ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 50% ತೆರಿಗೆ ವಿಧಿಸಿದ್ದಾರೆ. ರಷ್ಯಾದ ತೈಲವನ್ನು ಭಾರತ ಖರೀದಿ ಮಾಡುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ಭಾರೀ ತೆರಿಗೆ ವಿಧಿಸಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಟ್ರಂಪ್ ಹೇರಿರುವ ತೆರಿಗೆ ಮತ್ತು ಭಾರತದ ಮೌನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೂ, ಟ್ರಂಪ್ ಕ್ರಮವನ್ನು ಪ್ರಧಾನಿ ಮೋದಿ ಖಂಡಿಸಿಲ್ಲ. ತೆರಿಗೆಯನ್ನು ಕಡಿತಗೊಳಿಸುವ ದ್ವಿಪಕ್ಷೀಯ ಮಾತುಕತೆಗೂ ಒತ್ತಾಯಿಸಿಲ್ಲ. ಇಂತಹ ಸಂದರ್ಭದಲ್ಲಿ, ಟ್ರಂಪ್ ಸುಂಕದ ವಿರುದ್ಧ ಭಾರೀ ಹೋರಾಟ ನಡೆಸಿದ್ದ ಸ್ವಿಟ್ಜರ್‌ಲ್ಯಾಂಡ್ ಜನರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟ್ರಂಪ್ ಅವರು 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಮಾರ್ಚ್ ತಿಂಗಳಿನಲ್ಲಿ ಮೊದಲ ತೆರಿಗೆ ಪಟ್ಟಿ ಬಿಡುಗಡೆ ಮಾಡಿದ್ದರು. ಅದರಲ್ಲಿ, ಸ್ವಿಟ್ಜರ್‌ಲ್ಯಾಂಡ್ ಮೇಲೆ 50% ತೆರಿಗೆ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿಹಾಕಿದ್ದರು. ಅಧಿಕ ಸುಂಕ ವಿಧಿಸುವ ಟ್ರಂಪ್ ಧೋರಣೆಯನ್ನು ವಿರೋಧಿಸಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಅವುಗಳಲ್ಲಿ, ‘ಮಧ್ಯ ಬೆರಳು’ (ಮಿಡ್ಲ್ ಫಿಂಗಲ್) ಸೆಲ್ಯೂಟ್ ಪ್ರತಿಭಟನೆಯೂ ಒಂದು.
ಈ ಲೇಖನ ಓದಿದ್ದೀರಾ?: ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್ ಒತ್ತಡ
ಸ್ವಿಟ್ಜರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿ ಮಾರ್ಚ್ 14ರಂದು ನಡೆದಿದ್ದ ವಾರ್ಷಿಕ ಫಾಸ್ಟ್‌ನಾಚ್ಟ್ ಕಾರ್ನೀವಲ್ ಸಂದರ್ಭದಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನಾ ಮೆರವಣಿಗೆಗಳು ನಡೆದಿದ್ದವು. ಆ ವೇಳೆ, ಜನರು ಮುಷ್ಠಿಹಿಡಿದ, ಮಧ್ಯದ ಬೆಳರನ್ನು ಮೇಲೆತ್ತಿರುವ ಕೈ ಆಧಾರದ ದೈತ್ಯ ಟೋಪಿಗಳನ್ನು ಧರಿಸಿ, ಕೊಳಲು ನುಡಿಸುತ್ತಾ, ಡ್ರಮ್ಮರ್‌ಗಳನ್ನು ಬಾರಿಸುತ್ತಾ ಮೆರವಣಿಗೆ ಸಾಗಿದ್ದರು. ಟ್ರಂಪ್ ಅವರನ್ನು ಅಪಹಾಸ್ಯ ಮಾಡಿದ್ದರು.
Trump imposed 50%Tariff on Switzerland.
— ηᎥ†Ꭵղ (@nkk_123) August 13, 2025
Switzerland united to give a Middle Finger Salute to #Trump .
The world knows how to treat a bully but here Saheb cant even take his name. pic.twitter.com/SY2vgtQsx0
ಇದೀಗ, ಭಾರತದ ಮೇಲೂ ಟ್ರಂಪ್ 50% ಸುಂಕ ವಿಧಿಸಿದ್ದಾರೆ. ಪ್ರಧಾನಿ ಮೋದಿ ಅವರು ರೈತರ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ ಎಂದಷ್ಟೇ ಹೇಳಿದ್ದಾರೆ. ಆದರೆ, ಟ್ರಂಪ್ ನೀತಿಯನ್ನು ಖಂಡಿಸಿಲ್ಲ, ಟೀಕಿಸಿಲ್ಲ, ವಿರೋಧಿಸಿಲ್ಲ. ಇನ್ನು, ಬಿಜೆಪಿಗರು ಮತ್ತು ಮೋದಿ ಭಕ್ತರು ಕೂಡ ಟ್ರಂಪ್ ಧೋರಣೆಯನ್ನು ಪ್ರಶ್ನಿಸುತ್ತಿಲ್ಲ. ಬದಲಾಗಿ, ಮೋದಿ ಅವರ ರೈತ ಹಿತಾಸಕ್ತಿಯ ಹೇಳಿಕೆಯೇ ಟ್ರಂಪ್‌ಗೆ ಭಾರೀ ತಿರುಗೇಟು ಎಂಬಂತೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಹಲವರು ಸ್ವಿಟ್ಜರ್‌ಲ್ಯಾಂಡ್‌ನ ವಿಡಿಯೋವನ್ನು ಹಂಚಿಕೊಂಡು, ಭಾರತೀಯರು ಟ್ರಂಪ್ ಅವರನ್ನು ವಿರೋಧಿಸುವುದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.