ಅಲ್ಪಸಂಖ್ಯಾತರ ಶೈಕ್ಷಣಿಕ-ಸಾಮಾಜಿಕ-ಆರ್ಥಿಕ ಪ್ರಗತಿಗಾಗಿ ಸರ್ಕಾರದ ಕಾರ್ಯಕ್ರಮಗಳೇನು?

Date:

Advertisements

ಕಳೆದ ಬಾರಿ 2024-25ರ ವಾರ್ಷಿಕ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಗೆ ರೂ. 3183 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಅದನ್ನು ಪರಿಷ್ಕರಿಸಿ ರೂ. 1868 ಕೋಟಿ ಅನುದಾನವನ್ನು ಒದಗಿಸಿದ್ದರು, ಅಂದರೆ ಬಿಡುಗಡೆ ಸಂದರ್ಭದಲ್ಲಿ ಸುಮಾರು ರೂ. 1300 ಕೋಟಿ ಅನುದಾನವನ್ನು ಹಿಂಪಡೆದುಕೊಂಡಿದ್ದರು.

ಸತತ ಮೂರನೇ ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಆಡಳಿತದ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ದೇಶದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಈ ಹಿಂದೆ ಸ್ಥಾಪಿಸಲಾಗಿದ್ದ ಅನೇಕ ಸಂಸ್ಥೆಗಳನ್ನು ಮತ್ತು ಯೋಜನೆ/ಕಾರ್ಯಕ್ರಮಗಳನ್ನು ಕ್ರಮೇಣವಾಗಿ ಕಡಿತಗೊಳಿಸುವ ವ್ಯವಸ್ಥಿತ ಕೆಲಸವನ್ನು ಮಾಡುತ್ತಿರುವ ಬಗ್ಗೆ ಹಲವು ವರದಿಗಳು ಬಂದಿವೆ. ವಿವಿಧ ಸಂದರ್ಭಗಳಲ್ಲಿ ಸರ್ಕಾರದ ಇಚ್ಚಾಶಕ್ತಿಯೂ ಮುನ್ನೆಲೆಗೆ ಬಂದಿದೆ.

ಬಿಜೆಪಿ ನೇತೃತ್ವದ ಸರ್ಕಾರವು 2025-26ರ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಗೆ ರೂ. 3350 ಕೋಟಿ ಅನುದಾನವನ್ನು ಘೋಷಿಸಿದೆ. ಇದು ಕಳೆದ ಬಾರಿಯ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನಕ್ಕಿಂತಲೂ ಪ್ರತಿಶತ 5ರಷ್ಟು ಅಂದರೆ ರೂ. 166 ಕೋಟಿ ಅನುದಾನ ಹೆಚ್ಚಾಗಿದ್ದರೂ ಸಹ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಸಮುದಾಯದ ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತಿದೆ.

Advertisements

ಕಳೆದ ಬಾರಿ 2024-25ರ ವಾರ್ಷಿಕ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಗೆ ರೂ. 3183 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಅದನ್ನು ಪರಿಷ್ಕರಿಸಿ ರೂ. 1868 ಕೋಟಿ ಅನುದಾನವನ್ನು ಒದಗಿಸಿದ್ದರು. ಅಂದರೆ ಬಿಡುಗಡೆ ಸಂದರ್ಭದಲ್ಲಿ ಸುಮಾರು ರೂ. 1300 ಕೋಟಿ ಅನುದಾನವನ್ನು ಹಿಂಪಡೆದುಕೊಂಡಿದ್ದರು.

ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಕೇಂದ್ರದ ಮೂಲಕ ಜಾರಿಗೊಳ್ಳುತ್ತಿರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮತ್ತು ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ಮತ್ತು ಉಚಿತ ಕೋಚಿಂಗ್ ಹಾಗೂ ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಒಳಗೊಂಡ ಒಟ್ಟು 6 ಯೋಜನೆ/ಕಾರ್ಯಕ್ರಮಗಳಿಗೆ ರೂ. 678 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಕಳೆದ ಬಾರಿಗೆ ಹೋಲಿಸಿದರೆ ಸುಮಾರು ರೂ. 900 ಕೋಟಿಯಷ್ಟು ಅನುದಾನವನ್ನು ಕಡಿತಗೊಳಿಸಿದ್ದಾರೆ, ಇದೇ ಯೋಜನೆಗಳಿಗೆ ಕಳೆದ ಬಾರಿ ರೂ. 1575 ಕೋಟಿ ಅನುದಾನವನ್ನು ಘೋಷಿಸಿದ್ದರು. ಆದರೆ ಬಿಡುಗಡೆಗೊಳಿಸಿದ್ದು ಮಾತ್ರ ಕೇವಲ ರೂ. 517 ಕೋಟಿ.

ಬಹಳ ಪ್ರಮುಖವಾಗಿ, ಮುಸ್ಲಿಮ್ ಸಮುದಾಯದ ಮಕ್ಕಳು ಅಭ್ಯಸಿಸುವ ಮದ್ರಸಾ ಶಿಕ್ಷಣಕ್ಕೆ ಆಧುನಿಕ ಅಥವಾ ಔಪಚಾರಿಕ ಶಿಕ್ಷಣದ ಕಲಿಕೆಯನ್ನು ಸಂಯೋಜಿಸಲು ನೀಡುತ್ತಿದ್ದ ಆರ್ಥಿಕ ಸಹಾಯವನ್ನು ಅತೀ ದೊಡ್ಡ ಪ್ರಮಾಣದಲ್ಲಿ ನಿಲ್ಲಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಮದ್ರಸಾ ಶಿಕ್ಷಣಕ್ಕೆ ಕೇವಲ ರೂ. 0.01 ಕೋಟಿ ಅಂದರೆ ಕೇವಲ ರೂ. 10 ಲಕ್ಷ ಅನುದಾನವನ್ನು ಮಾತ್ರ ಮೀಸಲಿಟ್ಟಿದ್ದಾರೆ, ಆದರೆ ಕಳೆದ ಬಾರಿ ಇದಕ್ಕಾಗಿ ರೂ. 10 ಕೋಟಿ ಘೋಷಿಸಿದ್ದರು ನಂತರದಲ್ಲಿ ಅದನ್ನು ಪರಿಷ್ಕರಿಸಿ 2ಕೋಟಿಗೆ ಇಳಿಸಿದ್ದರು.

ಸಂಪೂರ್ಣ ಒಕ್ಕೂಟ ಸರ್ಕಾರದಿಂದ ಅನುಷ್ಠಾನಗೊಳ್ಳುತ್ತಿರುವ ಅನೇಕ ಶೈಕ್ಷಣಿಕ, ಆರ್ಥಿಕ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಈ ಬಾರಿ 1237ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಇದಕ್ಕೆಲ್ಲ ಕಳೆದ ಬಾರಿ 2120ಕೋಟಿ ಅನುದಾನವನ್ನು ನೀಡಿದ್ದರು. ಆದರೆ ನಂತರದಲ್ಲಿ ಅದನ್ನು ಪರಿಷ್ಕರಿಸಿ ರೂ. 770ಕೋಟಿ ಅನುದಾನವನ್ನು ನೀಡಿದ್ದರು, ಒಟ್ಟಾರೆ ರೂ.800 ಕೋಟಿಗಿಂತಲೂ ಅಧಿಕ ಅನುದಾನವನ್ನು ಕಡಿತಗೊಳಿಸಿದ್ದಾರೆ‌.

ಈ ಬಜೆಟ್ ನಲ್ಲಿ ಗಮನಿಸಬೇಕಾದದ್ದು ಏನೆಂದರೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂಪಿಸಿರುವ “ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ”ಕ್ಕೆ ಕಳೆದ ಬಾರಿ ರೂ. 910ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಈ ಬಾರಿಯ ಬಜೆಟ್ ನಲ್ಲಿ ಈ ಯೋಜನೆಗೆ ರೂ. 1913ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಅಂದರೆ ಸುಮಾರು ರೂ. 1ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು ಈ ಯೋಜನೆಗೆ ಮೀಸಲಿಟ್ಟಿರುವುದು ಮೇಲ್ನೋಟಕ್ಕೆ ಪ್ರಧಾನಿಯ ಹೆಸರಿನ ಮೇಲೆ ಚಾಲ್ತಿಯಲ್ಲಿರುವ ಯೋಜನೆಯನ್ನು ಜನಪ್ರಿಯಗೊಳಿಸುವ ಮೂಲಕ ಅಲ್ಪಸಂಖ್ಯಾತರ ಕಾಳಜಿಯನ್ನು ಪ್ರಕಟಿಸುವುದಾಗಿದೆ‌ಯೇ ಹೊರತು ಸಮುದಾಯದ ಸಬಲೀಕರಣಕ್ಕೆ ಅಗತ್ಯವಿರುವ ಯೋಜನೆಗಳಿಗೆ ಅನುದಾನ ನೀಡದಿರುವುದು ನೈಜ ಕಾಳಜಿ ಹೊಂದಿಲ್ಲ ಎಂಬುದು ಗೊತ್ತಾಗುತ್ತದೆ, ಪ್ರಚಾರ ಗಿಟ್ಟಿಸಿಕೊಳ್ಳಲು ಈ ಬಗೆಯ ಕಾರ್ಯತಂತ್ರವನ್ನು ಕೇಂದ್ರ ನಿರಂತರವಾಗಿ ಮಾಡುತ್ತಿರುವುದು ಜಗಜ್ಜಾಹೀರಾಗಿದೆ.‌

ಅಝಾದ್ ಫೌಂಡೇಷನ್

ಯುಪಿಎಸ್ಸಿ ಪೂರ್ವಭಾವಿ ಮತ್ತು ಎಸ್.ಎಸ್.ಸಿ ಹಾಗೂ ರಾಜ್ಯದ ಲೋಕಸೇವಾ ಆಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ನೀಡುತ್ತಿದ್ದ ಕೋಚಿಂಗ್ ಅನ್ನು ಸಹ ನಿಲ್ಲಿಸಲಾಗಿದೆ. ಅದಲ್ಲದೇ ಮೌಲಾನಾ ಆಜಾದ್ ಎಜುಕೇಷನ್ ಫೌಂಡೇಷನ್ ಸಂಸ್ಥೆ(MANF) ಮತ್ತು ಎನ್.ಎಮ್.ಡಿ.ಎಫ್.ಸಿ (NMDFC)ಗೆ ಯಾವುದೇ ರೀತಿಯ ಅನುದಾನವನ್ನು ನೀಡಿಲ್ಲ, ಈ ಸಂಸ್ಥೆಗಳಿಗೆ ಕಳೆದ ಬಾರಿಯೂ ಸಹ ಯಾವುದೇ ಅನುದಾನವನ್ನು ನೀಡದೆ, ಸಂಸ್ಥೆಯ ಕಾರ್ಯವನ್ನು ನಿಲ್ಲಿಸಲಾಗಿದೆ.‌

2023-24ರ ಬಜೆಟ್ ನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ರೂ. 433ಕೋಟಿ ನೀಡಲಾಗಿತ್ತು, ಆದರೆ ಅದರಲ್ಲಿ ಬಳಕೆ ಮಾಡಿದ್ದು ಮಾತ್ರ ಕೇವಲ ರೂ. 95 ಕೋಟಿ, 2024-25ರ ಬಜೆಟ್‌ನಲ್ಲಿ ಈ ಯೋಜನೆಯ ಅನುದಾನವನ್ನು ರೂ. 326 ಕೋಟಿಗೆ ಇಳಿಸಲಾಯಿತು. ತದನಂತರ ಅದರಲ್ಲಿ ಕೇವಲ ರೂ. 90ಕೋಟಿ ಅನುದಾನವನ್ನು ಮಾತ್ರ ಬಿಡುಗಡೆಗೊಳಿಸಿತ್ತು. ಇದೀಗ 2025-26ರ ಬಜೆಟ್ ನಲ್ಲಿ ಕೇವಲ ರೂ. 195 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಈ ಹಿಂದೆ ಪ್ರಿ-ಮೆಟ್ರಿಕ್ ಸ್ಕಾಲರ್‌ ಶಿಪ್ ಅನ್ನು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೂ ನೀಡಲಾಗುತ್ತಿತ್ತು. ಕಳೆದ ವರ್ಷದಲ್ಲಿ ಮೆಟ್ರಿಕ್ ಪೂರ್ವ ಸ್ಕಾಲರ್‌ ಶಿಪ್ ಅನ್ನು ನಿಲ್ಲಿಸಿ ಕೇವಲ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ಮುಂದುವರೆಸಲಾಗುತ್ತಿದೆ‌. ಇದಕ್ಕಾಗಿ ಆರ್‌ಟಿಇ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ಆರ್‌ಟಿಇಯ ಶೈಕ್ಷಣಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಸಹ ಕೇಂದ್ರ ಸರ್ಕಾರ ಯೋಜನೆಯನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿದೆ.

ಅದೇ ರೀತಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಕಳೆದ ಬಾರಿ ರೂ. 413 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈ ಬಾರಿ ಅನುದಾನವನ್ನು ಶೇ. 65% ರಷ್ಟು ಇಳಿಕೆ ಮಾಡಿದ್ದಾರೆ.

ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುವ ಮೆರಿಟ್-ಕಮ್-ಮೀನ್ಸ್ ಸ್ಕಾಲರ್‌ಶಿಪ್ ಯೋಜನೆ ಗೆ ಕಳೆದ ಬಾರಿ ರೂ.33.80 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಈ ಬಾರಿ ಅನುದಾನವನ್ನು ರೂ. 7.34 ಕೋಟಿಗೆ ಇಳಿಕೆ ಮಾಡಿದ್ದಾರೆ.

ಉನ್ನತ ಶಿಕ್ಷಣ ಅಧ್ಯಯನಕ್ಕೆ ವಿದೇಶಿ ವಿವಿಗಳಲ್ಲಿ ಕಲಿಯಲು ಶೈಕ್ಷಣಿಕ ಸಾಲ ಸೌಲಭ್ಯಕ್ಕಾಗಿ ಕಳೆದ ಬಾರಿ ರೂ. 15.30 ಕೋಟಿ ಅನುದಾನವನ್ನು ನೀಡಿದ್ದರು ಆದರೆ ಈ ಬಾರಿ ಅದನ್ನು ಕಡಿತಗೊಳಿಸಿ ರೂ. 8.16 ಕೋಟಿ ಮಾತ್ರ ಅನುದಾನವನ್ನು ಮೀಸಲಿಟ್ಟಿದ್ದಾರೆ.

ಈ ಹಿಂದಿನಿಂದಲೂ ಸಾಚಾರ್ ವರದಿ ಮತ್ತು ರಂಗನಾಥ ಮಿಶ್ರಾ ದಂತಹ ಸಮೀಕ್ಷಾ ವರದಿಗಳ ಅಂಕಿ-ಅಂಶಗಳು ಸರ್ಕಾರದ ಮುಂದಿದ್ದರೂ ಸಹ ರಾಜಿಕೀಯ ಇಚ್ಚಾಶಕ್ತಿ ಮತ್ತು ಸಾಮಾಜಿಕ ನ್ಯಾಯದ ಬಗೆಗೆ ನಿಜವಾದ ಕಾಳಜಿ ಇಲ್ಲದಿರುವುದು ಹಾಗೂ ಜಾತಿ, ಧರ್ಮ, ಸೈದ್ಧಾಂತಿಕ ಭಿನ್ನತೆಯ ಆಧಾರದಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳುವುದು ಸಾಮಾಜಿಕ ಸಮಾನತೆಗೆ ವಿರುದ್ಧವಾದುದಾಗಿದೆ.

ಇದನ್ನೂ ಓದಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಹೊರಗಿಟ್ಟು ಬಜೆಟ್ ಪೂರ್ವಭಾವಿ ಸಭೆ: ಆಕ್ರೋಶ

ಮುಹಮ್ಮದ್‌ ಲಟಗೇರಿ
ಮಹಮ್ಮದ್ ಪೀರ್ ಲಟಗೇರಿ
+ posts

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ನಿವಾಸಿಯಾಗಿದ್ದು, ಬಿ.ಇಡಿ ಪದವಿ ಮುಗಿಸಿ, ಎಂ.ಎಸ್ಸಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿ -ಯುವಜನ ಮುಖಂಡರಾಗಿ ಗುರುತಿಸಿಕೊಂಡಿರುವ ಇವರು ರಾಜ್ಯ ಮಟ್ಟದ ಅನೇಕ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಹಮ್ಮದ್ ಪೀರ್ ಲಟಗೇರಿ
ಮಹಮ್ಮದ್ ಪೀರ್ ಲಟಗೇರಿ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ನಿವಾಸಿಯಾಗಿದ್ದು, ಬಿ.ಇಡಿ ಪದವಿ ಮುಗಿಸಿ, ಎಂ.ಎಸ್ಸಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿ -ಯುವಜನ ಮುಖಂಡರಾಗಿ ಗುರುತಿಸಿಕೊಂಡಿರುವ ಇವರು ರಾಜ್ಯ ಮಟ್ಟದ ಅನೇಕ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X