ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಎಡಿಟ್ ಮಾಡಿ, ಅಂಬೇಡ್ಕರ್ ಚಿತ್ರದ ಅರ್ಧ ಭಾಗಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಚಿತ್ರವನ್ನು ಸೇರಿಸಿ, ಫೋಟೋ ಫ್ರೇಮ್ ಮಾಡಲಾಗಿದೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅರ್ಧ ಅಂಬೇಡ್ಕರ್ ಚಿತ್ರ, ಇನ್ನರ್ಧ ಅಖಿಲೇಶ್ ಚಿತ್ರವಿರುವ ಫೋಟೋವೊಂದು ಬುಧವಾರ ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ವೈರಲ್ ಆಗಿರುವ ಚಿತ್ರದಲ್ಲಿ ಡಾ. ಅಂಬೇಡ್ಕರ್ ಮತ್ತು ಅಖಿಲೇಶ್ ಅವರ ತಲೆ ಮತ್ತು ಭುಜಗಳ ಅರ್ಧ ಕಟೌಟ್‌ಗಳನ್ನು ಪರಸ್ಪರ ಹತ್ತಿರದಲ್ಲಿ ಅಂಟಿಸಲಾಗಿದೆ. ಇಬ್ಬರ ಚಿತ್ರವನ್ನು ಬಿಳಿ ರೇಖೆಯೊಂದು ವಿಭಜಿಸಿದೆ.
ಅಂಬೇಡ್ಕರ್ ಮತ್ತು ಅಖಿಲೇಶ್ ಇರುವ ಚಿತ್ರವನ್ನು ಸಮಾಜವಾದಿ ಪಕ್ಷದ ಕಾರ್ಯಕ್ರಮಕ್ಕೆ ಜನರನ್ನು ಸ್ವಾಗತಿಸುವ ಸಂದೇಶದ ಪೋಸ್ಟರ್‌ಗಾಗಿ ಎಡಿಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಎಡಿಟ್ ಮಾಡಿರುವ ಚಿತ್ರವನ್ನು ಬಿಜೆಪಿ ಟೀಕಿಸಿದೆ. ‘ಭಾರತದ ಸಂವಿಧಾನದ ಶಿಲ್ಪಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ’ ಎಂದು ಹೇಳಿದೆ.
ಕೇಂದ್ರ ಕಾನೂನು ಸಚಿವ, ಬಿಜೆಪಿ ನಾಯಕ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಸಾಮಾಜಿಕ ಮಾಧ್ಯಮದ ಉಸ್ತುವಾರಿ ಅಮಿತ್ ಮಾಳವೀಯ, “ಅಖಿಲೇಶ್ ಯಾದವ್ ಅವರು ಸಂವಿಧಾನವನ್ನು ರಚಿಸಿದ ಪ್ರಸಿದ್ಧ ವಕೀಲ, ದಲಿತ ನಾಯಕ ಡಾ. ಅಂಬೇಡ್ಕರ್ ಅವರನ್ನು ಅಗೌರವಿಸಿದ್ದಾರೆ. ಬಿಜೆಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಅಂಬೇಡ್ಕರರ ಪರಂಪರೆಯ ಕುರಿತು ಆಗ್ಗಾಗ್ಗೆ ಜಗಳವಾಡುತ್ತವೆ” ಎಂದು ಹೇಳಿದ್ದಾರೆ.
VIDEO | Delhi: Union Minister Arjun Ram Meghwal (@arjunrammeghwal) addresses a press conference.
— Press Trust of India (@PTI_News) April 30, 2025
"A poster of Samajwadi Party shows half face of Babasaheb and remaining half is of Akhilesh Yadav. This is an insult to Babasaheb Ambedkar. They are trying to get votes of Dalits by… pic.twitter.com/zSI6oBnDax
“1952ರ ಚುನಾವಣೆಯಲ್ಲಿ ಬಾಬಾಸಾಹೇಬರನ್ನು ಸೋಲಿಸುವಲ್ಲಿ ಪಾತ್ರ ವಹಿಸಿದ್ದ ಪಕ್ಷದೊಂದಿಗೆ (ಕಾಂಗ್ರೆಸ್) ಸಮಾಜವಾದಿ ಪಕ್ಷ ಕೆಲಸ ಮಾಡುತ್ತಿದೆ. ಸಮಾಜವಾದಿ ಪಕ್ಷದ ಸಂಸ್ಥಾಪಕರು (ಮುಲಾಯಂ ಸಿಂಗ್) ಮತ್ತು ಅಂಬೇಡ್ಕರ್ ಸ್ವಜನಪಕ್ಷಪಾತವನ್ನು ವಿರೋಧಿಸುತ್ತಿದ್ದರು. ಆದರೆ, ಅಖಿಲೇಶ್ ಅವರ ಸಿದ್ಧಾಂತಗಳು ಅಂಬೇಡ್ಕರರ ಆಶಯಗಳಿಗೆ ಹೊಂದಿಕೆಯಾಗುವುದಿಲ್ಲ” ಎಂದು ಅರ್ಜುನ್ ಮೇಘವಾಲ್ ಹೇಳಿದ್ದಾರೆ.
“ಅಖಿಲೇಶ್ ಮತ್ತು ಅವರ ಪಕ್ಷವು ಅಂಬೇಡ್ಕರ್ ಪರಂಪರೆಗೆ ತಕ್ಕಂತೆ ಬದುಕಲು ಸಾಧ್ಯವಿಲ್ಲ. ಅಂಬೇಡ್ಕರರ ಮುಖವನ್ನು ವಿರೂಪಗೊಳಿಸಿ ಅಖಿಲೇಶ್ ಯಾದವ್ ಅವರ ಮುಖವನ್ನು ಅದರ ಮೇಲೆ ಹೇರುವುದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಅಖಿಲೇಶ್ ಯಾದವ್ ಎಷ್ಟೇ ಬಾರಿ ಪುನರ್ಜನ್ಮ ಪಡೆದರೂ ಅಂಬೇಡ್ಕರರಂತೆ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯವಿಲ್ಲ” ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.
भारत के संविधान निर्माता और दलित समुदाय के प्रतीक डॉ. बाबासाहेब अंबेडकर का इससे बड़ा अपमान और कुछ नहीं हो सकता, कि उनके चेहरे को बिगाड़कर उस पर अखिलेश यादव का चेहरा थोप दिया जाए। अखिलेश यादव चाहे कितनी भी बार जन्म लें, वे बाबासाहेब की महानता और समाज के वंचित वर्गों के उत्थान में… pic.twitter.com/sYxS5FOokW
— Amit Malviya (@amitmalviya) April 30, 2025
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಈ ಪೋಸ್ಟರ್‌ಅನ್ನು ಟೀಕಿಸಿದ್ದಾರೆ. “ಎಸ್‌ಪಿಯ ಭ್ರಷ್ಟ ಮನಸ್ಥಿತಿಯ ಪ್ರತಿಬಿಂಬ ಮತ್ತು ಬಾಬಾಸಾಹೇಬ್ ಅವರನ್ನು ಅವಮಾನಿಸುವ ಉದ್ದೇಶಪೂರ್ವಕ ಪ್ರಯತ್ನಿವಿದು” ಎಂದಿದ್ದಾರೆ.