ಕನ್ನಡ ನೆಲದಲ್ಲೇ ಹುಟ್ಟಿ, ಕನ್ನಡ ನೆಲದಲ್ಲೇ ತನ್ನ ನೆತ್ತರು ಹರಿಸಿದವ ಟಿಪ್ಪು

Date:

Advertisements

ನಮ್ಮೆಲ್ಲರಿಗೂ ಅತೀ ಹೆಮ್ಮೆಯ ವಿಚಾರ ಅಂದರೆ ಟಿಪ್ಪು ಸುಲ್ತಾನ್ ಕರ್ನಾಟಕದವರು, ಕನ್ನಡದವರು. ಆದರೆ, ದೊರೆ ಟಿಪ್ಪುವಿನ ಕೊಡುಗೆ ಕೇವಲ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸೀಮಿತವಲ್ಲ. ಯಾಕೆ ಅಂದರೆ ಬ್ರೀಟಿಷರು ಹೆದರುತ್ತಿದ್ದ, ಬೆಚ್ಚಿ ಬೀಳುತ್ತಿದ್ದ ನಮ್ಮ ದೇಶದ ಏಕೈಕ ದೊರೆ ಹಜರತ್ ಟಿಪ್ಪು ಸುಲ್ತಾನ್. ಕನ್ನಡದೇ ನೆಲದಲ್ಲೇ ಹುಟ್ಟಿ ಕನ್ನಡದ ನೆಲದಲ್ಲೇ ತನ್ನ ನೆತ್ತರು ಹರಿಸಿದವರು ಟಿಪ್ಪು ಸುಲ್ತಾನ್. ಬ್ರೀಟಿಷರು ಎಷ್ಟೇ ಕಾಡಿದರೂ ಬೆದರದ ದೊರೆ ಟಿಪ್ಪು ಸುಲ್ತಾನ್.

ಅಂದು ಮೇ 4, 1799. ಮಟ ಮಟ ಮಧ್ಯಾಹ್ನ. ಟಿಪ್ಪು ಸುಲ್ತಾನ್ ಇನ್ನಿಲ್ಲ ಎಂದು ಗೊತ್ತಾಗಿದ್ದೇ ತಡ. ಆಗಿನ ಗವರ್ನರ್ ಜನರಲ್ ಆಗಿದ್ದ ವೆಲ್ಲಸ್ಲಿ, ಕೈಯಲ್ಲಿ ಮಧ್ಯದ ಬಾಟಲಿಯನ್ನು ಹಿಡಿದು ‘ಭಾರತದಲ್ಲಿ ನಮಗೆ ತಡೆಗೋಡೆಯಾಗಿದ್ದ ಟಿಪ್ಪು ಸುಲ್ತಾನ್ ಇನ್ನಿಲ್ಲ’ ಎಂದು ಕೂಗಿದ್ದ. ಅಷ್ಟೆ ಅಲ್ಲ, ಭಾರತದ ಈ ಹೆಣ ಇನ್ನಿಲ್ಲ ಎಂದು ಸಂಭ್ರಮಾಚರಣೆ ಮಾಡಿದ್ದ. ನಮಗೆ ಇನ್ನೇನು ಬೇಕು ಪುರಾವೆ. ಬ್ರಿಟೀಷರನ್ನೇ ಬೆಚ್ಚಿ ಬೀಳಿಸಿದ್ದ ದೊರೆ ಟಿಪ್ಪು ಸುಲ್ತಾನ್ ಅವರು ಕೇವಲ ನಮ್ಮ ಕರ್ನಾಟಕದ ಆಸ್ತಿ ಅಲ್ಲ. ನಮ್ಮ ದೇಶದ ಆಸ್ತಿ. ಇದನ್ನು ಬ್ರಿಟೀಷರೇ ಒಪ್ಪಿಕೊಂಡಿದ್ದರು ಕೂಡ. ಹಾಗಾಗಿ ವೆಲ್ಲಸ್ಲಿ ಟಿಪ್ಪು ಸುಲ್ತಾನ್ ರವರು ಸಾವನ್ನಪ್ಪಿದಾಗ ಭಾರತದ ಹೆಣ ಎಂದನೇ ಹೊರತು ಕರ್ನಾಟಕದ ಹೆಣ ಎನ್ನಲಿಲ್ಲ. ಬ್ರಿಟೀಷರೇ ಅದನ್ನು ಒಪ್ಪಿಕೊಂಡ ಮೇಲೆ ನಮಗೇನು ದಾಡಿ? ಹಾಗಾಗಿ ಹಜರತ್ ಟಿಪ್ಪು ಸುಲ್ತಾನ್ ಭಾರತದ ಆಸ್ತಿಯೇ ಹೊರತು ಕೇವಲ ಕರ್ನಾಟಕದ ಆಸ್ತಿಯಲ್ಲ.

ನಮ್ಮಲ್ಲಿ ಜಾತಿ ಎಂಬ ವಿಷಬೀಜ ಹೇಗೆ ಬಿತ್ತಿದೆ ಎಂದು ತಿಳಿಯಲು ನಮಗೆ ಇದಕ್ಕಿಂತಾ ಮತ್ತೊಂದು ಪುರಾವೆ ಬೇಕಿಲ್ಲ. ಯಾಕೆ ಅಂದರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದಿಲ್ಲ. ಮನುಷ್ಯರಲ್ಲಿ ಹಿಂದೂವನ್ನು ಕಾಣುತ್ತಾರೆ, ಮುಸ್ಮಿಂರನ್ನು ಕಾಣುತ್ತಾರೆ. ಕ್ರೈಸ್ತನನ್ನು ಕಾಣುತ್ತಾರೆ. ಟಿಪ್ಪು ವಿಷಯದಲ್ಲೂ ಇದೇ ಆಗಿದ್ದು, ಆಗುತ್ತಿರುವುದು. ಕೇವಲ ಟಿಪ್ಪು ಸುಲ್ತಾನ್ ಎಂಬ ಹೆಮ್ಮೆಯ ದೊರೆ ಮುಸ್ಲಿಮ್ ಎಂದು ಈ ರೀತಿ ದ್ವೇಷಿಸುವುದು ಸರಿಯಲ್ಲ. ನಾವು, ನಮ್ಮವರು, ನಮ್ಮ ಹೆಮ್ಮೆ ಎಂದು ಹಜರತ್ ಟಿಪ್ಪು ಸುಲ್ತಾನ್ ರವರ ಬಗ್ಗೆ ಪ್ರತಿಯಬ್ಬರೂ ಹೆಮ್ಮೆ ಪಡಲೇಬೇಕು. ಟಿಪ್ಪು ಕೇವಲ ಮುಸಲ್ಮಾನರ ಆಸ್ತಿಯಲ್ಲ, ಕೇವಲ ಕನ್ನಡದ ಹೆಮ್ಮೆಯಲ್ಲ. ಇಡೀ ನಮ್ಮ ದೇಶದ ಹೆಮ್ಮೆ. ಶಾಲಾ ದಿನಗಳಲ್ಲಿ ನಾವೆಲ್ಲರೂ ಟಿಪ್ಪು ಬಗ್ಗೆ ಓದಿಲ್ಲವೇ? ಆಗ ನಮಗೆ ಈ ದೊರೆಯ ಬಗ್ಗೆ ಆಕ್ಷೇಪವಿರಲಿಲ್ಲ? ಸುಳ್ಳು ಕಥೆ ಕಟ್ಟಿ, ಪಠ್ಯಪುಸ್ತಕದಲ್ಲಿ ಸೇರಿಸಿದ್ದರು ಎಂಬ ಕಥೆ ಬೇರೆ… ಅಂಥವರಿಗೆ ನನ್ನ ಪ್ರಶ್ನೆ ಸುಳ್ಳು ಕಥೆ ಕಟ್ಟಿ ಮಕ್ಕಳು ಅದನ್ನು ಓದುವಂತೆ ಮಾಡಲು ಸರ್ಕಾರಕ್ಕೆ ಇದರಿಂದ ಸಿಗುವುದಾದರೇನು? ನಮ್ಮ ನಾಡಿಗಾಗಿ ವೀರಮರಣವನ್ನಪ್ಪಿದ ವೀರನ ಬಗ್ಗೆ ನಾವೆಲ್ಲರು ಹೆಮ್ಮೆ ಪಡೋಣ. ನಮ್ಮ ಟಿಪ್ಪು ನಮ್ಮ ಭಾರತದ ಹುಲಿ.

Advertisements

(ಫೇಸ್ ಬುಕ್ ವಾಲ್ ನಿಂದ)

?s=150&d=mp&r=g
ನಾಜಿಯ ಕೌಸರ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

8 COMMENTS

  1. ಇಲ್ಲಿ ವಿಷಯ ಟಿಪ್ಪು ಉತ್ತಮ ಆಡಳಿತ ಅಧಿಕಾರಿಯೂ,ಅಥವಾ ಟಿಪ್ಪು ವಿಗೆ ಬ್ರಿಟಿಷರು ಹೆದರುತಿದ್ದಾರೋ ಎನ್ನುವುದು ಅಲ್ಲ,ವಿಷಯ ಟಿಪ್ಪು ಮತಾಂಧನೋಎನ್ನುವುದು ಆಗಿದೆ.ಟಿಪ್ಪು ಮತಾಂಧ ಅಲ್ಲ ಎಂದು ಸಾಬೀತು ಪಡಿಸಲು ನೀವು ಶೃಂಗೇರಿಗೆ ಕಾಣಿಕೆ ಕೊಟ್ಟದ್ದು ಮೊದಲಾದ ಹತ್ತು ಪುರಾವೆ ಕೊಟ್ಟರೂ ಟಿಪ್ಪು ಮತಾಂಧ ಎಂದು ಸಾಬೀತು ಪಡಿಸಲು ನಾನು ನೂರು ಪುರಾವೆ ಕೊಡಬಲ್ಲೆ,ಮಾತ್ರವಲ್ಲದೆ ಟಿಪ್ಪು ಶೃಂಗೇರಿಗೆ ಕಾಣಿಕೆ ಕೊಟ್ಟ ಮೊದಲಾದ ನಿಮ್ಮ ವಾದಗಳಿಗೆ ಅದು ಯಾಕೆ ಕೊಟ್ಟ ಎಂದು ಹೇಳಬಲ್ಲೆ.
    ನಾನು ಕೇರಳದ ಕಾಸರಗೋಡಿನವನು .ಇಲ್ಲಿ ಸಮೀಪ ಮಧೂರು ಮದ್ಧನಂತೆಶ್ವರ ದೇವಸ್ಥಾನ ಇದೆ ಆ ದೇವಸ್ಥಾನದಲ್ಲಿ ಟಿಪ್ಪುವಿನ ಖಡ್ಗದ ಗುರುತು ಈಗಲೂ ಸಂರಕ್ಷಿಸಿ ಇಟ್ಟಿದ್ದಾರೆ ಮತ್ತು ಟಿಪ್ಪುವಿನ ಕ್ಷೇತ್ರ ಆಕ್ರಮಣ ಕ್ಷೇತ್ರ ಇತಿಹಾಸದಲ್ಲಿ ದಾಖಲಾಗಿದೆ.ಮಾತ್ರವಲ್ಲದೆ ಕೆರಳದು ದ್ದಕ್ಕೂ ಪ್ರತ್ಯೇಕಿಸಿ ಮುಂಚಿನ ಮಲಬಾರ್ ಭಾಗದಲ್ಲಿ ಇಂತಹ ನೂರಾರು ಕ್ಷೇತ್ರಗಳನ್ನು ನೀವು ಕಾಣಬಹುದು.
    ಒಬ್ಬ ಜಾತ್ಯತೀತ ಎಂದು ನೀವು ಬಿಂಬಿಸುವ ರಾಜನು ಹೇಗೆ ಅನ್ಯ ಮತ ಸ್ಥರ ಆರಾದನಾಲಯವನ್ನು ನಾಶ ಮಾಡಿಯಾನು.ಟಿಪ್ಪು ಮತಾಂಧ ಎಂದು ಸಾಬೀತು ಮಾಡಲು ಅನ್ಯ ಪುರಾವೆ ಬೇಕೆ???
    ಸುಳ್ಳು ಇತಿಹಾಸ ಪಠ್ಯದಲ್ಲಿ ತುರುಕಿದರೆ ಸರ್ಕಾರಕ್ಕೆ ಸಿಗುವುದಾದರೂ ಏನು?? ಈ ಪ್ರಶ್ನೆಗೆ ಉತ್ತರ ಇದೆ.ಸರ್ಕಾರವು ಸಜ್ಜನ ,ದ್ವೇಷವಿಲ್ಲದ ಮುಂದಿನ ನಾಗರಿಕರ ಸೃಷ್ಟಿಗೆ ಬೇಕಾಗಿ ಮಾತ್ರ ಈ ಕೆಲಸ ಮಾಡಿದೆ ಎಂದು ನಾನು ನಂಬಲಾರೆ ತಮ್ಮ ವೋಟ್ ಬ್ಯಾಂಕ್ ಸಂಕ್ಷಿಸುವ ಸಲುವಾಗಿ ಕೂಡ ಈ ಕೆಲಸಕ್ಕೆ ಕೈ ಹಾಕಿದೆ.
    ನಡೆದ ಘಟನೆ ಗಳನ್ನು ಹಾಗೆಯೇ ನಮೂದು ಮಾಡುವುದು ಇತಿಹಾಸ ಆಗಿದೆ.ತಮ್ಮ ರಾಜಕೀಯ ಅಥವಾ ಇನ್ನಿತರ ಲಾಭಕ್ಕಾಗಿ ತಮಗೆ ತೋಚಿದ ಹಾಗೆ ದಾಖಲು ಮಾದುದಕ್ಕೆ ಹೆಸರು ಇತಿಹಾಸ ಅಲ್ಲ

    • ವಿಚಾರ ಧಾರೆಗಳು ಶ್ರೀಮಂತ ವಾಗಿರಬೇಕು.ಮತಾಂಧ ಅನ್ನುವ ಯಾವಾಗ ಆಧಾರಗಳು ಇಲ್ಲ.ಇಲ್ಲಿ ಯಾವ ಬೊಗಳಿ ಮಗನು ಫೊಣ೯ ನಲ್ಲ. ಅ ಅ ಕಾಲಕ್ಕೆ ತಕ್ಕಂತೆ ರಾಜರುಗಳು ಆಡಳಿತ ಮಾಡಿಕೊಂಡಿದ್ದಾರೆ.ಅದನ್ನು ಪ್ರೆಶೇ ಮಾಡುವುದು ಮೂಖ೯ತನ.ಆಘಾತಕಾರಿ ಖಾಯಿಲೆ ಬಂದಿದೆ ಎಂದು ಅಮೇರಿಕಾದ ಕಡೆ ಜೀವ ಉಳಿಸಿ ಕೊಳ್ಳಲು ಓಡುವ ರಾಜಕಾರಿಣಿ ಗಳು.ಅದೆ ಸಾವು ಎದುರಿಗೆ ಇದೆ ಎಂದು ಹೆದರದೆ ಹೊರಡಿ ವಿರಾಸ್ಟಗ೯ ಸೇರಿದ ಮಹಾನ್ ಚೇತನ್ ಅದು ನಿನು ಸಹ ಸರಿಯಾಗಿ ಚರಿತ್ರೆ. ಓದದೆ ಮೂಖ೯ರಂತೆ ವತಿ೯ಸ ಬೇಡಿ . ಆಡ್ವಾಣಿ ಎಂಬ ಮೂ೯ ಮನುಷ್ಯ ಈ ದೇಶವನ್ನು ಹಾಳು ಮಾಡಿಬಿಟ್ಟ.ಅವನು ಸಹ ಮತಾಂಧ ಅನ್ನುತ್ತಿರಾ.ಹಾಗೆ ಇತಿಹಾಸ ತಿರುಚುವ ಪ್ರಯತ್ನ ಮಾಡಿದ್ದಾರೆ ನಿನು ಅದರಿಂದ ಹೊರಗೆ ಬನ್ನಿ ಹುಲಿ 🐯 ಎಂದು ಹುಲಿ ಯೇ

  2. ಇಂತಹ ಸುಳ್ಳು ಇತಿಹಾಸ ಓದಿಸಿದ ನಮ್ಮ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು. ಮತಾಂಧರು ಇಂದು ಸ್ವತಂತ್ರ ಹೋರಾಟಗಾರರು ಎಂದು ಬಣ್ಣಿಸಲ್ಪಡುತ್ತಿದ್ದಾರೆ.

  3. ಹೀಗೂ ಹೇಳಬಹುದು: ಕನ್ನಡ ನೆಲದಲ್ಲೆ ಹುಟ್ಟಿ, ಕನ್ನಡ ನೆಲದಲ್ಲೆ ಕನ್ನಡಿಗರ ನೆತ್ತರು ಹರಿಸಿದವ ಟಿಪ್ಪು

  4. ಒಬ್ಬ ಮತಾಂಧ ನ ಬಗ್ಗೆ ನೀವು ಎಷ್ಟೇ ತಿರುಚಿ ಮುರಚಿ ಹೇಳಿದರೂ ಅವನೊಬ್ಬ ಖಾಲಿ ಪಲಾವ್.. ಬ್ರೀಟಿಷರು ಎಷ್ಟು ಭಾರತದ ಮಹಿಳೆಯರಿಗೆ ಹೆದರಿದ್ದಾರೆ.. ಅಂದ ಮಾತ್ರಕ್ಕೆ ಅವನು ಹೀರೋ ಆಗಲಾರ… ಸರಕಾರ ತುಷ್ಟಿಕರಣಕ್ಕಾಗಿ ಇತಿಹಾಸ ತಿರುಚಿ ನಮಗೆ ಹೇಳಿ ತಿಪ್ಪು ಒಬ್ಬ ಮತಾಂಧ.. ಹಿಂದೂ ವಿರೋದಿ ಕನ್ನಡ ವಿರೋದಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X