ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬದ ಬಗ್ಗೆ ವೈಯಕ್ತಿಕ ನಿಂದನೆ ಮಾಡಿರುವ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರಿಗೆ ಬುದ್ದಿಭ್ರಮಣೆಯಾಗಿದೆ. ಅವರನ್ನು ಸ್ವತಃ ಬಿಜೆಪಿಯೇ ಎತ್ತಿ ಮೂಲೆಗೆ ಎಸೆದಿದೆ. ಯತ್ನಾಳ್ ಬಾಯಿ ಬಚ್ಚಲು ಎಂದು ಬಿಎಸ್‌ವೈ ಬಣದ ನಾಯಕರೇ ಹೇಳುತ್ತಿದ್ದಾರೆ. ಯತ್ನಾಳ್ ಅವರ ಮಾನಸಿಕ ಮತ್ತು ಬಾಯಿ ಚಿಕಿತ್ಸೆಗೆ ಕಾಂಗ್ರೆಸ್ ಸರ್ಕಾರ ಉಚಿತ ಚಿಕೆತ್ಸೆ ವ್ಯವಸ್ಥೆ ಕಲ್ಪಿಸಲು ಸಿದ್ಧವಿದೆ. ಇದು ಕಾಂಗ್ರೆಸ್‌ನ ಗ್ಯಾರಂಟಿ ಎಂದು ಕೆಪಿಸಿಸಿ ಹೇಳಿದೆ.
ಯತ್ನಾಳ್ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪತ್ರಿಕಾ ಪ್ರಕಟಣೆ ನೀಡಿದೆ. “ಮುಸ್ಲಿಂಮರೆಲ್ಲರನ್ನು ಪಾಕಿಸ್ತಾನ ದೃಷ್ಟಿಯಿಂದ ನೋಡುವ ಯತ್ನಾಳ್ ಅವರು ಸ್ವತಃ ಮೌಲ್ವಿ ಕುಟುಂಬದೊಂದಿಗೆ ವ್ಯವಹಾರಿಕ ಸಂಬಂಧ ಇಟ್ಟುಕೊಂಡಿರಲಿಲ್ಲವೇ. ಹಾಗಾದರೆ, ಯತ್ನಾಳ್ ಅವರಿಗೂ ಪಾಕಿಸ್ತಾನದ ಜೊತೆ ಸಂಬಂಧವಿದೆ ಎನ್ನೋಣವೇ” ಎಂದು ಪ್ರಶ್ನಿಸಿದೆ.
“ಪಾಕಿಸ್ತಾನದ ಜಪ ಮಾಡುವುದನ್ನ ಬಿಟ್ಟು ಬಿಜೆಪಿಯಲ್ಲಿ ಅವರ ಅಸ್ಥಿತ್ವ ಏನು ಎಂಬುದನ್ನ ಚಿಂತಿಸಬೇಕು. ಬಿಜೆಪಿಯಲ್ಲಿ ಬದಿಗೆ ಸರಿದು ಬೀದಿಗೆ ಬಿದ್ದಿರುವ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮತಿಭ್ರಮಣೆಯಲ್ಲಿ ಕೀಳು ಅಭಿರುಚಿಯ ಹೇಳಿಕೆಗಳನ್ನ ನೀಡುವ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಯತ್ನಾಳ್ ಅವರಿಗೆ ಒಳ್ಳೆಯ ಚಿಕಿತ್ಸೆಯ ಅಗತ್ಯತೆ ಇದೆ” ಎಂದು ಕಾಂಗ್ರೆಸ್ ಹೇಳಿದೆ.
“ಯತ್ನಾಳ್ ಅವರಿಗೆ ಉಚಿತ ಮಾನಸಿಕ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಸಿದ್ಧವಿದೆ. ಇದು ಕಾಂಗ್ರೆಸ್‌ನ ಗ್ಯಾರಂಟಿ” ಎಂದು ತಿರುಗೇಟು ನೀಡಿದೆ.
ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಇದ್ದರೆ ಪಕ್ಷದಲ್ಲಿ ಸ್ಥಾನಮಾನ ಸಿಗಬಹುದೆಂಬ ದುರಾಲೋಚನೆ,, ಶೂದ್ರರನ್ನು ಕೆಲಸಕ್ಕೆ ತಕ್ಕಂತೆ ಬಳಕೆಮಾಡಿಕೊಳ್ಳುವ ಉತ್ತರದ ವೈದಿಕರ ತಂತ್ರಗಾರಿಕೆಗೆ ಬಲಿಯಾಗುವರು