ಪರಿವಾರವಾದ.. ಸ್ವಜನಪಕ್ಷಪಾತ.. ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮೋದಿ ಆಗಾಗ್ಗೆ ಬಳಸುವ ಪದಗಳಿವು ಎಂದು ನಟ ಕಿಶೋರ್ ಹೇಳಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಿಶೋರ್ ಅವರ ಬರಹ ಹೀಗಿದೆ;
ಮಿ. ಮೋದಿ, ಯಾರಾದರೂ ಒಂದು ಕೆಲಸಕ್ಕೆ ಅನರ್ಹರಾಗಿದ್ದರೆ, ಇನ್ನೊಬ್ಬರನ್ನು ತುಳಿದು ಹಣ ಮತ್ತು ಅಧಿಕಾರವನ್ನು ಗಳಿಸುವ, ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅವರ ವಂಶಾವಳಿಯನ್ನು ಬಳಸಿದರೆ ಅದು ಸ್ವಜನಪಕ್ಷಪಾತ ಎಂದು ನಾನು ಒಪ್ಪುತ್ತೇನೆ.
ಆದರೆ, ತನ್ನ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ನಂತರವೂ ಒಬ್ಬ/ಳು ಹುತಾತ್ಮರ ಮಗ/ಳು ಸೈನಿಕನಾ/ಳಾಗಲು ಬಯಸಿದರೆ ಅದೇ ರೀತಿ ಪರಿಗಣಿಸಬಹುದೇ?? ಅಥವಾ ಸತ್ತ ರೈತನ/ಳ ಮಗ/ಳು ರೈತನಾ/ಳಾಗಿ ಮುಂದುವರಿಯಲು ಬಯಸಿದರೆ??
ಅದೇ ಒಬ್ಬ ರಾಹುಲ್ ಗಾಂಧಿ ತನ್ನ ತಂದೆ ಬಾಂಬ್‌ನಿಂದ ತುಂಡು ತುಂಡಾಗುವುದನ್ನು, ತನ್ನ ಅಜ್ಜಿ ಬುಲೆಟ್‌ನಿಂದ ಛಿದ್ರವಾದದ್ದನ್ನು ನೋಡಿದ ನಂತರವೂ ರಾಷ್ಟ್ರಸೇವೆ ಮಾಡಲು ಬಯಸಿದರೆ, ಅದನ್ನು ಹೇಗೆ ನೀವು ಖಂಡಿಸಬಹುದು?
ಅಂತಹ ಸ್ಥಿತಿಯಲ್ಲಿ ಅವರ ತಾಯಿಯನ್ನು ‘ಜರ್ಸಿ ಹಸು’ ಎಂದೂ ಅವರನ್ನು ‘ಪಪ್ಪು’ ಎಂದೂ ಎಲ್ಲರಿಂದಲೂ ಕರೆಸುವ ಕೀಳು ಮಟ್ಟಕ್ಕೆ ನೀವು ಬಿದ್ದಾಗ ಅವರಿಗೆ ಹೇಗನಿಸಬಹುದು? ಅವರ ಜಾಗದಲ್ಲೊಮ್ಮೆ ನಿಂತು ನೋಡಿ
ನೀವು ನಿಮ್ಮ ಸಾಮ್ರಾಜ್ಯ, ಅಧಿಕಾರ ಮತ್ತು ಕೊಳಕು ತಂತ್ರಗಳನ್ನು ಬಳಸಿ ಅವರ ತೇಜೋವಧೆ ಮಾಡಿದ ನಂತರವೂ ಸಹ ಸತ್ಯ ಮತ್ತು ಪ್ರೀತಿಯ ಹಾದಿಯಲ್ಲಿ ನಡೆದು ತನ್ನ ಮನೋಸ್ಥೈರ್ಯವನ್ನು ಉಳಿಸಿಕೊಂಡದ್ದಕ್ಕೆ ಆ ಮನುಷ್ಯನಿಗೆ ನನ್ನ ಸಲಾಮ್.
ಮಿಸ್ಟರ್ ಮೋದಿ, ಅವರನ್ನು ಖಂಡಿಸುವ ಮೊದಲು ಅವರು ರಾಜಕೀಯಕ್ಕೆ ಯಾವ ಕಾರಣಕ್ಕಾಗಿ ಬಂದಿದ್ದಾರೆ ಎಂದು ನೀವು ಭಾವಿಸುತ್ತೀರಿ? ಹೇಳಿ?
ಅಧಿಕಾರ? ಹಣ?
ಹಾಗೆಂದರೆ ನೀವೂ ಅದಕ್ಕಾಗಿಯೇ ಬಂದಿರುವುದೇ?
ಹೌದಾದರೆ… ನೀವೂ ಅಲ್ಲಿರಲು ಅನರ್ಹರು..
ರಾಜಕೀಯ ಎಂದರೆ ತ್ಯಾಗ ಮತ್ತು ಸೇವೆ ಎಂದಾದರೆ ಯುವಕನೊಬ್ಬ ದೇಶ ಸೇವೆ ಮಾಡುವುದನ್ನು ನಿರುತ್ಸಾಹಗೊಳಿಸಲು ನಿಮಗೆ ಯಾವ ನೈತಿಕ ಹಕ್ಕಿದೆ? ಅಂತಹವರನ್ನು ನೀವು ಉತ್ತೇಜಿಸಬೇಕಲ್ಲವೇ?
ದೇಶಸೇವೆಗೆ ಬಂದ ಒಬ್ಬ ಯುವಕನನ್ನು ನಿಮ್ಮ ಸ್ವಾರ್ಥಕ್ಕಾಗಿ ಖಂಡಿಸುವುದು ಮತ್ತು ಹುತಾತ್ಮರ ಮಗ/ ಮೊಮ್ಮಗನನ್ನು ಅಗೌರವಿಸುವುದು ರಾಷ್ಟ್ರವಿರೋಧಿಯಲ್ಲವೇ?
ನಿಮ್ಮ ಪಕ್ಷದ ಗೌರವಾನ್ವಿತ ಪ್ರಧಾನಿ ವಾಜಪೇಯಿ ಜೀ ಅವರಿಗೆ ಕ್ಯಾನ್ಸರ್ ಬಗ್ಗೆ ಯಾರಿಗೂ ತಿಳಿಯದಂತೆ ಚಿಕಿತ್ಸೆ ಪಡೆಯಲು ಸಹಾಯ ಮಾಡಿದ ಅವರ ತಂದೆ ರಾಜೀವ್ ಗಾಂಧಿಯವರಿಂದ ದಯವಿಟ್ಟು ಸ್ವಲ್ಪ ಕಲಿಯಿರಿ.
ನಿಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಿ. ನೀವು ಅವರ ತಂದೆಯ ಸ್ಥಾನದಲ್ಲಿದ್ದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಾನು ಹೇಳಬೇಕಾಗಿಲ್ಲ.
ಒಬ್ಬ ವ್ಯಕ್ತಿ ಯೋಗ್ಯನೋ ಅಯೋಗ್ಯನೊ ಅವನ ಕೆಲಸವೇ ನಿರ್ಧರಿಸಬೇಕೆ ಹೊರತು ಅವನ ಹುಟ್ಟೊ ಅಪ್ಪ ಅಮ್ಮನೋ ಅಲ್ಲ. ಯಾವ ಪರಿವಾರವಾದವಿಲ್ಲದೇ ರಾಜಕೀಯಕ್ಕೆ ಬಂದ ನೀವೇನು ಯೋಗ್ಯರೇ?
ಜಗತ್ತಿನಲ್ಲೇ ಅತಿದೊಡ್ಡ ಎಲೆಕ್ಟೊರಲ್ ಬಾಂಡಿನ ಸರಕಾರಿ ಹಗರಣ ಮಾಡಿ ಮೈತುಂಬ ಭ್ರಷ್ಟಾಚಾರದ ಕೆಸರು ಮೆತ್ತಿಕೊಂಡು ಕೂತಿಲ್ಲವೇ?
ಇದರ ನಂತರವೂ ರಾಹುಲ್ ಗಾಂಧಿ ಅನರ್ಹ ಎಂದು ನೀವು ಭಾವಿಸಿದರೆ ದಯವಿಟ್ಟು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಕ್ಕಿಂತ ಭಾರತದ ಜ್ವಲಂತ ಸಮಸ್ಯೆಗಳ ಬಗ್ಗೆ ಅವರೊಂದಿಗೆ “ಒಂದು” ಸಾರ್ವಜನಿಕ ಚರ್ಚೆ ಮಾಡಿಬಿಡಿ. ಯಾರು ಅನರ್ಹರು ಜಗತ್ತಿಗೇ ತಿಳಿದುಬಿಡಲಿ..
– ನಟ ಕಿಶೋರ್
Super Sir Sariyagi Muttinodikolluvanthe Heliddira.
Jai Kishor ji, the person who is not honest and humble they can do this kind of cheap practice rather than accepting and supporting good thing, first and foremost modi is not citizen of India he came from Hitler family