ಮನುಷ್ಯನ ಪ್ರತಿಷ್ಠೆ ಪ್ರತಿಪಾದನೆ ಧರ್ಮವೊ – ಮನುಷ್ಯತ್ವ ಪ್ರತಿಪಾದನೆ ಧರ್ಮವೋ..?

Date:

Advertisements
ಧರ್ಮದ ಸಾರವಾದ, ಸಮಸಂಸ್ಕೃತಿಯ ಹಿನ್ನೆಲೆಯ ಮನುಷ್ಯತ್ವಧಾರಿತ ಸಮ ಸಂಸ್ಕೃತಿ ಪ್ರತಿಪಾದನೆ ಮಾಡುವ ಈ ಭಾರತದ ಮೂಲ ನಿವಾಸಿಗಳ ವಾರಸುದಾರಿಕೆಯ ಮಣ್ಣಿನಲ್ಲಿ ಬುದ್ಧ- ಬಸವ- ಬಸವಾದಿ ಶರಣ ಶರಣೆಯರು- ಕನಕದಾಸ- ಸೂಫಿ ಸಂತರು - ಅಂಬೇಡ್ಕರ್- ನಾರಾಯಣ ಗುರು- ಪೆರಿಯಾರ್ ಪ್ರತಿಪಾದನೆ ಮಾಡಿದ್ದು.

ಸತ್ಯ ಹೇಳಿದವನು ವಿವಾದವನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ – ತಲೆಗೆ ಹೊಡೆದಂತೆ – ಕಣ್ಣಿಗೆ ಕಂಡರೂ ಕಾಣುತ್ತಲೇ ಇಲ್ಲ ಎಂದು ಸುಳ್ಳನ್ನು ಹೇಳಿ ಆ ಸುಳ್ಳಿನ ಮೇಲೆಯೇ ಬೃಹತ್ ಗಾಳಿ ಗೋಪುರವನ್ನು ಕಟ್ಟಿ ಮೆರೆಯುವವರು ರಾಷ್ಟ್ರಪ್ರೇಮಿಯಾಗುತ್ತಾನೆ. ಏಕೆಂದರೆ ವಾಸ್ತವದಲ್ಲಿ ‘ಧರ್ಮ’ ಎಂಬುದು ಮನುಷ್ಯತ್ವದ ಸಂಕೇತ – ಮನುಷ್ಯನ ಸಂಕೇತವಲ್ಲ.

ಮನುಷ್ಯ- ಮನುಷ್ಯತ್ವವನ್ನು ರೂಢಿಸಿಕೊಂಡಾಗ ಮಾತ್ರ ಅವನು ಧರ್ಮದ ಪರಿಮಿತಿಗೆ ಒಳಪಡುತ್ತಾನೆ. ಇದಲ್ಲದೆ ಕೇವಲ ‘ದೇವರ’ ಹೆಸರಿನಲ್ಲಿ ಸ್ವಾರ್ಥ ಸಾಧನೆಗಾಗಿ ಮನುಷ್ಯತ್ವವನ್ನು ಮರೆತು ಹುಟ್ಟಿನಿಂದ ಸಾಯುವವರೆಗೂ ಅನೇಕ ಸಂಕೋಲೆಗಳಿಗೆ ತಾನು ಮಾತ್ರ ಪರಮೋಚ್ಚ ಮನುಷ್ಯನಾಗಿ ಬದುಕಿದರೆ – ಇದರ ಪರಮೋಚ್ಚ ಸ್ಥಾನವನ್ನು ಉಳಿಸಿಕೊಳ್ಳಲು ತಾನೇ ಸೃಷ್ಟಿಸಿದ ದೇವರ ಮೂಲಕ ಧರ್ಮವನ್ನು ಪ್ರತಿಪಾದನೆ ಮಾಡುವುದಾದರೆ ಅದು ಧರ್ಮವೇ ಅಲ್ಲ. ಅದು ಕೇವಲ ಸ್ವಾರ್ಥಪರ ಬೂಟಾಟಿಕೆ.

ಧರ್ಮವನ್ನು ಸ್ವಾರ್ಥ ಸಾಧನೆಗಾಗಿ ಕೆಲವೇ ಕೆಲವರು ‘ಮನುಷ್ಯ’ ನ ಸಂಕೇತವನ್ನಾಗಿಸಿಕೊಂಡು – ‘ದಯೆಯೇ ಧರ್ಮದ ಮೂಲವಯ್ಯ’ ಎನ್ನುವ ಸಿದ್ಧಾಂತದ ಆಧಾರದಲ್ಲಿ ರೂಪಿತ ಗೊಂಡಿರುವ ಧರ್ಮದ ನಿಜ ಸ್ವರೂಪದ ‘ಮನುಷ್ಯತ್ವ’ವನ್ನು ಸಂಪೂರ್ಣವಾಗಿ ನಾಶಪಡಿಸಿ ಹಾಗೂ ಅದು ಪ್ರತಿಪಾದನೆ ಮಾಡುವ ‘ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು’ ಎಂಬ ಸಮಾನತೆಯ ತತ್ವ ಸಿದ್ಧಾಂತವನ್ನು ಅಲ್ಲಗಳೆದಿದ್ದೇವೆ. ನಮ್ಮ ಧರ್ಮದಲ್ಲಿ ತಲೆಯಿಂದ ಹುಟ್ಟಿದವರಿಗೆ- ಕೈಯಿಂದ ಹುಟ್ಟಿದವರಿಗೆ- ಹೊಟ್ಟೆಯಿಂದ ಹುಟ್ಟಿದವರಿಗೆ- ಹಾಗೂ ಪಾದದಿಂದ ಹುಟ್ಟಿದವರಿಗೆ ಬಹುಮುಖ್ಯವಾಗಿ ಹುಟ್ಟುವ ಜಾಗದಲ್ಲಿ ಹುಟ್ಟಿದ ಈ ಭಾರತದ ಮೂಲ ನಿವಾಸಿಗಳಾದ ಪಂಚಮರಿಗೆ ‘ಧಾರ್ಮಿಕ ಹಾಗೂ ಸಾಮಾಜಿಕ ಶ್ರೇಷ್ಠತೆ ಅಥವಾ ಸಾಮಾಜಿಕ ಹಾಗೂ ಧಾರ್ಮಿಕ ಕನಿಷ್ಠತೆಗಳು’ ಉಂಟಾದದ್ದು ‘ಮನುಷ್ಯತ್ವ’ ಎಂಬ ಧರ್ಮದಿಂದಲ್ಲ. ಆದರೆ ಧರ್ಮವನ್ನೇ ‘ಮನುಷ್ಯರು’ ತಮ್ಮದಾಗಿಸಿಕೊಂಡವರಿಂದ ಬಹುದೊಡ್ಡ ಅನ್ಯಾಯವಾಗಿದೆ ಎಂಬುದಕ್ಕೆ ಜ್ವಲಂತ ನಿದರ್ಶನಗಳೇ ಇವೆ.

Advertisements

ಈ ಅಮಾನುಷ ನೀತಿಯ ವಿರುದ್ಧದ, ಅಂದರೆ ಮನುಷ್ಯ ತಾನು ಉಜ್ವಲವಾಗಿ ಬದುಕಲು ದೇವರ ಹೆಸರಿನಲ್ಲಿ ರೂಪಿಸಿಕೊಂಡ ಎಂಬ ‘ಪುರಾಣ’ ಕಲ್ಪಿತ ಅಹಂ ಮತ್ತು ಧರ್ಮಧರಿತ ಮನುಷ್ಯತ್ವ ಎಂಬ ‘ವಾಸ್ತವ’ ಆಧಾರಗಳ ನಡುವೆ ಸಿಲುಕಿಕೊಂಡಿರುವ ಮನುಷ್ಯ ಹಾಗೂ ಮನುಷ್ಯತ್ವದ ನಡುವಿನ ಚರ್ಚೆ ಆರಂಭಗೊಂಡಿದೆ ಬುದ್ಧನಿಂದ. ಇದನ್ನು ತಳಸ್ಪರ್ಶಯವಾಗಿ ಮುಂದೆ ತಂದವನು ಬಸವಣ್ಣ ಹಾಗೂ ಬಸವಾದಿ ಶರಣ ಶರಣೆಯರು. ನಂತರದ್ದು ಇವರಿಬ್ಬರ ವಾರಸುದಾರಿಕೆ ಪಡೆದಂತೆ ಈ ಭಾರತದ ಮಣ್ಣಿನಲ್ಲಿ ಜನಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು.

ಇವರು ಶತಶತಮಾನಗಳಿಂದ ತಲೆಯಲ್ಲಿ ಬೇರೂರು ಇದ್ದ ಏಕಮುಖ ಚಿಂತನೆಯ ಮನುಷ್ಯನಲ್ಲಿ- ಬಹುಮುಖ ಚಿಂತನೆಯ ‘ಮನುಷ್ಯತ್ವ’ ಎಂಬ ನಿಜ ಧರ್ಮದ ಸಾರವನ್ನು ಪ್ರತಿಪಾದನೆ ಮಾಡಿದವರು. ಈ ನೆಲದಲ್ಲಿ ನಿಜ ಮಾನವ ಧರ್ಮ ಸಂಸ್ಥಾಪಕರೇ ಆದರು.

ಧರ್ಮದ ಸಾರವಾದ, ಸಮಸಂಸ್ಕೃತಿಯ ಹಿನ್ನೆಲೆಯ ಮನುಷ್ಯತ್ವಧಾರಿತ ಸಮ ಸಂಸ್ಕೃತಿ ಪ್ರತಿಪಾದನೆ ಮಾಡುವ ಈ ಭಾರತದ ಮೂಲ ನಿವಾಸಿಗಳ ವಾರಸುದಾರಿಕೆಯ ಮಣ್ಣಿನಲ್ಲಿ ಬುದ್ಧ- ಬಸವ- ಬಸವಾದಿ ಶರಣ ಶರಣೆಯರು- ಕನಕದಾಸ- ಸೂಫಿ ಸಂತರು – ಅಂಬೇಡ್ಕರ್- ನಾರಾಯಣ ಗುರು- ಪೆರಿಯಾರ್ ಪ್ರತಿಪಾದನೆ ಮಾಡಿದ್ದು.

ಇವರುಗಳು ಧರ್ಮದೊಳಗಿನ ಮನುಷ್ಯತ್ವದ ಪರವಾಗಿ ಮಾತನಾಡಿ ಸಮಾನತೆಯ ಧರ್ಮ ಪ್ರತಿಷ್ಠಾಪನೆ ಮಾಡಿದರು – ಹಾಗೆಯೇ ಮನುಷ್ಯತ್ವವನ್ನು ಮನುಷ್ಯ ಕೇಂದ್ರಿತವನ್ನಾಗಿ ಮಾಡಿಕೊಂಡವರ ವಿರುದ್ಧ ಕಠಿಣ ಶಬ್ದಗಳಲ್ಲಿ ಖಂಡಿಸಿದರು, ಮಾತನಾಡಿದರು. ಮಾತನಾಡುವಂತೆಯೂ ಮಾಡಿದರು.

ಇದನ್ನು ಓದಿ ಸಾಮಾಜಿಕ ನ್ಯಾಯ ಶಾಶ್ವತವಾಗಿ ಅರಳಲಿ: ಪತ್ರ ಮುಖೇನ ಬಿಜೆಪಿಗೆ ಉದಯನಿಧಿ ಸ್ಟಾಲಿನ್ ತಿರುಗೇಟು

ಮನುಷ್ಯತ್ವ ಧರ್ಮವನ್ನು ಪ್ರತಿಪಾದನೆ ಮಾಡಿದವರು ನಿಧನರಾಗಿದ್ದರೂ ಸಹ ನಡುವೆ ಬೌದ್ಧಿಕವಾಗಿ ಜೀವಂತವಾಗಿದ್ದಾರೆ. ಈ ಭೂಮಿಯಲ್ಲಿ ಯುಗಯುಗಗಳಿಗೂ ಜೀವಂತವಾಗಿಯೇ ಇರುತ್ತಾರೆ. ಆದರೆ, ಮನುಷ್ಯನ ಮೂಲಕ ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮ ಪ್ರತಿಪಾದನೆ ಮಾಡಿದವರು ನಮ್ಮ ನಡುವೆ ಇವತ್ತು ವಿವಿಧ ಬಣ್ಣಗಳಲ್ಲಿ ಇದ್ದರೂ ಸಹ ತಮ್ಮ ಪಾರಂಪರಿಕವಾಗಿ ಅಂಟಿರುವ ಅಭೌತಿಕತೆಯಿಂದ ಯುಗ ಯುಗಗಳು ಕಳೆದರೂ ಸಹ ಸತ್ತಂತೆ ಇರುತ್ತಾರೆ .

‘ದೈಹಿಕವಾಗಿ ಜೀವಂತ ಇದ್ದು – ಬೌದ್ಧಿಕವಾಗಿ ಸತ್ತಂತೆ ಇರುವವರದು ಧರ್ಮವಾಗಬಾರದು, ದೈಹಿಕವಾಗಿ ಸತ್ತರೂ ನಮ್ಮ ನಡುವೆ ಬೌದ್ಧಿಕವಾಗಿ ಜೀವಂತ ಇರುವವರು ಪ್ರತಿಪಾದನೆ ಮಾಡಿದ್ದು ಧರ್ಮವಾಗಬೇಕು’ ಇಂತಹ ಮನುಷ್ಯತ್ವದ ಧರ್ಮವನ್ನು ಪ್ರತಿಪಾದನೆ ಮಾಡಿದ ಯಾರೂ ಸಹ ಅಯೋಗ್ಯರಲ್ಲ.

ಸೊಸಲೆ
ಎನ್ ಚಿನ್ನಸ್ವಾಮಿ ಸೋಸಲೆ
+ posts

ಪ್ರಾಧ್ಯಾಪಕ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎನ್ ಚಿನ್ನಸ್ವಾಮಿ ಸೋಸಲೆ
ಎನ್ ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X