿಯಾಗುತ್ತಿಲ್ಲ. ಕ್ರೈಸ್ತರೂ ಧಾರ್ಮಿಕ ದ್ವೇಷಕ್ಕೆ ಸಿಕ್ಕಿಕೊಂಡು ನಲುಗುತ್ತಿದ್ದಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರ ಮತ್ತು ಕಿರುಕುಳಗಳು ಆತಂಕಕಾರಿಯಾಗಿ ಏರುತ್ತಿವೆ. ತಾನೊಬ್ಬ ಪ್ರಧಾನಿ ಎಂಬುದನ್ನೂ ಮರೆತಿರುವ ಮೋದಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ತುಚ್ಛ ಭಾಷಣಗಳನ್ನು ಮಾಡಿದ್ದರು. ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ, ದ್ವೇಷ ಪೂರಿತ ಹೇಳಿಕೆಗಳನ್ನು ನೀಡಿದ್ದರು. ಒಂದು ಮತದ ವಿರುದ್ಧ ಮತ್ತೊಂದು ಸಮುದಾಯದಲ್ಲಿ ಅಹಿಷ್ಣುತೆಯನ್ನು ಬಹಿರಂಗವಾಗಿಯೇ ಬಿತ್ತಿದ್ದರು.

ಈಗ, ಇದೇ ಮೋದಿ ಅವರು ಕ್ರಿಶ್ಚಿಯನ್ ಸಮುದಾಯ ಕ್ರಿಸ್‌ಮಸ್‌ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದೆಹಲಿಯಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಆಯೋಜಿಸಿದ್ದ ಕ್ರಿಸ್‌ಮಸ್ ಹಬ್ಬದಲ್ಲಿ ಭಾಗಿಯಾಗಿದ್ದ ಮೋದಿ, ತಾನೊಬ್ಬ ಸಾಮರಸ್ಯವಾದಿ ಎಂಬಂತೆ ಪೋಸು ಕೊಟ್ಟಿದ್ದಾರೆ. ”ಸಮಾಜದಲ್ಲಿ ಹಿಂಸಾಚಾರವನ್ನು ಹರಡುವ ಯತ್ನಗಳು ನಡೆದಾಗ ನನಗೆ ನೋವಾಗುತ್ತದೆ. ಲಾರ್ಡ್ ಕ್ರಿಸ್ತನ ಬೋಧನೆಗಳಾದ ಪ್ರೀತಿ, ಸಾಮರಸ್ಯ, ಸಹೋದರತ್ವವನ್ನು ನಾವು ಅನುಸರಿಸಬೇಕು. ಈ ಮನೋಭಾವವನ್ನು ಬಲಪಡಿಸಲು ನಾವೆಲ್ಲರೂ ಕೆಲಸ ಮಾಡುವುದು ಮುಖ್ಯ” ಎಂದು ಮೋದಿ ಸಹಬಾಳ್ವೆಯ ಮಾತುಗಳನ್ನಾಡಿದ್ದಾರೆ.

image 34

ಆದರೆ, ಇದೇ ಮೋದಿ ಅವರ ಆಡಳಿತದಲ್ಲಿ, ಇದೇ ಬಿಜೆಪಿ ಸರ್ಕಾರಗಳ ಆಳ್ವಿಕೆಯಲ್ಲಿ, ಇದೇ ಹಿಂದುತ್ವವಾದಿಗಳು ಕ್ರಿಶ್ಚಿಯನ್ ಮಿಷನರಿಗಳು, ಚರ್ಚ್‌ಗಳ ಮೇಲೆ ದಾಳಿ ಹೆಚ್ಚಾಗಿದೆ. ಅಲ್ಪಸಂಖ್ಯಾತರ ವಿರೋಧಿ ಭಾವನೆಯನ್ನು ಪ್ರಚೋದಿಸುತ್ತಿರುವ ಹಿಂದುತ್ವ ರಾಷ್ಟ್ರೀಯತೆಯ ನಕಲಿ ಕಲ್ಪನೆಯು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಮೇಲಿನ ಕಿರುಕುಳವನ್ನು ಹೆಚ್ಚಿಸಿದೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನಂತಹ ಧಾರ್ಮಿಕ ಕೋಮುವಾದಿ ಸಂಘಟನೆಗಳು ನಿರಂತರವಾಗಿ ಕೋಮುದ್ವೇಷವನ್ನು ಪ್ರಚೋದಿಸುತ್ತಿವೆ.

Advertisements

ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್)ನ ಅಂಕಿಅಂಶಗಳ ಪ್ರಕಾರ, 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಹೆಚ್ಚಾಗಿವೆ. ಮೋದಿ ಮೊದಲ ಬಾರಿಗೆ ಪ್ರಧಾನಿಯಾದ ವರ್ಷ 2014ರ ಜುಲೈನಿಂದ ಡಿಸೆಂಬರ್‌ವರೆಗೆ ಭಾರತದಲ್ಲಿ ಕ್ರಿಶ್ಚಿಯನ್ನರ ಮೇಲಿನ 127 ದಾಳಿ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ, ಕ್ರಿಶ್ಚಿಯನ್ನರ ವಿರುದ್ಧ 327 ಹಿಂಸಾತ್ಮಕ ದೌರ್ಜನ್ಯಗಳು ನಡೆದಿವೆ. 2022ರಲ್ಲಿ, 115 ದೈಹಿಕ ಹಿಂಸೆ ಮತ್ತು 357 ಬೆದರಿಕೆ (ಒಟ್ಟು 486) ಪ್ರಕರಣಗಳು ದಾಖಲಾಗಿವೆ. ಗಂಭೀರ ವಿಚಾರವೆಂದರೆ, ಈ ವರ್ಷ, 2024ರ ಜನವರಿಯಿಂದ ನವೆಂಬರ್ ಅಂತ್ಯದವರೆಗೆ ಬರೋಬ್ಬರಿ 745 ದಾಳಿ ಪ್ರಕರಣಗಳು ದಾಖಲಾಗಿವೆ.

ಇವುಗಳಲ್ಲಿ, ಅನೇಕ ಘಟನೆಗಳಲ್ಲಿ ಚರ್ಚುಗಳು ಮತ್ತು ಕ್ರಿಶ್ಚಿಯನ್ ಸಂಸ್ಥೆಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. 2021ರಲ್ಲಿ, ದೇಶಾದ್ಯಂತ ಕನಿಷ್ಠ 15 ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ. 2022ರಲ್ಲಿ, ಹಿಂದುತ್ವ ಕೋಮುವಾದಿಗಳು ದೆಹಲಿಯ ಚರ್ಚ್‌ ಸೇರಿದಂತೆ ಹಲವಾರು ಚರ್ಚ್‌ಗಳ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿವೆ. 2023ರ ಮೇನಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ, ಅದನ್ನೇ ನೆಪವಾಗಿಟ್ಟುಕೊಂಡು ಸುಮಾರು 200ಕ್ಕೂ ಹೆಚ್ಚು ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ವರದಿ ಓದಿದ್ದೀರಾ?: ಲೇಖಕಿ ಬಾನು ಮುಷ್ತಾಕ್ ಅವರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಹಿರಂಗ ಪತ್ರ

ಇಷ್ಟೆಲ್ಲ ಹಿಂಸಾಚಾರ, ದೌರ್ಜನ್ಯಗಳು ನಡೆಯುತ್ತಿದ್ದರೂ ಮೋದಿ ನೇತೃತ್ವದ ಸರ್ಕಾರದ ಆಡಳಿತವು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ. ಮಾತ್ರವಲ್ಲ, ಈ ದಾಳಿಗಳನ್ನು ಬಿಜೆಪಿಯೇ ಪ್ರಾಯೋಜಿಸಿದೆ ಎಂಬ ಆರೋಪಗಳೂ ಇವೆ. ಹಿಂದುತ್ವ ಕೋಮುವಾದಿ ಸಂಘಟನೆಗಳಿಗೆ ಬಿಜೆಪಿ ಸರ್ಕಾರವು ಮೌನ ಬೆಂಬಲ ನೀಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ, 13 ರಾಜ್ಯಗಳಲ್ಲಿ ಜಾರಿಗೆ ಬಂದ ‘ಮತಾಂತರ-ವಿರೋಧಿ ಕಾನೂನು’ಗಳನ್ನು ಅಸ್ತ್ರವನ್ನಾಗಿಸಿ, ದುರುಪಯೋಗ ಮಾಡಿಕೊಂಡು ಕ್ರಿಶ್ಚಿಯನ್ನರ ಮೇಲೆ ದಾಳಿಗಳು ಹೆಚ್ಚಾಗಿವೆ.

2021ರಲ್ಲಿ, ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಸಂಸ್ಥೆಯು ತನ್ನ ‘ನಿರ್ದಿಷ್ಟವಾಗಿ ಕಾಳಜಿ ವಹಿಸಬೇಕಾದ ದೇಶಗಳ ಪಟ್ಟಿ’ಯಲ್ಲಿ ಭಾರತವನ್ನು ಸೇರಿಸಿದೆ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ‘ವ್ಯವಸ್ಥಿತ ಮತ್ತು ಅತಿಶಯ’ದ ದಾಳಿ, ಹಿಂಸಾಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಹೀಗಾಗಿಯೇ, ಸೋಮವಾರ (ಡಿ.23) ಕ್ರಿಸ್‌ಮಸ್ ಹಬ್ಬದಲ್ಲಿ ಭಾಗಿಯಾಗಿದ್ದ ಮೋದಿ ಅವರಿಗೆ ಹಲವಾರು ಮುಖಂಡರು ಜಂಟಿಯಾಗಿ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ತುಷಾರ್ ಗಾಂಧಿ, ಅನ್ನಿ ರಾಜಾ, ಫಾದರ್ ಸೆಡ್ರಿಕ್ ಪ್ರಕಾಶ್, ಜಾನ್ ದಯಾಳ್ ಹಾಗೂ ಶಬ್ನಮ್ ಹಶ್ಮಿ ಸೇರಿದಂತೆ 200ಕ್ಕೂ ಹೆಚ್ಚು ಮುಖಂಡರು ಸಹಿ ಹಾಕಿದ್ದಾರೆ. ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಗಳ ಆತಂಕಕಾರಿ ಏರಿಕೆಯನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

5 COMMENTS

    • ಕುರ್ .. ಆನ್, ಹ..ದೀಸ್, ಸು..ನ್ನಾ…ಇವೆಲ್ಲವೂ ಹಿಂಸೆಯನ್ನು, ಸಾಮಾಜಿಕ ಅಸಹಿಷ್ಣುತೆ ಮತ್ತು ದ್ವೇಷವನ್ನು ಪ್ರಚೋದಿಸುವ ಗ್ರಂಥಗಳು.

  1. ಕುರ್ .. ಆನ್, ಹ..ದೀಸ್, ಸು..ನ್ನಾ…ಇವೆಲ್ಲವೂ ಹಿಂಸೆಯನ್ನು, ಸಾಮಾಜಿಕ ಅಸಹಿಷ್ಣುತೆ ಮತ್ತು ದ್ವೇಷವನ್ನು ಪ್ರಚೋದಿಸುವ ಗ್ರಂಥಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X