ಯುಜಿಸಿ ರೂಪಿಸಿರುವ ಹೊಸ ಕರಡಿಗೆ ಆಕ್ಷೇಪ ಸಲ್ಲಿಸಲು ಆರು ರಾಜ್ಯಗಳ ಜಂಟಿ ನಿರ್ಧಾರ

Date:

Advertisements

ಯುಜಿಸಿ ರೂಪಿಸಿರುವ 2025 ರ ಹೊಸ ಕರಡಿಗೆ ಆಕ್ಷೇಪ ಸಲ್ಲಿಸಲು ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಚಿವರುಗಳ ಸಮಾವೇಶದಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಯುಜಿಸಿ ರೂಪಿಸಿರುವ ಹೊಸ ಕರಡು ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನವಾಗಿದ್ದು, ಶಿಕ್ಷಣ, ಬೋಧನಾ ಕ್ಷೇತ್ರದಲ್ಲಿ ಅನುಭವ ಇಲ್ಲದವರು ಕುಲಪತಿಗಳಾಗಿ ಅಧಿಕಾರ ನಡೆಸಬಹುದಾಗಿದೆ. ಇದರಿಂದ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರಿಗೆ ಅನ್ಯಾಯವಾಗುತ್ತದೆ. ಇದುವರೆಗೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಸಂಬಂಧ ರಾಜ್ಯ ಸರ್ಕಾರ ಶೋಧನಾ ಸಮಿತಿಯನ್ನು ರಚಿಸುತ್ತಿದ್ದು, ಪ್ರಸ್ತುತ ಹೊಸ ಕರಡಿನ ಅನ್ವಯ ಈ ಅಧಿಕಾರವನ್ನು ರಾಜ್ಯ ಸರ್ಕಾರದ ಕೈಯಿಂದ ಕಿತ್ತುಕೊಳ್ಳಲಾಗಿದೆ. ಇದರಿಂದ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವನ್ನು ನೀಡಿದಂತಾಗಿದೆ” ಎಂದರು.

Advertisements

“ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬೇಕಾಗುವ ಐಚ್ಛಿಕ ವಿಷಯದಲ್ಲಿನ ಮೂಲ ಪದವಿ ಸೇರಿದಂತೆ ಅತಿಥಿ ಶಿಕ್ಷಕರು/ಸಂದರ್ಶಕ ಅಧ್ಯಾಪಕರು/ ಪ್ರೊಫೆಸರ್ ಮುಂತಾದವರ ನೇಮಕಾತಿ ಕುರಿತು ಮಾರ್ಗಸೂಚಿಯನ್ನು ಅಂತಿಮ ಗೊಳಿಸುವ ಮುನ್ನ ಹೆಚ್ಚಿನ ಸ್ಷಷ್ಟತೆ ನೀಡಬೇಕಾಗಿದೆ” ಎಂದು ಹೇಳಿದರು.

“ರಾಷ್ಟ್ರೀಯ ಶಿಕ್ಷಣ ನೀತಿ( NEP) ಯಲ್ಲಿರುವ ಎಲ್ಲ ಅಂಶಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸದಿದ್ದಲ್ಲಿ, ಶಿಕ್ಷಾರ್ಹ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರ ರಾಜ್ಯಗಳ ಸ್ವಾಯತ್ತ ಮನೋಭಾವಕ್ಕೆ ಧಕ್ಕೆ ತರುವಂತದ್ದು. ಅದನ್ನು ಪರಿಶೀಲಿಸಬೇಕಾದ ಅಗತ್ಯತೆ ಇದೆ. ಒಟ್ಟಾರೆಯಾಗಿ ಯುಜಿಸಿ ನಿಯಮಗಳನ್ನು ರಚಿಸುವ ಸಂದರ್ಭದಲ್ಲಿ ರಾಜ್ಯಗಳೊಡನೆ ಚರ್ಚೆ ಮತ್ತು ಸಮಾಲೋಚನೆ ನಡೆಸಬೇಕಾದ ಅಗತ್ಯತೆ ಇದೆ” ಎಂದು ತಿಳಿಸಿದರು.

ಪ್ರಮುಖ ನಿರ್ಣಯಗಳು

  1. ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವಲ್ಲಿ ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕು. ಕರಡು ಯುಜಿಸಿ ನಿಯಮಗಳು ರಾಜ್ಯ ಕಾಯಿದೆಗಳ ಅಡಿಯಲ್ಲಿ ಸ್ಥಾಪಿಸಲಾದ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಲ್ಲಿ ರಾಜ್ಯ ಸರ್ಕಾರಗಳಿಗೆ ಯಾವುದೇ ಪಾತ್ರವನ್ನು ಒದಗಿಸಿರುವುದಿಲ್ಲ. ಇದರಿಂದಾಗಿ ಒಕ್ಕೂಟ ವ್ಯವಸ್ಥೆಯಲ್ಲಿ (Federal system) ರಾಜ್ಯಗಳ ನ್ಯಾಯಸಮ್ಮತ ಹಕ್ಕುಗಳನ್ನು ಹತ್ತಿಕ್ಕುತ್ತದೆ.
  2. ಯು.ಜಿ.ಸಿ. ನಿಯಮಗಳು ಕುಲಪತಿಗಳ ಆಯ್ಕೆ ಸಮಿತಿಗಳನ್ನು ರಚಿಸುವಲ್ಲಿ ರಾಜ್ಯಗಳ ಹಕ್ಕುಗಳನ್ನು ತೀವ್ರವಾಗಿ ಮೊಟಕುಗೊಳಿಸುತ್ತವೆ
  3. ಶೈಕ್ಷಣಿಕ ವಲಯದ ಹೊರಗಿನವರನ್ನು ಕುಲಪತಿಗಳಾಗಿ ನೇಮಕ ಮಾಡಲು ಅವಕಾಶ ಕಲ್ಪಿಸಿರುವ ನಿಯಮವನ್ನು ಹಿಂಪಡೆಯುವ ಅಗತ್ಯವಿದೆ.
  4. ಕುಲಪತಿಗಳ ನೇಮಕಾತಿಗಾಗಿ ನಿಗಧಿಪಡಿಸಿರುವ ಅರ್ಹತೆಗಳು, ಅವಧಿ ಮುಂತಾದವು ಉನ್ನತ ಶಿಕ್ಷಣದ ಗುಣಮಟ್ಟಗಳಿಗೆ ಅಡ್ಡಿಯಾಗುವುದರಿಂದ ಇವುಗಳನ್ನು ಗಂಭೀರವಾದ ಮರು-ಪರಿಶೀಲಿಸಬೇಕಾದ ಅಗತ್ಯವಿರುತ್ತದೆ.
  5. ಶಿಕ್ಷಕರ ಕಾರ್ಯಕ್ಷಮತೆ ಮೌಲ್ಯಮಾಪನ ಮತ್ತು ಶೈಕ್ಷಣಿಕ ಸೂಚಕ (ಎಪಿಐ) ವ್ಯವಸ್ಥೆಯನ್ನು ತೆಗೆದುಹಾಕಿ ಹೊಸ ವ್ಯವಸ್ಥೆಯನ್ನು ಜಾರಿಮಾಡುವುದನ್ನು ಮರು-ಪರಿಶೀಲಿಸಬೇಕು.
  6. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಗತ್ಯವಾಗಿ ಬೇಕಾಗಿರುವ ಸಂಬಧಪಟ್ಟ ಐಚ್ಚಿಕ ವಿಷಯದಲ್ಲಿ ಮೂಲ ಪದವಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಹಲವಾರು ಉಪಬಂಧಗಳನ್ನು ತೀರ್ವವಾಗಿ ಮರು-ಪರಿಶೀಲನೆ ಮಾಡುವ ಅಗತ್ಯತೆಯಿದೆ.
  7. ಶಿಕ್ಷಕರ ಗುತ್ತಿಗೆ ನೇಮಕಾತಿ/ಅತಿಥಿ ಶಿಕ್ಷಕರು/ಸಂದರ್ಶಕ ಅಧ್ಯಾಪಕರು/ಪ್ರೊಫೆಸರ್ ಆಫ್ ಪ್ರಾಕ್ಟಿಸ್/ಎಮಿರಿಟಸ್ ಪ್ರೊಫೆಸರ್ ಮುಂತಾದವರ ನೇಮಕಾತಿಗಳ ಬಗ್ಗೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಮುನ್ನ ಇವುಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕಾಗಿದೆ;
  8. ಯು.ಜಿ.ಸಿ. ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಆಗುವ ಶಿಕ್ಷಾರ್ಹ ಪರಿಣಾಮಗಳು ಅತ್ಯಂತ ತೀರ್ವ, ವಿಪರೀತ ಹಾಗೂ ಪ್ರಜಾಸತ್ತಾತ್ಮಕವಲ್ಲವುಗಳಾಗಿದ್ದು ಇವುಗಳನ್ನು ಪುನರ್ ಪರಿಶೀಲಿಸಬೇಕು.
  9. ಎನ್.ಇ.ಪಿಯಲ್ಲಿರುವ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸದಿದ್ದರೆ ಶಿಕ್ಷಾರ್ಹ ಕ್ರಮಗಳನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಸರ್ವಾಧಿಕಾರಿ ಮತ್ತು ಫೆಡರಲ್ ಚೌಕಟ್ಟಿನಲ್ಲಿ ರಾಜ್ಯಗಳ ಸ್ವಾಯತ್ತತೆಯ ಮನೋಭಾವಕ್ಕೆ ವಿರುದ್ಧವಾಗಿದೆ.
  10. ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ನಾವೀನ್ಯತೆ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಉದ್ಯಮ- ಅಕಾಡೆಮಿ ಸಹಯೋಗದ ಅಗತ್ಯಕ್ಕೆ ಸಂಬಂಧಿಸಿದ ನಿಯಮಗಳಿಗೆ ಹೆಚ್ಚಿನ ಒತ್ತು ಅಗತ್ಯ.
  11. ಕರಡು ಯು.ಜಿ.ಸಿ. ನಿಯಮಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಶ್ರೇಣಿಕರಣ ಮಾಡಲು ರಚಿಸಿರುವ ಮಾರ್ಗಸೂಚಿಗಳು ಸರ್ಕಾರಿ/ಸಾರ್ವಜನಿಕ ವಲಯದ ಸಂಸ್ಥೆಗಳ ಕಲ್ಯಾಣವನ್ನು ಬದಿಗಿಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೂಡಿವೆ.
  12. ಸ್ನಾತಕ ಪದವಿ ಕೋರ್ಸುಗಳ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ಕಡ್ಡಾಯ ಮಾಡಿರುವುದು ಒಟ್ಟು ದಾಖಲಾತಿ ಪ್ರವೇಶ ಅನುಪಾತ (GER) ಹೆಚ್ಚಿಸಲು ಅಡ್ಡಗಾಲು ಹಾಕುವಂತಿದೆ ಮತ್ತು ಅಂತರ್ಗತ ಶಿಕ್ಷಣ (inclusive education ) ಒದಗಿಸಲು ಅಡ್ಡಿಯಾಗುತ್ತದೆ.
  13. ಬಡ್ತಿ, ದೈವಾರ್ಷಿಕ ಪರೀಕ್ಷೆಗಳು, ಫಾಸ್ಟ್ ಟ್ರ್ಯಾಕ್ ಪದವಿ ಪರೀಕ್ಷೆ, ಉಭಯ ಪದವಿಗಳು (dual degrees), ಬಹು ಪ್ರವೇಶ ಮತ್ತು ನಿರ್ಗಮನ ಮುಂತಾದ ಅಂಶಗಳು ಮತ್ತಷ್ಟು ಚರ್ಚೆಗೊಳಪಡಬೇಕು ಮತ್ತು ಅನುಷ್ಠಾನಕ್ಕೆ ಮುಂಚೆ ಸ್ಪಷ್ಟನೆ ಬೇಕು.
  14. ಆದುದರಿಂದ ಕರಡು ಯು.ಜಿ.ಸಿ. ರೆಗ್ಯುಲೇಷನ್ಸ್-2025 ನ್ನು ಕೂಡಲೇ ಹಿಂಪಡೆಯಬೇಕು.
  15. ಯು.ಜಿ.ಸಿ. ವಿನಿಯಮಗಳನ್ನು ರಚಿಸುವ ಪ್ರಕ್ರಿಯೆಯಲ್ಲಿ ಸಹಕಾರಿ ಒಕ್ಕೂಟ ಮನೋಭಾವದ ದೃಷ್ಟಿಯಿಂದ ರಾಜ್ಯಗಳೊಂದಿಗೆ ಸಹಯೋಗ, ಸಮಾಲೋಚನೆಗಳಲ್ಲಿ ತೊಡಗುವುದು ಅಗತ್ಯ.

ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ತೆಲ್ಲಂಗಾಣ ರಾಜ್ಯಗಳ ಉನ್ನತ ಶಿಕ್ಷಣ ಸಚಿವರು ನಿರ್ಣಯಗಳಿಗೆ ಸಹಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X