‘ಎನ್ಇಪಿ ಅಧಿಕೃತವಾಗಿ ರದ್ದಾಗಿದೆಯೇ?’ ಬಗೆಹರಿಯದ ಬಿಕ್ಕಟ್ಟುಗಳು

Date:

Advertisements

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ‘ನಾವು ಎನ್‌ಇಪಿ 2020ಯನ್ನು ತಿರಸ್ಕರಿಸಿದ್ದೇವೆ. ಹೀಗಾಗಿ ಎನ್‌ಸಿಎಫ್ 2023ಯನ್ನು ಅನುಸರಿಸುವ ಅಗತ್ಯವಿಲ್ಲ, ಎನ್‌ಸಿಎಫ್ 2005ನ್ನು ಅನುಸರಿಸುತ್ತೇವೆ’ ಎಂದು ಹೇಳಿದ್ದಾರೆ.

ಈಗಿರುವ ಪ್ರಶ್ನೆ ಎಂದರೆ ಎನ್ಇಪಿ 2020 ಅಧಿಕೃತವಾಗಿ ರದ್ದಾಗಿದೆಯೇ ಎಂಬುದರ ಜೊತೆಗೆ, ರಾಜ್ಯ ಶಿಕ್ಷಣ ನೀತಿ ರೂಪಿಸಲು ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳತ್ತ ಒಂದು ನೋಟ.

  1. ಕರ್ನಾಟಕ ಸರಕಾರ ಎನ್‌ಇಪಿ 2020ಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿಲ್ಲ. ಅದು ಗೆಜೆಟ್ ನೋಟಿಫಿಕೇಶನ್ ಆಗಲಿಲ್ಲ. ವಿಧಾನ ಮಂಡಲದಲ್ಲಿಯೂ ಪ್ರಕಟವಾಗಿಲ್ಲ. ಮುಖ್ಯಮಂತ್ರಿಗಳು ಮತ್ತು ಸಚಿವರ ಹೇಳಿಕೆ ಆಧರಿಸಿ ಎನ್‌ಇಪಿ ರದ್ದು ಅಂತ ಹೇಳಿದರೆ ಇದು ರದ್ದಾದಂತಲ್ಲ.

ಇಂದಿಗೂ ಎನ್‌ಸಿಎಫ್ 2023ಯ ಮಾರ್ಗಸೂಚಿಯ ಅನುಸಾರ ತಯಾರಾದ 26 ಪೊಸಿಷನ್ ಪೇಪರ್ಸ್ ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣದಲ್ಲಿ ದೊರಕುತ್ತದೆ. ಈ ಪೇಪರ್ ಗಳನ್ನು ಅಧಿಕೃತವಾಗಿ ತಿರಸ್ಕರಿಸದೇ ಇರುವವರೆಗೂ ಎನ್‌ಸಿಎಫ್ 2023 ಅನ್ವಯವಾಗುತ್ತದೆ. ಎನ್‌ಸಿಎಫ್ 2005 ಅನ್ವಯವಾಗುವುದಿಲ್ಲ. ಇದು ಆರ್‍‌ಎಸ್ಎಸ್ ಸಿದ್ಧಾಂತಗಳ ದಸ್ತಾವೇಜು. ಇದನ್ನು ತಿರಸ್ಕರಿಸದೇ ಎನ್‌ಇಪಿ ರದ್ದು ಮಾಡಲು ಸಾಧ್ಯವಿಲ್ಲ

Advertisements
  1. ಉನ್ನತ ಶಿಕ್ಷಣದಲ್ಲಿ ಎಲ್‌ಎಂಎಸ್ ವ್ಯವಸ್ಥೆಯನ್ನು ಕೂಡಲೆ ರದ್ದುಗೊಳಿಸಬೇಕು. ಇದು ಬಹುಕೋಟಿ ಹಗರಣ ಮಾತ್ರವಲ್ಲ, ಅನಗತ್ಯವಾಗಿ ಇಡೀ ಪದವಿ ಶಿಕ್ಷಣವನ್ನು ಆನ್‌ಲೈನ್ ವ್ಯವಸ್ಥೆಗೆ ಬದಲಾಯಿಸುವ ಉದ್ದೇಶವಿದೆ. ಆದರೆ ಇದರ ಒಟ್ಟಾರೆ ರೂಪುರೇಷೆಗಳು ಸಹ ಕಳಪೆಯಾಗಿವೆ. ಉದಾಹರಣೆಗೆ ಆ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವ ಪಠ್ಯಗಳ ಗುಣಮಟ್ಟವನ್ನು ಯಾರು ಪರಿಶೀಲಿಸುತ್ತಾರೆ? ಯಾರು ಅನುಮೋದಿಸುತ್ತಾರೆ? ಇದಕ್ಕೆ ಅಧಿಕೃತತೆಯ ಮಾನ್ಯತೆ ಇದೆಯೇ? ಇದಕ್ಕೆ ಅಗತ್ಯವಾದ ನಿರಂತರ ಅಂತರ್ಜಾಲ ಮತ್ತು ವಿದ್ಯುತ್ ಸೌಲಭ್ಯವನ್ನು ಯಾರು ಒದಗಿಸುತ್ತಾರೆ? ಇನ್ನೂ ಹಲವಾರು ಕಾರಣಗಳಿಂದ ಎಲ್‌ಎಂಎಸ್ ಒಂದು ಮರೆಮೋಸವಾಗಿದೆ. ಇದು ಚಾಲ್ತಿಯಲ್ಲಿರುವವರೆಗೂ ಎನ್‌ಇಪಿ ತಿರಸ್ಕರಿಸಲು ಸಾಧ್ಯವಿಲ್ಲ.
  2. ಶಾಲಾ ಶಿಕ್ಷಣದಲ್ಲಿ ಎನ್‌ಇಪಿ ಜಾರಿಗೊಳಿಸಲು ಹಿಂದಿನ ಬಿಜೆಪಿ ಸರಕಾರವು ಮದನ್ ಗೋಪಾಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈಗ ಆ ಸಮಿತಿಯ ಸ್ಟೇಟಸ್ ಏನು? ಅದು ತನ್ನ ಶಿಫಾರಸ್ಸುಗಳನ್ನು ಕೊಟ್ಟಿದೆಯೇ? ಈ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವವರೆಗೂ ಎನ್‌ಇಪಿ ರದ್ದುಗೊಳಿಸುವುದು ಕಷ್ಟ.
  3. ಈಗ ಬಹುಶಿಸ್ತೀಯ ವ್ಯಾಸಂಗದ ಕುರಿತು ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆಗಳನ್ನು ಇಡಬೇಕು.
  4. ಮುಖ್ಯವಾಗಿ ಎನ್‌ಇಪಿ ಅಡಿಯಲ್ಲಿ ಒಂದು ಬ್ಯಾಚ್ ಈಗಾಗಲೇ ಎರಡನೇ ವರ್ಷದ ನಾಲ್ಕನೇ ಸೆಮಿಸ್ಟರ್ ನಲ್ಲಿದ್ದಾರೆ. ಅವರ ಭವಿಷ್ಯವೇನು? ಅವರು ನಾಲ್ಕು ವರ್ಷ ಓದಬೇಕೆ? ಬೇಡವೇ?
    ಈ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು. ಮತ್ತು ತೀರ್ಮಾನ ತಡವಾಗದಂತೆ ಎಚ್ಚರ ವಹಿಸಲು ಈ ಕೂಡಲೇ ಒಂದು ಸಮಿತಿಯನ್ನು ರಚಿಸಿ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಹದಿನೈದು ದಿನಗಳ ಯೋಜನೆಯ ನೀಲನಕ್ಷೆ ಕೊಡಲು ಸೂಚಿಸಬೇಕು.
  5. ಕನಿಷ್ಠ ಒಂದು ಪಠ್ಯಕ್ರಮ ಚೌಕಟ್ಟಿನ ಅಗತ್ಯವಿದೆ. ಎನ್‌ಸಿಎಫ್ 2023 ತಿರಸ್ಕರಿಸಿದರೆ ಕೂಡಲೆ ಸಮರೋಪಾದಿಯಲ್ಲಿ ಎಸ್‌ಸಿಎಫ್ 2023 (ರಾಜ್ಯ ಪಠ್ಯ ಕ್ರಮ ಚೌಕಟ್ಟು) ರೂಪಿಸಿ ಪ್ರಕಟಿಸಿ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಎನ್‌ಸಿಎಫ್ 2023 (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು) ಅನ್ವಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಅದು ಹೇಗೆ ಈಗ ವಿಸರ್ಜನೆಗೊಂಡಿರುವ ಎನ್‌ಸಿಎಫ್ 2005ನ್ನು ಅನುಸರಿಸುತ್ತಾರೆ?
    ನಾಳೆ ಕೇಂದ್ರ ಸರಕಾರ ತಾನು ವಿಸರ್ಜಸಿದ ಎನ್‌ಸಿಎಫ್ 2005 ಅಡಿಯಲ್ಲಿ ರೂಪುಗೊಂಡ ಪಠ್ಯಪುಸ್ತಕಗಳಿಗೆ ಮಾನ್ಯತೆ ನೀಡದೇ ಹೋದರೆ? ಮತ್ತೊಂದೆಡೆ ಕೇಂದ್ರ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಎನ್‌ಇಪಿ ಶಿಫಾರಸ್ಸಿನ ಅಡಿಯಲ್ಲಿ ದಿನನಿತ್ಯ ಹೊಸ ದಸ್ತಾವೇಜುಗಳನ್ನು, ಯೋಜನೆಗಳನ್ನು ಪ್ರಕಟಿಸುತ್ತಿದೆ. ಈಗ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಏನು ಮಾಡಬೇಕು? ಅದನ್ನು ಅಳವಡಿಸಿಕೊಳ್ಳಬೇಕೇ? ಒಂದು ವೇಳೆ ಒಪ್ಪಿಕೊಂಡರೆ ಎನ್‌ಇಪಿ ರದ್ದು ಮಾಡಲು ಸಾಧ್ಯವಿಲ್ಲ. ಹಾಗಿದ್ದರೆ ಬದಲಿ ಯೋಜನೆಗಳೇನು? ರಾಜ್ಯ ಸರಕಾರ ಯೋಚಿಸಿದಂತಿಲ್ಲ. ಇದು ಹೀಗೆ ಮುಂದುವರೆದರೆ ಶೈಕ್ಷಣಿಕ ಬಿಕ್ಕಟ್ಟು ಉಂಟಾಗುತ್ತದೆ.
  6. ರಾಜ್ಯ ಶಿಕ್ಷಣ ನೀತಿ ರೂಪಿಸಲು ‘ರಾಜ್ಯ ಶಿಕ್ಷಣ ನೀತಿ ಆಯೋಗ’ ರಚಿಸಬೇಕು. ಇದಕ್ಕೆ ಶಾಸನಬದ್ಧ ಅಧಿಕಾರ ಕೊಡಬೇಕು. ಮತ್ತು ಈ ಆಯೋಗವು 2024ರ ಮೇ ತಿಂಗಳ ಒಳಗೆ ತನ್ನ ವರದಿ ಮಂಡಿಸಬೇಕು.

ಇಷ್ಟೊಂದು ಜವಾಬ್ದಾರಿಗಳನ್ನು ಮುಂದಿಟ್ಟುಕೊಂಡು ಕೇವಲ ಬಾಯಿ ಮಾತಿನಲ್ಲಿ ಎನ್‌ಇಪಿ ರದ್ದುಗೊಳಿಸಲು ಸಾಧ್ಯವೇ ಇಲ್ಲ. ಈ ಕರೆಗಂಟೆ ಸರ್ಕಾರಕ್ಕೆ ಕೇಳಿಸುತ್ತಿದೆಯೇ?

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

ಚಿತ್ರದುರ್ಗ | ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಸಬಲೀಕರಣ; ಸಚಿವ ಡಿ.ಸುಧಾಕರ್ ಅಭಿಮತ

"ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ...

Download Eedina App Android / iOS

X