ಗುಜರಾತ್‌ | 5 ವರ್ಷದೊಳಗಿನ 40% ಮಕ್ಕಳು ತೂಕಹೀನ; ನೀತಿ ಆಯೋಗದ ಡೇಟಾ

Date:

Advertisements

ಕಳೆದ 10 ವರ್ಷಗಳಿಂದ ಭಾರೀ ಚರ್ಚೆಯಲ್ಲಿರುವ ಹಾಗೂ ದೇಶಕ್ಕೆ ಹೊಸ ಮಾದರಿ (ಗುಜರಾತ್ ಮಾದರಿ) ತಂದುಕೊಡಲಿದೆ ಎಂದೇ ಬಣ್ಣಿಸಲಾಗಿದ್ದ, ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ದೇಶದಲ್ಲಿಯೇ ಹೆಚ್ಚಿನ ಮಕ್ಕಳು ತೂಕಹೀನರಾಗಿದ್ದಾರೆ ಎಂದು ನೀತಿ ಆಯೋಗ ಹೇಳಿದೆ.

ಕೇಂದ್ರ ಸರ್ಕಾರದ ಅಡಿಯಲ್ಲಿರುವ ನೀತಿ ಆಯೋಗ ಈ ತಿಂಗಳ ಆರಂಭದಲ್ಲಿ 2023-24ರ ‘ಸುಸ್ಥಿರ ಅಭಿವೃದ್ಧಿ ಗುರಿ’ (SDG) ವರದಿಯನ್ನು ಬಿಡುಗಡೆ ಮಾಡಿದೆ. “ಹಸಿವಿನ ವಿರುದ್ಧದ ಹೋರಾಟ ಮತ್ತು ಮಕ್ಕಳಲ್ಲಿ ಪೌಷ್ಟಿಕತೆ ಸುಧಾರಿಸುವಲ್ಲಿ ಗುಜರಾತ್ ದೇಶದಲ್ಲಿಯೇ ಹಿಂದುಳಿದಿದೆ. ಗುಜರಾತ್‌ನಲ್ಲಿ 5 ವರ್ಷದೊಳಗಿನ 39.7% ಮಕ್ಕಳು ತೂಕಹೀನರಾಗಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ ಭಾರತದ ರಾಜ್ಯಗಳ ಪೈಕಿ ಗುಜರಾತ್ 25ನೇ ಸ್ಥಾನದಲ್ಲಿದೆ” ಎಂದು ಹೇಳಿದೆ.

SDG-2 ಸೂಚ್ಯಂಕದಲ್ಲಿ ಗುಜರಾತ್‌ ಕೇವಲ 41 ಅಂಕಗಳನ್ನು ಗಳಿಸಿದೆ. ಹಸಿವಿನ ಹೋರಾಟದಲ್ಲಿ ಪ್ರಗತಿ ಸಾಧಿಸಿದ ರಾಜ್ಯಗಳಲ್ಲಿ ಒಡಿಶಾ, ಮಧ್ಯಪ್ರದೇಶ ಅಗ್ರಸ್ತಾನದಲ್ಲಿವೆ. 25ನೇ ಸ್ಥಾನವನ್ನು ಗುಜರಾತ್ ಪಡೆದುಕೊಂಡಿದೆ. ಗುಜರಾತ್‌ಗೆ 2020-21ರಲ್ಲಿ 46 ಅಂಕಗಳು, 2019-20ರಲ್ಲಿ 41 ಅಂಕ ಹಾಗೂ ಹಾಗೂ 2018ರಲ್ಲಿ 49 ಅಂಕಗಳು ದೊರೆತಿದ್ದವು. 2018ಕ್ಕೆ ಹೋಲಿಸಿದರೆ, ಈ ವರ್ಷ ಗುಜರಾತ್ ತೀವ್ರ ಕುಸಿತವನ್ನು ಕಂಡಿದೆ.

Advertisements

ನೀತಿ ಆಯೋಗದ ಅಂಕಿಅಂಶಗಳ ಪ್ರಕಾರ, ಗುಜರಾತ್‌ನಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 39% ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ. 15-49 ವರ್ಷ ವಯಸ್ಸಿನ 62.5% ಗರ್ಭಿಣಿಯರು ರಕ್ತಹೀನತೆ ಹೊಂದಿದ್ದಾರೆ ಮತ್ತು ಅದೇ ವಯಸ್ಸಿನ 25.2% ಅಗತ್ಯಕ್ಕಿಂತ ಕಡಿಮೆ ತೂಕವನ್ನು ಹೊಂದಿದ್ದಾರೆ. 2018 ಮತ್ತು 2019ಕ್ಕೆ ಹೋಲಿಸಿದರೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ ಮತ್ತು ಮಹಿಳೆಯ ರಕ್ತಹೀನತೆಯ ಪ್ರಮಾಣ ಹೆಚ್ಚಾಗಿದೆ.

“2020-21ರಲ್ಲಿ 46 ಅಂಕಗಳನ್ನು ಹೊಂದಿದ್ದ ಗುಜರಾತ್‌ನ SDG-2 ಸೂಚ್ಯಂಕವು 2023-24ರಲ್ಲಿ 41ಕ್ಕೆ ಕುಸಿದಿದೆ. 5 ವರ್ಷದೊಳಗಿನ 39.7% ಮಕ್ಕಳು ಕಡಿಮೆ ತೂಕ ಮತ್ತು 62.5% ಗರ್ಭಿಣಿಯರು ರಕ್ತಹೀನತೆ ಹೊಂದಿದ್ದಾರೆ. 2030ರ ವೇಳೆಗೆ ಗುಜರಾತ್‌ಅನ್ನು ಹಸಿವು ಮುಕ್ತವನ್ನಾಗಿ ಮಾಡಲು ತುರ್ತು ಮತ್ತು ಪರ್ಯಾಯ ಹೂಡಿಕೆ ಮತ್ತು ಪೌಷ್ಟಿಕಾಂಶ-ಕೇಂದ್ರಿತ ಯೋಜನೆಗಳ ಅಗತ್ಯವಿದೆ” ಎಂದು ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ ಕಾಲೇಜಿನ (ಸ್ವಾಯತ್ತ) ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆತ್ಮನ್ ಶಾ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಗುಜರಾತಿನ ಈ ಹೀನ ಸ್ಥಿತಿಯನ್ನು ಕೇರಳದ ಜೊತೆ ಹೋಲಿಸಿ,ಕರ್ನಾಟಕದ ಸ್ಥಿತಿಯನ್ನೂ ಪಟ್ಟಿ ಮಾಡಿದ್ದರೆ ಬರಹ ಹೆಚ್ಚು ಅರ್ಥಪೂರ್ಣ ಆಗಿರುತ್ತಿತ್ತು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X