ಮೋದಿ ಸರ್ಕಾರದ ಮುಖ್ಯ ಧ್ಯೇಯ, ಮನುವಾದದ ವಿಸ್ತಾರ ಮತ್ತು ವಿಕಾಸ

Date:

Advertisements

1925ರಿಂದ ಈಚೆಗೆ ಅಂದರೆ ಮನುವಾದಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ ನಂತರ ಬ್ರಾಹ್ಮಣವಾದಕ್ಕೆ ರಾಷ್ಟ್ರೀಯವಾದದ ಮುಖವಾಡ ತೊಡಿಸಲಾಗಿದೆ. ಆಶ್ಚರ್ಯ ಹಾಗೂ ದುರಂತದ ವಿಷಯವೆಂದರೆ ಮನುವಾದವನ್ನು ನೆಲೆಗೊಳಿಸಲು ಹಾಗೂ ಬಲಗೊಳಿಸಲು ಬ್ರಾಹ್ಮಣರು ಬಹುಜನರನ್ನೇ ಬಳಸಿಕೊಳ್ಳುತ್ತಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಹಿಂದೆ ಒಮ್ಮೆ ಲೇಹ್‌ನಲ್ಲಿ ಮಾತನಾಡುವಾಗˌ “ಇದು ವಿಸ್ತರಣಾವಾದದ ಯುಗವಲ್ಲ ಆದರೆ ಅಭಿವೃದ್ಧಿಯ ಸಿದ್ಧಾಂತವಾಗಿದೆ” ಎಂದಿದ್ದರು. ಈ ತರಹದ ಮಾತುಗಳು ಮೋದಿಯವರು ಚಿಕ್ಕಂದಿನಲ್ಲಿ ಸಂಘದ ಶಾಖೆಗಳಲ್ಲಿ ಕಲಿತವುಗಳು. ಬ್ರಾಹ್ಮಣ, ಕ್ಷತ್ರಿಯ ಹಾಗೂ ಬನಿಯಾಗಳ ಸಂಯುಕ್ತ ಆಡಳಿತ ನೀತಿಯು ಯಾವತ್ತೂ ವಿಸ್ತರಣೆ ಹಾಗೂ ಅಭಿವೃದ್ಧಿಯ ಸಿದ್ಧಾಂತವಾಗಲಾರದು. ವಿಸ್ತರಣೆ ಮತ್ತು ಅಭಿವೃದ್ಧಿ ಇವು ಬ್ರಾಹ್ಮಣ-ಬನಿಯಾ-ಕ್ಷತ್ರಿಯರ ಸಂಯುಕ್ತ ಆಡಳಿತದಲ್ಲಿ ಯಾವತ್ತೂ ಸಾರ್ವತ್ರೀಕರಣಗೊಳ್ಳದ ಅವರ ಸ್ವಹಿತಾಸಕ್ತಿಯ ಸರಕುಗಳು. ಈ ಮೂರು ವರ್ಣದವರ ಸ್ವಹಿತಾಸಕ್ತಿಯ ಪರಮ ಉದ್ದೇಶ ಹಾಗೂ ಆ ಕುರಿತ ಕಾರ್ಯಗಳಿಂದ ಈ ದೇಶವು ಇತಿಹಾಸದಲ್ಲಿ ಸಾವಿರಾರು ವರ್ಷ ಪರಕೀಯರ ಆಳ್ವಿಕೆಗೆ ದೂಡಲ್ಪಟ್ಟಿದೆ. ಈ ಮೂರು ವರ್ಣಗಳ ಸಂಯುಕ್ತ ಆಡಳಿತವು ಸದಾ ಬ್ರಾಹ್ಮಣವಾದದ ವಿಸ್ತರಣೆ ಮತ್ತು ಅಭಿವೃದ್ದಿಯ ಸಿದ್ಧಾಂತದಂತೆ ಅನುಸರಿಸಿದೆ.

1925ರಿಂದ ಈಚೆಗೆ ಅಂದರೆ ಮನುವಾದಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ ನಂತರ ಬ್ರಾಹ್ಮಣವಾದಕ್ಕೆ ರಾಷ್ಟ್ರೀಯವಾದದ ಮುಖವಾಡ ತೊಡಿಸಲಾಗಿದೆ. ಆಶ್ಚರ್ಯ ಹಾಗೂ ದುರಂತದ ವಿಷಯವೆಂದರೆ ಮನುವಾದವನ್ನು ನೆಲೆಗೊಳಿಸಲು ಹಾಗೂ ಬಲಗೊಳಿಸಲು ಬ್ರಾಹ್ಮಣರು ಬಹುಜನರನ್ನೇ ಬಳಸಿಕೊಳ್ಳುತ್ತಾರೆ. ಶೋಷಣೆಯ ಹಾಗೂ ವಂಚನೆಯ ಶತಶತಮಾನಗಳ ನೋವಿನ ಅನುಭವದ ಹೊರತಾಗಿಯೂ ಇಂದು ಬ್ರಾಹ್ಮಣರ ಯಜಮಾನಿಕೆಯ ಸಂಘಕ್ಕೆ ಶಕ್ತಿಯನ್ನು ತುಂಬುತ್ತಿರುವವರು ಮಾತ್ರ ಇದೆ ಬಹುಜನರು. ಮನುವಾದದ ವಿಸ್ತಾರ ಮತ್ತು ವಿಕಾಸದ ಫಲಾನುಭವಿಗಳು ಮಾತ್ರ ಬ್ರಾಹ್ಮಣರು. ಭಾರತವು ಸ್ವಾತಂತ್ರ್ಯ ಹೊಂದಿˌದೇಶದ ಆಡಳಿತ ಚುಕ್ಕಾಣಿ ಬ್ರಾಹ್ಮಣ-ಬನಿಯಾಗಳ ಕೈಸೇರಿದ ಮೇಲೆ ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ತನ್ನ ಭೂ ಪ್ರದೇಶವನ್ನು 86,268 ಚದರ ಕಿಲೋಮೀಟರ್‌ಗೆ ವಿಸ್ತರಿಸಿಕೊಂಡಿದೆ. ಚೀನಾ ಭಾರತದ 45,000 ಚದರ ಕಿಲೋಮೀಟರ್ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ.

Advertisements
ಚೀನಾ ಗಡಿ

ಬ್ರಾಹ್ಮಣ ನಿಯಂತ್ರಿತ ಭಾರತದ ಆಡಳಿತಾವಧಿಯಲ್ಲಿ ನಮ್ಮ ಉಭಯ ನೆರೆ ರಾಷ್ಟ್ರಗಳು ತಮ್ಮ ಗಡಿಯನ್ನು ವಿಸ್ತರಿಸಿಕೊಂಡಿವೆ. ಇಲ್ಲಿನ ಮನುವಾದಿ ಆಡಳಿತಗಾರರು ಹೊರಗಿನ ಪ್ರಪಂಚದೊಂದಿಗೆ ಎಂದಿಗೂ ಹೋರಾಡಿದ ದೃಷ್ಟಾಂತಗಳಿಲ್ಲ ಮತ್ತು ಅವು ನಮ್ಮ ನೆರೆಯ ದೇಶಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ಆದರೆ, ದೇಶದೊಳಗೆ ಮನುವಾದಿಗಳು ತಮ್ಮ ಜಾತಿಯ ಹಿತಾಸಕ್ತಿಯ ಸಿದ್ಧಾಂತಗಳ ವಿಸ್ತರಣೆ ಮತ್ತು ಅಭಿವೃದ್ಧಿ ಎರಡನ್ನು ಹೆಚ್ಚು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಇದು ಕಳೆದ ಒಂದು ದಶಕದ ಮೋದಿ ಆಡಳಿತದಲ್ಲಿ ಇನ್ನೂ ಹೆಚ್ಚು ತೀವ್ರವಾಗಿ ನಡೆದಿದೆ. 1980ರಲ್ಲಿ, ದೇಶದ ಶೇ.10ರಷ್ಟು ಮೇಲ್ಜಾತಿಯ ಜನರ ಸಂಪತ್ತು ದೇಶದ ಒಟ್ಟು ಸಂಪತ್ತಿನ 31% ಆಗಿತ್ತು. ಅದು 2012ರಲ್ಲಿ 55%ಕ್ಕೆ ಏರಿತು. ಮೋದಿಯವರ ಅವಿರತ ಶ್ರಮದಿಂದ 2018ರಲ್ಲಿ ಅದು ಶೇ.60ಕ್ಕೆ ಏರಿಕೆಯಾಗಿದೆ. ಇತಿಹಾಸದುದ್ದಕ್ಕೂ ಈ ಮಣ್ಣಿನ ಮೇಲೆ ಪಾರುಪತ್ಯ ಹೊಂದಿದ್ದರೂ ಅಫ್ಘಾನ್, ಇರಾನ್, ಅರೇಬಿಯಾ ಅಥವಾ ಮಧ್ಯ ಏಷ್ಯಾದಲ್ಲಿ ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಳ್ಳುವ ಧೈರ್ಯ ಈ ಮನುವಾದಿಗಳು ಮಾಡಲಿಲ್ಲ.

ಆದರೆ, ಭಾರತದೊಳಗೆ ಹಿಂದುಳಿದ ವರ್ಗಗಳ ಭೂಮಿಯನ್ನು ಲೂಟಿ ಮಾಡಿˌ ಕಸಿದುಕೊಂಡು ಜಮೀನ್ದಾರರು ಮತ್ತು ಭೂ ಮಾಫಿಯಾಗಳಾಗಿ ಮನುವಾದಿಗಳು ಮೆರೆಯುತ್ತಿದ್ದಾರೆ. ಆರಂಭದಲ್ಲಿ ಭೂಹೀನರಾಗಿದ್ದ ಈ ಆರ್ಯನ್ನರು ಸತ್ತಾಗ ನದಿ ಅಥವಾ ನೀರಿರುವ ದಡಗಳಲ್ಲಿ ಇವರ ಶವಗಳನ್ನು ಸುಡುವ ಪದ್ದತಿ ಹುಟ್ಟಿಕೊಂಡಿತು. ಆನಂತರ ಬೂದಿಯನ್ನು ಬಿಡುವ ಮೂಲಕ ಈ ಜನರು ಮಧ್ಯ ಏಷ್ಯಾದ ತಮ್ಮ ನಂಟನ್ನು ಗಟ್ಟಿಯಾಗಿಸಿ ಈ ಮಣ್ಣಿಗೆ ದ್ರೋಹ ಬಗೆಯುತ್ತಲೇ ಬಂದಿದ್ದಾರೆ. ಭಾರತವನ್ನು ಎಂದಿಗೂ ತಮ್ಮ ತಂದೆಯ ದೇಶ ಎನ್ನದ ಈ ಮನುವಾದಿಗಳು ಇದನ್ನು ಮಾತೃಭೂಮಿ ಎಂದು ಮಾರ್ಮಿಕವಾಗಿ ಕರೆಯುತ್ತಾರೆ. ಏಕೆಂದರೆ ಇವರಿಗೆ ಜನ್ಮ ನೀಡಿದ ತಾಯಿ ಮಾತ್ರ ಭಾರತೀಯಳು, ತಂದೆ ಮಧ್ಯ ಪ್ರಾಚ್ಯದವ. ಜನಸಂಖ್ಯೆಯಲ್ಲಿ ಶೇಕಡ 15ರಷ್ಟಿರುವ ಮೇಲ್ಜಾತಿಯವರುˌ ದೇಶದ ಸಂಪತ್ತಿನಲ್ಲಿ ಶೇ.41ರಷ್ಟು ಸಿಂಹಪಾಲು ಆಸ್ತಿಯನ್ನು ಹೊಂದಿದ್ದಾರೆ. ಶೇಕಡ 50ರಷ್ಟು ಜನಸಂಖ್ಯೆ ಹೊಂದಿರುವ ಇತರ ಹಿಂದುಳಿದ ಜಾತಿಗಳ ಒಬಿಸಿಗಳು ಶೇಕಡ 31ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಜನಸಂಖ್ಯೆಯ 23% ರಷ್ಟಿರುವ ಪರಿಶಿಷ್ಟ ವರ್ಗಗಳ ಜನರ ಹತ್ತಿರ 7.6%ರಷ್ಟು ಆಸ್ತಿ ಇದೆ. ಜನಸಂಖ್ಯೆಯ 12%ರಷ್ಟಿರುವ ಪರಿಶಿಷ್ಟ ಪಂಗಡದ ಜನರ ಹತ್ತಿರ 3.7%ರಷ್ಟು ಆಸ್ತಿ ಇದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಶ್ರೀಮಂತ ಮತ್ತು ಬಡವರ ನಡುವಿನ ಕಂದಕ ಭಯಂಕರವಾಗಿ ವೃದ್ಧಿಸಿದೆ.

ಬಿಜೆಪಿ ಸರ್ಕಾರದ ಆರ್ಥಿಕ ನೀತಿಯು ಸಂಪೂರ್ಣವಾಗಿ ಮೇಲ್ಜಾತಿಗೆ ಅನುಕೂಲ ಮಾಡುವ ಪರಮ ಗುರಿಯನ್ನು ಹೊಂದಿದೆ. 2014ರ ಮೊದಲು ದೇಶದ ಜನರಿಗೆ ಪರಿಚಯವೇ ಇಲ್ಲದ ಅದಾನಿ ಇಡೀ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದಿದ್ದಾನೆ. ಹಾಗೇ ಆತ ಶ್ರೀಮಂತರ ಪಟ್ಟಿ ಸೇರಿರುವುದರ ಹಿಂದೆ ನಡೆದಿರಬಹುದಾದ ಆರ್ಥಿಕ ಹಗರಣಗಳ ಕುರಿತು ನಿಮಗೆಲ್ಲ ತಿಳಿದೆಯಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ದುರ್ಬಲ ವರ್ಗಗಳ ಮೀಸಲಾತಿ ಸೌಲಭ್ಯ 75 ವರ್ಷಗಳಿಂದ ದ್ವೇಷಿಸುತ್ತ ಬಂದಿರುವ ಮೇಲ್ವರ್ಗದವರು ಅದನ್ನು ನೇರವಾಗಿ ತೆಗೆದು ಹಾಕಿ ಆ ವರ್ಗಗಳ ವಿರೋಧ ಕಟ್ಟಿಕೊಳ್ಳಲಾಗುತ್ತಿಲ್ಲ. ಆದರೆ ಪರೋಕ್ಷವಾಗಿ ಮೋದಿ ಆಡಳಿತವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮತ್ತು ಆ ಮೂಲಕ ಮೀಸಲಾತಿಯನ್ನು ಕೊನೆಗೊಳಿಸುವ ಕಾರ್ಯ ಯಶಸ್ವಿಯಾಗಿ ಮಾಡಿ ಮುಗಿಸಿದೆ. 13 ಪಾಯಿಂಟ್ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೊಳಿಸುವ ಹುನ್ನಾರವೂ ಮೋದಿ ಆಡಳಿತ ಹೊಂದಿದೆ. ಕೇಂದ್ರ ಸರಕಾರದ ದೊಡ್ಡ ದೊಡ್ಡ ಆಡಳಿತಾತ್ಮಕ ಹುದ್ದೆಗಳಿಗೆ ಪಾರ್ಶ್ವ ಪ್ರವೇಶದ (ಲ್ಯಾಟರಲ್ ಎಂಟ್ರಿ) ಮೂಲಕ ಮೇಲ್ವರ್ಗದವರನ್ನು ನೇಮಿಸುವ ಕಾರ್ಯ ಯಾವ ಅಳುಕೂ ಇಲ್ಲದೆ ಮೋದಿ ಆಡಳಿತ ರಾಜಾರೋಷವಾಗಿ ಮಾಡುತ್ತಿದೆ.

ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳನ್ನು ಉದ್ದೇಶಪೂರ್ವಕವಾಗಿ ನಷ್ಟಕ್ಕೊಳಪಡಿಸಿ ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಕೋಟ್ಯಾಂತರ ರೂಪಾಯಿ ಸಾಲವನ್ನು ಮನ್ನಾ ಮಾಡುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮುಖ್ಯ ಗುರಿ ಗೋಳ್ವಾಲ್ಕರ್ ಅವರ “ಬಂಚ್ ಆಫ್ ಥಾಟ್ಸ್”ನ ಬ್ರಾಹ್ಮಣ ನಿಯಂತ್ರಿತ ಆರ್ಥಿಕ ನೀತಿಯ ನೇರ ಅನುಷ್ಠಾನ ಮಾಡುವುದಾಗಿದೆ. ಮೋದಿ ಸರ್ಕಾರದ ಪ್ರತಿಯೊಂದು ಆಡಳಿತಾತ್ಮಕ ನೀತಿಗಳು ಮನುವಾದವನ್ನು ಮಾತ್ರ ವಿಸ್ತರಿಸುತ್ತಿವೆ. ಸನಾತನಿಗಳ ಸರ್ವಾಂಗೀಣ ಅಭಿವೃದ್ಧಿಯ ಗುರಿ ಹೊಂದಿರುವ ಸರ್ಕಾರದ ನೀತಿಯಿಂದ ಲಾಭ ಪಡೆಯುತ್ತಿರುವವರು ಮಾತ್ರ ಅದಾನಿ, ಅಂಬಾನಿ, ಬಾಬಾ ರಾಮದೇವ್, ರಘುರಾಜ್, ಪ್ರತಾಪ್ ಸಿಂಗ್ ಮತ್ತು ವಿಕಾಸ್ ದುಬೆ ಅಂಥವರು. ಇವರು ಶೂದ್ರರ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ತಾವು ಮಾತ್ರ ಚೇತರಿಸಿಕೊಳ್ಳುತ್ತಾರೆ. ಬನಿಯಾಯೇತರ ಹಾಗೂ ದಕ್ಷಿಣ ಭಾರತದ ಬಹುಜನ ಸಮುದಾಯದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಅವರ ಆರ್ಥಿಕ ಸಾಮ್ರಾಜ್ಯಗಳನ್ನು ನಾಶಗೊಳಿಸುವ ಕಾರ್ಯ ಮೋದಿ ಆಡಳಿತ ವ್ಯವಸ್ಥಿತವಾಗಿ ಮಾಡುತ್ತ ಬರುತ್ತಿದೆ.

ಇದನ್ನೂ ಓದಿ ಬೌದ್ಧರ ಅಹಿಂಸಾ ಮಾರ್ಗಕ್ಕೆ ಹೆದರಿ ವೈದಿಕರು ಗೋಮಾಂಸ ತಿನ್ನುವುದನ್ನು ತ್ಯಜಿಸಿದರೇ?

ಸಾವರ್ಕರ್‌ ʼಹಿಂದುತ್ವದ ಪಿತಾಮಹʼ ಎಂದು ಆರಾಧಿಸುವ ಗೋಡ್ಸೆ ಭಕ್ತರು ಗಾಂಧೀಜಿ ʼರಾಷ್ಟ್ರಪಿತʼ ಎಂದು ಯಾಕೆ ಒಪ್ಪಲ್ಲ ಗೊತ್ತೇ? 

ಬ್ರಾಹ್ಮಣನೊಬ್ಬ ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ಶೇಕಡ 47ಕ್ಕಿಂತ ಹೆಚ್ಚು ಸಂಪತ್ತು ಗಳಿಸುತ್ತಾನೆ. ಒಬಿಸಿˌ ಎಸ್‌ಸಿˌ ಎಸ್‌ಟಿಗಳು ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ಶೇಕಡ 34ರಷ್ಟು ಕಡಿಮೆ ಸಂಪತ್ತು ಗಳಿಸುತ್ತಾರೆ. ದೇಶದ ಹೊರಗೆ, ಬ್ರಾಹ್ಮಣರು ವಿಸ್ತರಣಾವಾದ ಅಥವಾ ವಿಕಾಸವಾದವನ್ನು ಅನುಸರಿಸುವುದಿಲ್ಲ. ಆದರೆ ತಮ್ಮ ಸಮುದಾಯದ ಹಿತಾಸಕ್ತಿಯನ್ನು ವಿಸ್ತರಿಸುವ ಮೂಲಕ ದೇಶದೊಳಗೆ ಅವರು ವಿಸ್ತರಣಾವಾದ ಮತ್ತು ವಿಕಾಸವಾದವನ್ನು ಚೆನ್ನಾಗಿ ಮಾಡುತ್ತಿದ್ದಾರೆ. ವಿಶ್ವ ಅಸಮಾನತೆ ದತ್ತಸಂಚಯದ ಪ್ರಕಾರ, 2024ರ ವೇಳೆಗೆ ಮೇಲ್ಜಾತಿಯವರ ಆದಾಯದಲ್ಲಿ ಶೇಕಡ 87ರಷ್ಟು ಹೆಚ್ಚಳವಾಗಲಿದೆಯಂತೆ. ಇದು ಯಾರಿಗೂ ತಿಳಿಯದಂತೆ ದೇಶದೊಳಗೆ ಮೌನ ಆರ್ಥಿಕ ವಿಸ್ತರಣಾವಾದದ ಅನುಷ್ಠಾನವನ್ನು ನರೇಂದ್ರ ಮೋದಿಯವರು ಭರದಿಂದ ಮಾಡುತ್ತಿದ್ದಾರೆ. ಇದ್ಯಾವುದರ ಅರಿವೆಯಿಲ್ಲದ ಶೂದ್ರರು ಮಾತ್ರ ಮೋದಿಗೆ ಜಯಜಯಕಾರ ಹಾಕುತ್ತಿದ್ದಾರೆ. ಇದರಿಂದ ಸಂವೇದನಾಶೀಲ ಶೂದ್ರರು ಉದ್ವೇಗಕ್ಕೊಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ದುರ್ಬಲ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಇರುವುದಿಲ್ಲ ಎಂದರೆ ಆಶ್ಚರ್ಯಪಡಬೇಕಿಲ್ಲ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಮುಂಬೈನ ಧಾರಾವಿ ಕೊಳೆಗೇರಿ ಪುನರಭಿವೃದ್ಧಿ ಎಂಬ ದೈತ್ಯ ಹಗರಣ

ಶಿಕ್ಷಣ, ಆರೋಗ್ಯ ಮುಂತಾದ ಸಮಾಜ ಕಲ್ಯಾಣದ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಹೇಗೋ ಬ್ರಾಹ್ಮಣವಾದಿಗಳು ಯಾವ ಆತಂಕವೂ ಇಲ್ಲದೆ ಶೂದ್ರರ ಶ್ರಮ, ಬೆವರಿನ ಹಣ ಹಾಗೂ ಶೂದ್ರರ ಅಪಾರವಾದ ಬೆಂಬಲದಿಂದ ದೇಶದಲ್ಲಿ ಬೃಹತ್ ರಾಮ ಮಂದಿರ ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ದೇಶದ ಬಹುಜನರ ಜೇಬಿನಲ್ಲಿ ಕಾಸಿದ್ದರೆ ಅದೇ ರಾಮ ಮಂದಿರದೊಳಗೆ ಹೋಗಿ ಬ್ರಾಹ್ಮಣ ಅರ್ಚಕನ ತಟ್ಟೆಗೆ ಅಥವಾ ಹುಂಡಿಗೆ ದಕ್ಷಿಣೆ ಹಾಕಿ ಅಲ್ಲಿರುವ ಪುರೋಹಿತರಿಗೆ ಕೈತುಂಬಾ ದಾನ ಮಾಡಬಹುದು. ಒಂದು ವೇಳೆ ಅವರ ಜೇಬಿನಲ್ಲಿ ಕಾಸಿಲ್ಲದಿದ್ದರೆ ದೇವಾಲಯದ ಹೊರಗೆ ಒಂದು ತಟ್ಟೆ ಹಿಡಿದು ಕುಳಿತುಕೊಂಡು ಅದೇ ದೇವರ ಹೆಸರಿನಲ್ಲಿ “ಅಯ್ಯಾ ದಾನ ನೀಡಿ..” ಎಂದು ಭಿಕ್ಷೆ ಬೇಡಬೇಕು. ಇದು ಮೋದಿ ಸರ್ಕಾರದ ಬ್ರಾಹ್ಮಣವಾದದ ವಿಸ್ತರಣೆ ಮತ್ತು ಅಭಿವೃದ್ದಿಯ ಸಿದ್ದಾಂತದ ಫಲಿತಾಂಶವಾಗಲಿದೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X