ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳಿನ ಹೆಸರಾಂತ ಹಿರಿಯ ನಟ, ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಅವರಿಗೆ 71 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ನಂತರ ತಕ್ಷಣವೇ ಅವರನ್ನು ಐಸಿಯೂಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ(DMDK) ಎಂಬ ಪಕ್ಷವನ್ನು ಕೂಡ ಸ್ಥಾಪಿಸಿ, ರಾಜಕಾರಣಿಯಾಗಿ ಕೂಡ ಗುರುತಿಸಿಕೊಂಡಿದ್ದರು.
#WATCH | Tamil Nadu: Actor and DMDK Chief Captain Vijayakanth passes away at a hospital in Chennai.
(Visuals from Captain Vijayakanth’s residence in Chennai) pic.twitter.com/pNd6ieJWOh
— ANI (@ANI) December 28, 2023
ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ವಿಜಯಕಾಂತ್, ಚಲನಚಿತ್ರೋದ್ಯಮದಿಂದ ಕ್ಯಾಪ್ಟನ್ ಎಂದು ಸಂಭ್ರಮದಿಂದ ಕರೆಯಲ್ಪಡುತ್ತಿದ್ದರು. ಸೆಲ್ವಮಣಿ ನಿರ್ದೇಶನದ ವಿಜಯಕಾಂತ್ ನಟನೆಯ 100ನೇ ಚಿತ್ರ ‘ಕ್ಯಾಪ್ಟನ್ ಪ್ರಭಾಕರನ್’ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದು ಸೂಪರ್ ಹಿಟ್ ಆದ ಬಳಿಕ ವಿಜಯಕಾಂತ್ ಅವರನ್ನು ಅಭಿಮಾನಿಗಳು ಮತ್ತು ಚಿತ್ರರಂಗದವರು ‘ಕ್ಯಾಪ್ಟನ್’ ಎಂದೇ ಕರೆಯುತ್ತಿದ್ದರು.
ನಟ ವಿಜಯಕಾಂತ್ ಅವರು ಆಗಸ್ಟ್ 25, 1952 ರಂದು ಅರುಪ್ಪುಕೊಟ್ಟೈ ಬಳಿಯ ರಾಮಾನುಜಪುರಂನಲ್ಲಿ ಅಳಗರಸ್ವಾಮಿ ಮತ್ತು ಆಂಡಾಳ್ ದಂಪತಿಗೆ ಜನಿಸಿದರು. ಅದರ ನಂತರ ಅವರ ಕುಟುಂಬ ವ್ಯಾಪಾರದ ಕಾರಣದಿಂದ ಮಧುರೈಗೆ ಸ್ಥಳಾಂತರಗೊಂಡಿದ್ದರು.
ಮೊದಲ ಬಾರಿಗೆ 1979ರಲ್ಲಿ ಗಜ ನಿರ್ದೇಶನದ ‘ಇನಿಕ್ಕುಮ್ ಇಹಲಾ’ ಚಿತ್ರದ ಮೂಲಕ ತೆರೆಗೆ ಪದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ನಿರ್ದೇಶಕರು ತಮ್ಮ ಮೂಲ ಹೆಸರನ್ನು ವಿಜಯರಾಜ್ ಎಂದು ವಿಜಯಕಾಂತ್ ಎಂದು ಬದಲಾಯಿಸಿದ್ದರು.
எனது அன்பிற்கினிய சகோதரர், தேசிய முற்போக்குத் திராவிட கழகத்தின் நிறுவனத் தலைவர், தமிழ் சினிமாவின் தனித்துவம் மிக்க நடிகர், கேப்டன் என்று அனைவராலும் அன்பு பாராட்டப்பட்ட விஜயகாந்த் அவர்களின் மறைவுச் செய்தி மிகுந்த துயரத்தைத் தருகிறது.
தன் ஒவ்வொரு செயலிலும் மனிதநேயத்தைக்…
— Kamal Haasan (@ikamalhaasan) December 28, 2023
ನಟ ವಿಜಯಕಾಂತ್, ನಿರ್ದಿಷ್ಟ ಪ್ರಕಾರದ ಚಿತ್ರಗಳಲ್ಲಿ ನಟಿಸದೆ, ಕೌಟುಂಬಿಕ ಚಿತ್ರ, ಸಾಹಸ ಚಿತ್ರಗಳು, ಹಳ್ಳಿ ಚಿತ್ರಗಳು, ಸೆಂಟಿಮೆಂಟ್ ಚಿತ್ರಗಳ ಪಾತ್ರ ಸೇರಿದಂತೆ ಎಲ್ಲ ರೀತಿಯ ಕಥೆಗಳಲ್ಲಿ ನಟಿಸಲು ಆಯ್ಕೆ ಮಾಡಿಕೊಂಡಿದ್ದರಿಂದ ತಮಿಳುನಾಡಿನಲ್ಲಿ ಜನಮನ್ನಣೆ ಗಳಿಸಿಕೊಂಡಿದ್ದರು. ಮೈ ಬಣ್ಣ ಕಪ್ಪಾಗಿದ್ದ ಕಾರಣಕ್ಕೆ ಮೊದಮೊದಲು ಅವರಿಗೆ ನಾಯಕ ನಟನ ಪಾತ್ರ ಸಿಕ್ಕಿರಲಿಲ್ಲ. ಬಳಿಕ ತಮ್ಮ ಪ್ರತಿಭೆಯಿಂದ ಜನರಿಂದ ಮನ್ನಣೆ ಗಳಿಸಿದ ಬಳಿಕ, ನಾಯಕ ನಟನಾಗಿ ಕೂಡ ಗುರುತಿಸಿಕೊಂಡರು. ಆ ಬಳಿಕ ‘ಕರುಪ್ಪು ಎಂಜಿಆರ್’ ಎಂಬ ಹೆಸರು ಕೂಡ ಗಳಿಸಿಕೊಂಡಿದ್ದರು.
ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಸಂತಾಪ
ವಿಜಯಕಾಂತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಚಿತ್ರನಟ ಕಮಲ್ ಹಾಸನ್ ಸೇರಿದಂತೆ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಜಯಕಾಂತ್ ಅವರೊಂದಿಗಿನ ಹಳೆಯ ಫೋಟೊ ಹಂಚಿಕೊಂಡಿರುವ ಪ್ರಧಾನಿ ಮೋದಿ, “ವಿಜಯಕಾಂತ್ ಅರ ನಿಧನದಿಂದ ಅತೀವ ದುಃಖವಾಗಿದೆ. ತಮಿಳು ಚಲನಚಿತ್ರದ ದಂತಕಥೆ, ಅವರ ವರ್ಚಸ್ಸು ಲಕ್ಷಾಂತರ ಜನರ ಹೃದಯಗಳನ್ನು ಸ್ಪರ್ಶಿಸಿದ್ದವು. ರಾಜಕೀಯ ನಾಯಕರಾಗಿ ಸಾರ್ವಜನಿಕ ಸೇವೆಯಲ್ಲೂ ಕೂಡ ತೊಡಗಿಕೊಂಡಿದ್ದರು. ಅವರು ಆತ್ಮೀಯ ಸ್ನೇಹಿತರಾಗಿದ್ದರು. ಅವರ ಕುಟುಂಬ, ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ನನ್ನ ಸಂತಾಪವಿದೆ ” ಎಂದು ಟ್ವೀಟ್ ಮಾಡಿದ್ದಾರೆ.
Extremely saddened by the passing away of Thiru Vijayakanth Ji. A legend of the Tamil film world, his charismatic performances captured the hearts of millions. As a political leader, he was deeply committed to public service, leaving a lasting impact on Tamil Nadu’s political… pic.twitter.com/di0ZUfUVWo
— Narendra Modi (@narendramodi) December 28, 2023