ಪ್ರಧಾನಿ ನರೇಂದ್ರ ಮೋದಿ ಅವರ ಚಾರ್ ಸೋ ಪಾರ್ (400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು) ಎಂಬ ಆಕ್ರಮಣಕಾರಿ ಕೂಗು ಗಾಳಿಯಲ್ಲಿ ಕಣ್ಮರೆಯಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಲೇವಡಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಮಿತ್ರ ಪಕ್ಷಗಳಿಂದ ಸಹಾಯದಿಂದ ಮಾತ್ರ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ. ನಿರಂತರವಾಗಿ ಚಾರ್ ಸೋ ಪಾರ್ (400ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು) ಎಂದಿದ್ದ ಪ್ರಧಾನಿ ಮೋದಿ ಅವರಿಗೆ ಮುಖಭಂಗವಾಗಿದೆ.
#WATCH | CPI(M) General Secretary Sitaram Yechury says, “This is a heavy setback for BJP and especially Narendra Modi. Their aggressive call for 400 paar has disappeared into thin air, they didn’t even win a majority… This is an achievement for the people who have voted in… pic.twitter.com/RICYnfG5yF
— ANI (@ANI) June 5, 2024
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, “ಬಿಜೆಪಿಗೆ ಮತ್ತು ವಿಶೇಷವಾಗಿ ನರೇಂದ್ರ ಮೋದಿಗೆ ಆದ ಭಾರೀ ಹಿನ್ನಡೆಯಾಗಿದೆ. ಅವರ 400 ಪಾರ್‌ಗಳ ಆಕ್ರಮಣಕಾರಿ ಕೂಗು ಗಾಳಿಯಲ್ಲಿ ಕಣ್ಮರೆಯಾಗಿದೆ, ಅವರು ಬಹುಮತವನ್ನೂ ಗಳಿಸಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿದ್ದೀರಾ? ಬಹುಮತಕ್ಕೆ ‘ಇಂಡಿಯಾ’ ಒಕ್ಕೂಟ ಕಸರತ್ತು; ನಾನಾ ಪಕ್ಷಗಳೊಂದಿಗೆ ಮಾತುಕತೆ
“ತಮ್ಮ ದೈನಂದಿನ ಸಮಸ್ಯೆಗಳು ಪರಿಹಾರವಾಗಲು ಪ್ರಜಾಪ್ರಭುತ್ವದ ಪರವಾಗಿ ಮತ ಚಲಾಯಿಸಿದ ಜನತೆಯ ಸಾಧನೆ ಇದಾಗಿದೆ. ಬಿಜೆಪಿಗೆ ಜನಾದೇಶವಿಲ್ಲ, ಎನ್‌ಡಿಎಗೆ ನೀಡಲಾಗಿದೆ. ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಮತ ಹಂಚಿಕೆಯಾಗಲಿದೆ ಎಂದು ಜನರಿಗೆ ನಂಬಿಕೆ ಇರಲಿಲ್ಲ, ಆದರೆ ಅದು ಈಗ ಸಾಧ್ಯವಾಗಿದೆ” ಎಂದು ಹೇಳಿದರು.
ಇಂಡಿಯಾ ಒಕ್ಕೂಟದ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದಾಗ, “ಇಂಡಿಯಾ ಒಕ್ಕೂಟ ಸಭೆಯನ್ನು ಸೇರಿದ ಬಳಿಕವೇ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.