ಸತ್ಯವದು
ಚಕ್ರಾಧಿಪತಿಯ ಹೊಸ ದಿರಿಸು ಧರಿಸಿದಡೆ
ಬೀದಿಯಲಿ ಬೆತ್ತಲೆಯ ಮೆರವಣಿಗೆ
ದಿರಿಸೇ ನಾಗರೀಕತೆಯ ಮೊದಲೆಜ್ಜೆ
ಬಿಡುಬೀಸಿನ ಹಿನ್ನಡೆ
ಪಂದ್ಯವಾಗದೆ ಜಟ್ಟಿ ಕಾಳಗ
ವಿಜಯ ಸದಾ ಒಂದೆಡೆ
ಹರಾಜಾದಳು ನಿತ್ಯ ಆಕೆ
ಬಂಡವಾಳಶಾಹಿಯ ತೆಕ್ಕೆಗೆ
ಅಂಗಾಂಗ ಅಂಶ ಮರುನಾಮಕರಣ
ಗಿಣಿದನಿಯ ಒಡತಿಯಾಕೆ
ಕಾಶ್ಮೀರದಲ್ಲವಳ ಸ್ಪರ್ಶಿಸಿ
ಸಮ್ಮತಿಯ ಆಯ್ಕೆಯೇ ಅವಳಿಗಿಲ್ಲ.
ವಿವಸ್ತ್ರಾವಸ್ಥೆಯ ಆಕ್ರಂದನ
ತುಂಡು ಬಟ್ಟೆಯೇ ವಿಶಾಲ ಅಂಬರ
ಕೃಷ್ಣ ಚೆಲ್ಲಿದ್ದಾನೆ ತುಟಿ ಕೊಂಕಿಸಿ ನಗೆಯ
ಕಾಳಗಗಳೆಲ್ಲ ಕಪೋಲ ಕಲ್ಪಿತ ಜಿಹಾದ್ ನೊಡನೆ
ಘೋರಯುದ್ಧಗಳೆಲ್ಲ ಮರೆಯಾಗಿವೆ ಮಾತಿನ ಮರೆಯ ಓಘದಲ್ಲಿ:
ಬೇಟಿ ಬಚಾವೋ ಬೇಟಿ ಪಡೋ
ಬೇಟಿ ಕೋ ಬಚಾವೋ ಬೇಟೆ ಕೋ ಪಡಾವೋ!
ಜೀವಕೋಶಗಳವು ತಡೆಯಿಲ್ಲದೆ ದೇಹವೆಲ್ಲವ ಆಕ್ರಮಿಸಿ
ಕ್ಯಾನ್ಸರ್ ಪದನಾಮ ಪಡೆಯಲೊಲ್ಲ
ಮಕ್ಕಳಿವರಮ್ಮ ವಿನಾಶ ಪುತ್ರರು
ಮಾತೆಯ ನಗ್ನ ಮೆರವಣಿಗೆಗಾರರು
ಭಾರತಮಾತೆ
ವಸಾಹತುಶಾಹಿ ದೊರೆ ಅತ್ಯಾಚಾರಿ
ಪುತ್ರರಾದರೆ….?
ಇಂಗ್ಲಿಷ್ ಮೂಲ: Rukhaya. M. K.
ಅನುವಾದ:ರಾಜಲಕ್ಷ್ಮೀ.ಎನ್.ಕೆ, ಮಂಗಳೂರು