ಆರ್‌ಎಸ್‌ಎಸ್‌ – ಬಿಜೆಪಿಯ ಮುಖವಾಡವನ್ನು ಹೊಸ ತಲೆಮಾರಿನ ಓದುಗರಿಗೆ ಪರಿಚಯಿಸಿದ ನೂರಾನಿ

Date:

Advertisements
ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ಪರವಾಗಿ ಕೊನೆಯವರೆಗೂ ಹೋರಾಟ ಮಾಡುತ್ತಲೆ ಇದ್ದ ಅಪರೂಪದ ಜ್ಞಾನಿಯಾಗಿದ್ದರು. ಸಂವಿಧಾನದ ಬಗ್ಗೆ ಇವರಷ್ಟು ಆಳವಾಗಿ ತಿಳಿದಿರುವವರು ಹಳೆಯ ತಲೆಮಾರುಗಳಾಗಲಿ ಈಗಿನ ನ್ಯಾಯವಾದಿಗಳಲ್ಲಿ ಯಾರೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. 

ಹಿರಿಯ ನ್ಯಾಯವಾದಿ, ಸಂವಿಧಾನ ತಜ್ಞ, ಇತಿಹಾಸಕಾರ, ರಾಜಕೀಯ ವಿಮರ್ಶಕ ಹಾಗೂ ಬರಹಗಾರ ಎ ಜಿ ನೂರಾನಿ (ಅಬ್ದುಲ್ ಗಫೂರ್ ಮಜೀದ್ ನೂರಾನಿ) ಅವರು ತಮ್ಮ 93ನೇ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ಪರವಾಗಿ ಕೊನೆಯವರೆಗೂ ಹೋರಾಟ ಮಾಡುತ್ತಲೆ ಇದ್ದ ಅಪರೂಪದ ಜ್ಞಾನಿಯಾಗಿದ್ದರು. ಸಂವಿಧಾನದ ಬಗ್ಗೆ ಇವರಷ್ಟು ಆಳವಾಗಿ ತಿಳಿದಿರುವವರು ಹಳೆಯ ತಲೆಮಾರುಗಳಾಗಲಿ ಈಗಿನ ನ್ಯಾಯವಾದಿಗಳಲ್ಲಿ ಯಾರೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ನ್ಯಾಯಾಲಯದಲ್ಲಿ ನೂರಾನಿ ಎದುರು ಪ್ರತಿಸ್ಪರ್ಧಿಗಳು ವಾದಕ್ಕಿಳಿಯುವುದು ಸುಲಭದ ಮಾತಾಗಿರಲಿಲ್ಲ. ನಿಜವನ್ನು ಹೇಳಬೇಕೆಂದುಕೊಂಡರೆ ಒಂಚೂರೂ ಮುಚ್ಚುಮರೆಯಿಲ್ಲದೆ ನಿರ್ದಾಕ್ಷಿಣ್ಯವಾಗಿ ಹೇಳುವ ನೂರಾನಿ ಅವರ ಶೈಲಿ ಮಾತ್ರ ವಿಶಿಷ್ಟವಾದುದು. ಕಾನೂನನ್ನು ಅರೆದು ಕುಡಿದಿದ್ದರು ಎಂದರೆ ಖಂಡಿತಾ ಉತ್ಪ್ರೇಕ್ಷೆಯನಿಸದು.

ಭಾರತದಲ್ಲಿರುವ ದೊಡ್ಡ ದೊಡ್ಡ ಪತ್ರಿಕೆಗಳಿಗೆ ಮಾತ್ರವಲ್ಲದೆ ವಿದೇಶದ ಪತ್ರಿಕೆಗಳಿಗೂ ಕಳೆದ 50 ವರ್ಷಗಳಿಂದ ಸಾವಿರಾರು ಲೇಖನಗಳು, ಅಂಕಣಗಳನ್ನು ಬರೆದಿದ್ದಾರೆ. ನೂರಾನಿ ಅವರ ಬರಹಗಳು ಹಾಗೂ ಹತ್ತಾರು ತೀರ್ಪುಗಳಲ್ಲಿ ಅವರು ವಾದಿಸಿರುವ ನೂರಾರು ಕಾನೂನಿನ ಅಂಶಗಳನ್ನು ವಿದ್ಯಾರ್ಥಿಗಳು ಮಾತ್ರವಲ್ಲದೆ ಹಿರಿಯ ನ್ಯಾಯವಾದಿಗಳು ಕೂಡ ತಮ್ಮ ವಾದಗಳಲ್ಲಿ ಪರಾಮರ್ಶೆಗೆ ತೆಗೆದುಕೊಳ್ಳುತ್ತಾರೆ.

1930ರಲ್ಲಿ ಮುಂಬೈನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನೂರಾನಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾನೂನು ಪದವಿಯನ್ನು ಪಡೆದಿದ್ದರು. 1953ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಾನೂನು ಅಭ್ಯಾಸದ ಹೊರತಾಗಿ, ಅವರು ತಮ್ಮ ಹೆಚ್ಚಿನ ಸಮಯವನ್ನು ರಾಜಕೀಯ ಮತ್ತು ಐತಿಹಾಸಿಕ ವಿಷಯಗಳ ಮೇಲೆ ಬರೆಯಲು ಮೀಸಲಿಟ್ಟರು. ಸಾಂವಿಧಾನಿಕ ವಿಷಯಗಳ ಬಗ್ಗೆ ಅವರ ಆಳವಾದ ಜ್ಞಾನವು ಅವರನ್ನು ಭಾರತೀಯ ರಾಜಕೀಯ ಮತ್ತು ನ್ಯಾಯಶಾಸ್ತ್ರದ ಜನಪ್ರಿಯ ವ್ಯಾಖ್ಯಾನಕಾರರನ್ನಾಗಿ ಮಾಡಿತು. 90 ಮತ್ತು 2000 ದಶಕದಲ್ಲಿ ಕಂಪ್ಯೂಟರ್‌ಗಳು ಪ್ರವರ್ಧಮಾನಕ್ಕೆ ಬಂದರೂ ತಾವು ವಾದ ಮಾಡುವ ಕೊನೆಯವರೆಗೂ ಪುಸ್ತಕ ಹಾಗೂ ಗ್ರಂಥಗಳ ಪರಾಮರ್ಶೆಯ ಮೂಲಕ ಅಧ್ಯಯನ ಮಾಡುತ್ತಿದ್ದರು.  

Advertisements

ಮಾಜಿ ಮುಖ್ಯಮಂತ್ರಿಗಳಾದ ಕೆ ಕರುಣಾನಿಧಿ, ಫಾರೂಕ್‌ ಅಬ್ದುಲ್ಲಾ ಸೇರಿದಂತೆ ದೊಡ್ಡ ದೊಡ್ಡ ರಾಜಕಾರಣಿಗಳು ಇವರ ಕಕ್ಷಿದಾರರಾಗಿದ್ದರು. ಹಾಸಿ ಹೊದ್ದುಕೊಳ್ಳುವಷ್ಟು ಹಣ, ಶ್ರೀಮಂತ್ರಿಕೆ ಇದ್ದರೂ, ಸಾಮಾನ್ಯನಂತೆ ಬದುಕಿದರು. ಆಹಾರ ಪ್ರಿಯರಾಗಿದ್ದ ನೂರಾನಿ ಸ್ಟಾರ್‌ ಹೋಟೆಲ್‌ಗಳಿಗೆ ಹೋಗುವುದಕ್ಕಿಂತ ಹೆಚ್ಚಾಗಿ ರಸ್ತೆಬದಿಯ ಭೋಜನಾಲಯಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದರು. ಮುಂಬೈ, ದಿಲ್ಲಿಯ ಗಲ್ಲಿಗಳಲ್ಲಿ ಸೈಕಲ್‌ ರಿಕ್ಷಾವನ್ನು ಏರಿ ಕಬಾಬ್‌, ಕುರ್ಮಾದಂಥ ಮಾಂಸಾಹಾರವನ್ನು ಜನಸಾಮಾನ್ಯರ ಜೊತೆ ಸವಿಯುತ್ತಿದ್ದರು.  

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಷ್ಟ್ರಪತಿ ಮುರ್ಮು ‘ಘಾಸಿʼಗೊಳ್ಳಲು ಕೋಲ್ಕತ್ತ ಪ್ರಕರಣದ ತನಕ ಕಾಯಬೇಕಿತ್ತೇ?  

The Kashmir Question, The Kashmir Question Revisited, Badruddin Tyabji, Ministers’ Misconduct, Brezhnev’s Plan for Asian Security, The Presidential System, The Trial of Bhagat Singh, Constitutional Questions in India, The Babri Masjid Question (Vol. I, II) ಸೇರಿದಂತೆ ಒಟ್ಟು 16 ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಆರ್‌ಎಸ್‌ಎಸ್‌ನ ನಿಜ ಸ್ವರೂಪದ ಬಗ್ಗೆ 2008ರಲ್ಲಿ ಬರೆದ ‘The RSS and the BJP:A Division of Labour’ ಕೃತಿ ಸಂಘ ಪರಿವಾರದ ಬಣ್ಣವನ್ನು ಬಿಚ್ಚಿಡುತ್ತದೆ.

ಆರ್‌ಎಸ್‌ಎಸ್‌ನ ನಿಜ ಸ್ವರೂಪ ಬಯಲು

ಅಸತ್ಯಗಳನ್ನು, ಅರ್ಧ ಸತ್ಯಗಳನ್ನು ಪ್ರಚಾರಮಾಡುತ್ತ ಸಂಸ್ಕೃತಿಯ ಹೆಸರಿನಲ್ಲಿ ಜನವಿರೋಧಿ ಮೌಲ್ಯಗಳನ್ನು ಬಿತ್ತಿ ಸಮಾಜವನ್ನು ಒಡೆದು ಧ್ರುವೀಕರಿಸುತ್ತಿರುವ ಆರ್‌ಎಸ್‌ಎಸ್‌, ಬಿಜೆಪಿ ಮತ್ತಿತರ ಸಂಘ ಪರಿವಾರದ ಸಂಘಟನೆಗಳ ನಿಜಸ್ವರೂಪವನ್ನು ಓದುಗರಿಗೆ ಅದರಲ್ಲೂ ಮುಖ್ಯವಾಗಿ ಹೊಸತಲೆಮಾರಿನವರಿಗೆ ತಿಳಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ತಿಳಿಸಿದ್ದರು. ಭಾರತ ಅಳವಡಿಸಿಕೊಂಡಿರುವ ಪ್ರಜಾತಾಂತ್ರಿಕ ವ್ಯವಸ್ಥೆ ಮತ್ತು ಜಾತ್ಯತೀತತೆಯಂತಹ ಸಾಂವಿಧಾನಿಕ ಮೌಲ್ಯಗಳಿಗೆ ಪ್ರಖರ ಹಿಂದೂತ್ವವಾದಿ ಆರ್‌ಎಸ್‌ಎಸ್‌ ಹೇಗೆ ಒಂದು ಬಹುದೊಡ್ಡ ಗಂಡಾಂತರವಾಗಿದೆ ಎಂಬುದನ್ನು ನೂರಾನಿ ಅವರು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಆರೆಸ್ಸೆಸ್‌ನ ಫ್ಯಾಸಿಸ್ಟ್ ಮುಖವನ್ನು, ಅದರ ಆಷಾಢಭೂತಿತನವನ್ನು ಬೆತ್ತಲುಗೊಳಿಸಿದ್ದಾರೆ. ಸಂಘ ಪರಿವಾರ ಕುರಿತಂತೆ ಜನಮಾನಸದಲ್ಲಿ ಆಳವಾಗಿ ಬೇರೂರಿರುವ ಕೆಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತ ಜನಸಾಮಾನ್ಯರನ್ನು ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಪುರಾವೆಗಳೊಂದಿಗೆ ಉತ್ತರ ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

ಆರ್‌ಎಸ್‌ಎಸ್‌ ಮತ್ತು ಫ್ಯಾಸಿಸ್ಟ್ ಸಂಘಟನೆಗಳ ನಡುವೆ ಯಾವ ತೆರನಾದ ಸಾಮ್ಯಗಳಿವೆ? ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತೀಯರು ನಡೆಸಿದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂದೂತ್ವವಾದಿ ಶಕ್ತಿಗಳು ನಿಜಕ್ಕೂ ಯಾವ ಪಾತ್ರ ವಹಿಸಿದ್ದವು? ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೂ ಆರ್‌ಎಸ್‌ಎಸ್‌ಗೂ ಯಾವುದೇ ರೀತಿಯ ಸಂಬಂಧವಿರಲಿಲ್ಲವೆಂದು ಪ್ರತಿಪಾದಿಸುವ ಸಂಘ ಪರಿವಾರದ ಹೇಳಿಕೆಗಳು ಎಷ್ಟರ ಮಟ್ಟಿಗೆ ಸತ್ಯ? ಆರ್‌ಎಸ್‌ಎಸ್‌ನ ರಾಜಕೀಯ ಅಂಗವಾದ ಭಾರತೀಯ ಜನಸಂಘ ರೂಪ ತಾಳಿದ್ದು ಹೇಗೆ? ಇದೇ ಜನಸಂಘ ನಂತರದಲ್ಲಿ ಭಾರತೀಯ ಜನತಾ ಪಕ್ಷವೆಂಬ ಹೊಸ ಅವತಾರವನ್ನು ಹೇಗೆ ಪಡೆದುಕೊಂಡಿತು? ಬಿಜೆಪಿಗೆ ಮತ್ತು ಅದರ ಮುಖಾಂತರ ಆರೆಸ್ಸೆಸ್‌ಗೆ ರಾಜಕೀಯ ರಂಗದಲ್ಲಿ ತಕ್ಕ ಮಟ್ಟಿನ ಮಾನ್ಯತೆ ಗಳಿಸಿಕೊಳ್ಳಲು ಸಾಧ್ಯವಾದುದು ಹೇಗೆ? ಸಂಘ ಪರಿವಾರವೆಂಬ ದೊಡ್ಡಾಲದ ಮರದ ಅನೇಕ ಶಾಖೆಗಳು ಯಾವುವು? ಸಂಘ ಪರಿವಾರದ ನಾನಾ ಅಂಗಸಂಸ್ಥೆಗಳಿಗೆ ಮತ್ತು ನಾಯಕರುಗಳಿಗೆ ನಿಗದಿಪಡಿಸಲಾಗುವ ಶ್ರಮ ವಿಭಜನೆ ಹೇಗೆ ಕೆಲಸ ಮಾಡುತ್ತದೆ? ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ನಿಜವಾಗಿಯೂ ನಡೆದದ್ದೇನು? ಎಂಬುದರ ಬಗ್ಗೆ ತಿಳಿಸುವ ಹಲವು ಮಾಹಿತಿಗಳು ಈ ಕೃತಿಯಲ್ಲಿ ಒಳಗೊಂಡಿದೆ.

ಸಂಘ ಪರಿವಾರದ ಪ್ರಮುಖ ಅಂಶವಾದ ಉದ್ದೇಶಪೂರ್ವಕ ಅಸ್ಪಷ್ಟತೆಯನ್ನು ನೂರಾನಿ ಅವರು ಹಲವು ವಾಸ್ತವಗಳ ಮೂಲಕ ಬಯಲಿಗೆಳೆದಿದ್ದಾರೆ. ಸಂಘ ಪರಿವಾರವನ್ನು ನಿಗ್ರಹಿಸಿ ಸೋಲಿಸದಿದ್ದಲ್ಲಿ ಈಗಾಗಲೇ ದುರ್ಬಲಗೊಂಡಿರುವ ಜಾತ್ಯತೀತತೆಯ ಆದರ್ಶವನ್ನೂ ಅದರೊಂದಿಗೆ ಭಾರತದ ಪ್ರಜಾತಂತ್ರವನ್ನೂ ಕೈಬಿಡಬೇಕಾಗುತ್ತದೆಂದು ಸ್ಪಷ್ಟವಾಗಿ ನಮ್ಮನ್ನು ಎಚ್ಚರಿಸಿದ್ದಾರೆ. ಆರ್‌ಎಸ್‌ಎಸ್‌ ಸಾರ್ವಜನಿಕವಾಗಿ ತಾನೊಂದು ‘ಸಾಂಸ್ಕೃತಿಕ’ ಸಂಸ್ಥೆಯೆಂದು ಹೇಳಿಕೊಳ್ಳುತ್ತ ವಾಸ್ತವದಲ್ಲಿ ‘ಸಂಸ್ಕೃತಿ’ ಎನ್ನುವ ಪದಕ್ಕೆ ಕೊಡುವ ವ್ಯಾಖ್ಯಾನ ಮಾತ್ರ ಬೇರೆಯಾಗಿದೆ. ಸಮಾಜ ಅಥವಾ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಇತ್ಯಾದಿ ಎಲ್ಲ ಅಂಶಗಳನ್ನು ‘ಸಂಸ್ಕೃತಿ’ ಒಳಗೊಂಡಿದೆಯೆಂದು ಅದು ನ್ಯಾಯಾಲಯಕ್ಕೆ ತಿಳಿಸಿರುವುದನ್ನು ನೂರಾನಿ ದಾಖಲೆ ಸಮೇತವಾಗಿ ತಮ್ಮ ಬರವಣಿಗೆಯಲ್ಲಿ ತಿಳಿಸಿದ್ದಾರೆ.

ಭಾರತದ ರಾಜಕಾರಣದ ಇತಿಹಾಸದಲ್ಲಿ ಸಂಘ ಪರಿವಾರ ವಹಿಸಿರುವ ಪಾತ್ರದ ಕುರಿತು ತಿಳಿಯಲು ಆಸಕ್ತಿ ಉಳ್ಳವರಿಗೆಲ್ಲ ಈ ಕೃತಿ ಸಾಕಷ್ಟು ಉಪಯುಕ್ತ ಮಾಹಿತಿ ನೀಡುತ್ತದೆ. ಭಾರತದ ಸೌಹಾರ್ದಯುತ ಸಾಮಾಜಿಕ ಬದುಕನ್ನು ಹಾಳುಗೆಡವಿ ಅದನ್ನೊಂದು ಹಿಂದೂ ರಾಷ್ಟ್ರವಾಗಿಸಿ ದಲಿತ, ಅಲ್ಪಸಂಖ್ಯಾತರನ್ನು ಎರಡನೆ ಮತ್ತು ಮೂರನೆ ದರ್ಜೆಯ ಸೇವಕರನ್ನಾಗಿಸುವ ರಹಸ್ಯ ಕಾರ್ಯಸೂಚಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸುತ್ತಿರುವ ಸಂಘ ಪರಿವಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿರುವುದನ್ನು ನೂರಾನಿ ಜಗತ್ತಿಗೆ ತಮ್ಮ ಬರವಣಿಗೆಯ ಮೂಲಕ ತೋರ್ಪಡಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X