ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರ ಪರಿಹಾರದ ವಿಚಾರವನ್ನು ಪ್ರಸ್ತಾಪಿಸಿ, “ಕರ್ನಾಟಕ ಸರ್ಕಾರ ಬರ ಪರಿಹಾರಕ್ಕೆ ಮನವಿ ಸಲ್ಲಿಸಲು ಮೂರು ತಿಂಗಳು ತಡ ಮಾಡಿದ ಕಾರಣದಿಂದಾಗಿ ಕೇಂದ್ರ ಸರ್ಕಾರ ನಿಗದಿತ ಸಮಯಕ್ಕೆ ಪರಿಹಾರ ಬಿಡುಗಡೆ ಮಾಡಲಾಗಿಲ್ಲ” ಎಂದು ರಾಮನಗರದಲ್ಲಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ಸಿಎಂ ಸಿದ್ದರಾಮಯ್ಯ, “ಅಮಿತ್ ಶಾ ಓರ್ವ ಮಹಾನ್ ಸುಳ್ಳುಗಾರ. ಇಂಥಾ ಸುಳ್ಳನ್ನು ಹೇಳೋದೇ? ಎಂದು ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು.
“ಅಮಿತ್ ಶಾ ಅವರು ಸುಳ್ಳು ಹೇಳೋದು ನನಗೇನೂ ಆಶ್ಚರ್ಯ ಆಗಿಲ್ಲ, ಅವರ ಸುಳ್ಳುಗಳು ಹೊಸದೇನೂ ಅಲ್ಲ. ಆದರೆ ಇಂಥಾ ಸುಳ್ಳಾ ಹೇಳೋದೇ” ಎಂದು ಮೈಸೂರಿನಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಕೇಂದ್ರ ಸಚಿವರನ್ನು ಲೇವಡಿ ಮಾಡಿದರು.
2013-18 ರ ವರೆಗೆ ನಾನು ಮುಖ್ಯಮಂತ್ರಿಯಾಗಿ ಎಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದೆ. ಇಡೀ ರಾಜ್ಯದಲ್ಲಿ ಅನ್ನಭಾಗ್ಯದಿಂದ ರೈತರ ಸಾಲಮನ್ನಾವರೆಗೂ ಎಷ್ಟೆಷ್ಟು ಕೆಲಸ ಮಾಡಿದ್ದೆ. ಆದರೂ ನಮಗೆ 2018 ರಲ್ಲಿ ಹಿನ್ನಡೆಯಾಗಿದ್ದು ನೋವು ತಂದಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ @BJP4India ಗೆ ನೆಲೆಯೇ ಇಲ್ಲ. ಇಲ್ಲಿ ಬಿಜೆಪಿ ಠೇವಣಿಯನ್ನು… pic.twitter.com/g038CpQzKL
— Siddaramaiah (@siddaramaiah) April 2, 2024
“ರಾಜ್ಯದಲ್ಲಿ ಬರ ಘೋಷಣೆ ಆದ ಬಳಿಕ ನಾವು ಸೆಪ್ಟೆಂಬರ್ 23ರಂದೇ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೇವೆ. ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯ ಪ್ರವಾಸ ಮಾಡಿ ಬರ ಕುರಿತಂತೆ ವರದಿ ನೀಡಿದೆ. ಆದರೂ ಅವತ್ತಿಂದ ಇವತ್ತಿನವರೆಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಬರ ಪರಿಹಾರದ ಒಂದೇ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಈಗ ಬಂದು ಎಂಥಾ ಸುಳ್ಳು ಭಾಷಣ ಮಾಡಿದ್ದಾರೆ ನೋಡಿ” ಎಂದರು.
“ಮೋದಿ ಮತ್ತು ಅಮಿತ್ ಶಾ ಜೋಡಿ ಪ್ರವಾಹ ಬಂದಾಗ ಬರಲಿಲ್ಲ, ಬರಗಾಲ ಬಂದರೂ ಬರಲಿಲ್ಲ. ರಾಜ್ಯಕ್ಕೆ ಸಮಸ್ಯೆ ಆದಾಗಲೆಲ್ಲಾ ರಾಜ್ಯಕ್ಕೆ ತಲೆ ಹಾಕದವರು ಚುನಾವಣೆ ಬಂದಾಗ ಮಾತ್ರ ಓಡೋಡಿ ಓಡೋಡಿ ಬಂದಿದ್ದಾರೆ” ಎಂದು ಸಿಎಂ ಲೇವಡಿ ಮಾಡಿದರು.
ಇದನ್ನು ಓದಿದ್ದೀರಾ? ಬರ ಪರಿಹಾರ: ಸುಳ್ಳು ಹೇಳಿದ ಶಾ ಅವರಿಗೆ ಸಾಕ್ಷಿ ಸಮೇತ ಕೃಷ್ಣಬೈರೇಗೌಡ ಪ್ರತಿಕ್ರಿಯೆ
“ಯಾವ ಮುಖ ಹೊತ್ತು ಮೋದಿ, ಅಮಿತ್ ಶಾ ರಾಜ್ಯದಲ್ಲಿ ಮೆರವಣಿಗೆ ಮಾಡ್ತಾರೆ? ರಾಜ್ಯದ ಜನರಿಗೆ ಇಷ್ಟು ದೊಡ್ಡ ಮಟ್ಟದ ದ್ರೋಹ ಎಸಗಿದ ಇವರನ್ನು ಕರೆಸಿ ಮೆರವಣಿಗೆ ಮಾಡ್ತಾರಲ್ಲಾ , ಬಿಜೆಪಿ-ಜೆಡಿಎಸ್ ನವರಿಗೆ ಮರ್ಯಾದೆ ಇಲ್ವಾ” ಎಂದು ಪ್ರಶ್ನಿಸಿದರು.
