ಕಾಂಗ್ರೆಸ್ ಸರ್ಕಾರ ಶುಕ್ರವಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಬೆನ್ನಲ್ಲೇ ಶನಿವಾರ ಪುಸ್ತಕ ಪ್ರಕಾಶಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ʼಜ್ಞಾನಭಾಗ್ಯʼಕ್ಕೆ ಬೇಡಿಕೆ ಇಟ್ಟಿದೆ.
ಕನ್ನಡದ ಪ್ರಕಾಶಕರು ಹಾಗೂ ಬರಹಗಾರರ ಸ್ಥಿತಿ ಕಷ್ಟಕರವಾಗಿದ್ದು, ʼಜ್ಞಾನಭಾಗ್ಯʼವನ್ನು ನೀಡಬೇಕೆಂದು ಪುಸ್ತಕ ಪ್ರಕಾಶಕರ ನಿಯೋಗ ಮುಖ್ಯಮಂತ್ರಿ ಅವರನ್ನು ಕೋರಿತು.
“ಬಿಬಿಎಂಪಿ ವತಿಯಿಂದ 600 ಕೋಟಿ ರೂ.ಗಳು ಸೆಸ್ ಬಾಕಿ ಇದೆ. ಗ್ರಂಥಾಲಯಗಳ ಶೇ.6 ರಷ್ಟು ಸೆಸ್ ಮೊತ್ತವನ್ನು ಸಂಗ್ರಹ ಮಾಡುತ್ತಿದ್ದು, ಅದನ್ನು ಗ್ರಂಥಾಲಯ ಲೆಕ್ಕಶೀರ್ಷಿಕೆಗೆ ವರ್ಗಾವಣೆ ಮಾಡಬೇಕು” ಎಂದು ಪುಸ್ತಕ ಪ್ರಕಾಶಕರ ನಿಯೋಗ ಮನವಿ ಮಾಡಿತು.
ನಿಯೋಗದಲ್ಲಿ ಸಪ್ನಾ ಬುಕ್ ಹೌಸ್, ನಿರಂತರ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಸೇರಿದಂತೆ ಹಲವು ಪ್ರಕಾಶನ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.