ನಾವೇನಾಗಿದ್ದೇವಿಂದು
ಪ್ರಾಯಶಃ
ಸದಾ ಹೀಗೆ ಇದ್ದೇವೆ..
ವಿಜಯದುನ್ಮದಾದಲಿ
ದೇಹಗಳ ಮೇಲೆ
ಪ್ರಭುತ್ವದ
ಹಚ್ಚೆ ಹಚ್ಚುತ್ತಾ…
ಮಾನವತೆ ತೊಗಲು ಸವರಿದ್ದಷ್ಟೇ
ಆಳಕ್ಕಿಳಿಯಲಿಲ್ಲ…
ಅತ್ಯಾಚಾರ,
ಕೊಲೆ,
ಚಿತ್ರಹಿಂಸೆ,
ಸುಟ್ಟು ಅಳಿಸಿಯೇ ಬಿಡುವ
ಹಪಹಪಿಕೆಯ
ಅಗ್ಗಿಷ್ಟಿಕೆ ನಮ್ಮೊಳಗೆ
ಸಹಸ್ರಮಾನದುದ್ದಕ್ಕೂ
ಜೀವಂತ ಇರಿಸಿದವರು ಉರಿಸಿದವರು
ಅರ್ಚಕರಲ್ಲ, ಪಠಾಣರಲ್ಲ
ತಿದಿಮಾಡಿ ಪೋಷಿಸಿದವರು
ನಮ್ಮೊಳಗಿನ ನಾವು
ಬಿಟ್ಟುಬಿಡಿ ನಮ್ಮನು
ಹುಡುಕಿ ಪರರ
ನೆಲದುದ್ದಗಲಕ್ಕೂ
ಒಂದೇ ನಾವು
ನಮ್ಮನ್ನು ಬಿಟ್ಟು ಉಳಿದವರಾರು
ಬಿಟ್ಟುಬಿಡಿ ನಮ್ಮ
ಹುಡುಕಿ ಪರರ
ಮೂಲ :ಇಂಗ್ಲಿಷ್- ಪ್ರೊ.ಜಿ.ಜೆ.ವಿ.ಪ್ರಸಾದ್ (ಕವಿ, ಜೆಎನ್ಯುವಿನ ನಿವೃತ್ತ ಇಂಗ್ಲಿಷ್ ಪ್ರೊಫೆಸರ್)
ಅನುವಾದ: ಡಾ. ರಾಜಲಕ್ಷ್ಮೀ ಎನ್ ಕೆ