ಶಾಸಕರಿಗೆ ಇರುವಂತಹ ವೇತನದಲ್ಲಿ ಎಲ್ಲ ಕಚೇರಿ, ವಾಹನ, ಚಾಲಕ ನಿರ್ವಹಣೆ ಸಾಧ್ಯ ಇಲ್ಲ ಎಂಬುದು ಎಲ್ಲ ಶಾಸಕರಿಗೂ ಗೊತ್ತಿದೆ. ಹೀಗಾಗಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚಿಸುವಂತೆ ಶಾಸಕರ ವೇತನ ಪರಿಷ್ಕರಣೆಗೂ ಆಯೋಗ ರಚಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ, “ಶಾಸಕರ ಪಗಾರವನ್ನು ಶಾಸಕರೇ ಹೆಚ್ಚಿಸಿಕೊಳ್ಳುವುದು ತಪ್ಪು” ಎಂದರು.
“ಶಾಸಕರಿಗೆ ಏನೇನು ಖರ್ಚುಗಳು ಇರುತ್ತವೆ, ಖರ್ಚು ನಿಭಾಯಿಸಲು ಸರ್ಕಾರದಿಂದ ಏನು ವ್ಯವಸ್ಥೆ ಮಾಡಬೇಕು, ಶಾಸಕರ ಆಪ್ತ ಸಹಾಯಕರ ಪಗಾರ, ಅವರ ಪ್ರವಾಸ ಭತ್ಯೆ ಇತ್ಯಾದಿ ಯಾರು ನೀಡಬೇಕು ಇತ್ಯಾದಿ ಕುರಿತು ಆಯೋಗವು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತಾಗಬೇಕು” ಎಂದು ಸಲಹೆ ನೀಡಿದರು.
“ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ ಕಚೇರಿ, ವಾಹನ, ಮನೆ ಎಲ್ಲ ಸೌಲಭ್ಯ ಇರುತ್ತದೆ. ಶಾಸಕರಿಗೆ ವಾಹನ ಸೌಲಭ್ಯ ಇಲ್ಲ. ಶಾಸಕ ಬಸ್‌ನಲ್ಲಿ ಎಲ್ಲ ಕಡೆ ಓಡಾಡಿ ಕೆಲಸ ಮಾಡಲು ಆಗುತ್ತದೆಯೇ? ಶಾಸಕರ ಆಪ್ತ ಸಹಾಯಕರ ಸಂಬಳ ಯಾರು ಪಾವತಿಸುವುದು? ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಬಹಳಷ್ಟು ಸುಧಾರಣೆಗಳು ಆಗಬೇಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲುಗಳಲ್ಲಿ ಜಾತಿಭೂತ- ಸುಪ್ರೀಮ್ ಕೋರ್ಟ್ ಕಳವಳ
ಶ್ರೀಕಾಂತ ಪೂಜಾರಿ ಬಂಧನ ವಿಚಾರವಾಗಿ ಮಾತನಾಡಿ, “1992ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಪೂಜಾರಿ ಬಂಧಿಸಿರುವುದು ರಾಮಮಂದಿರ ಕರಸೇವೆ ಪ್ರಕರಣದಲ್ಲಿ. ಅದಕ್ಕೆ ನಾವು ಖಂಡನೆ ವ್ಯಕ್ತಪಡಿಸಿದೆವು. ಶ್ರೀಕಾಂತ ವಿರುದ್ಧದ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾವು ಮಾತಾಡಿಲ್ಲ, ಕ್ರಮ ಜರುಗಿಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ” ಎಂದರು.
“ಶ್ರೀಕಾಂತ್ ಮನೆ ಪಕ್ಕದವರೊಬ್ಬರು (ವೃದ್ಧ) ಈ ಪ್ರಕರಣದಲ್ಲಿಇದ್ದರು. ಪೊಲೀಸರು ಆ ವೃದ್ಧನನ್ನು ಬಿಟ್ಟು ಶ್ರೀಕಾಂತ್‌ನನ್ನು ಕರೆತಂದಿರುವುದು ನಮಗೆ ಗೊತ್ತಾಯಿತು. ಶ್ರೀಕಾಂತನನ್ನು ಗುರಿಯಾಗಿಸಿಕೊಂಡು ಬಂಧಿಸಿದ್ದಾರೆ” ಎಂದು ಆರೋಪಿಸಿದರು.
ಎಷ್ಟು ಶಾಸಕರು ಬಡವರು ಮತ್ತು ಬಡಮಧ್ಯಮ ವರ್ಗದವರಿರುವರು,,,, ಚುನಾವಣೆಯಲ್ಲಿ ಕೋಟಿ ಕೋಟಿ ಗಳಲ್ಲಿ ಖರ್ಚು ಮಾಡುವವರು ಸಹ ವೇತನ ಪರಿಷ್ಕರಣೆ ಕೇಳಿದರೆ,,, ದಿನಗೂಲಿ ಮಾಡಿ ಹೊಟ್ಟೆ ಪಾಡಿಗಾಗಿ ಶ್ರಮಿಸುತ್ತಿರುವ ರೈತ ರೈತಕಾರ್ಮಿಕರು,, ಪರಿಷ್ಕರಣೆ ಕೇಳಿದರೆ ಕೊಡುವಿರಾ