ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರೋತ್ಸಾಹ ಧನ ನೀಡಬೇಕೆಂದು ಹೇಳಿದ ಬೆನ್ನಲ್ಲೇ ವಿಜಯನಗರದ ಸಂಸದ ಕಾಲಿಸೆಟ್ಟಿ ಅಪ್ಪಲ ನಾಯ್ಡು ಹೆಚ್ಚು ಮಕ್ಕಳು ಹೆರುವವರಿಗೆ ಪ್ರೋತ್ಸಾಹಧನ ಘೋಷಿಸಿದ್ದಾರೆ. ಮೂರನೇ ಮಗುವಿಗೆ ಜನ್ಮ ನೀಡಿದರೆ 50,000 ರೂಪಾಯಿ ನೀಡಲಾಗುವುದು, ಗಂಡು ಮಗು ಜನಿಸಿದರೆ ಹಸು ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಲಿಂಗ ತಾರತಮ್ಯದ ಹೇಳಿಕೆ ನೀಡಿದ್ದಾರೆ. ಹೆಣ್ಣು ಮಗು ಜನಿಸಿದರೆ ಯಾಕೆ ಹಸು ನೀಡುವುದಿಲ್ಲ ಎಂಬ ಪ್ರಶ್ನೆ ಈಗ ಎದ್ದಿದೆ.
ಹಾಗೆಯೇ ಲೋಕಸಭಾ ಸದಸ್ಯರು ತಮ್ಮ ಸಂಬಳದಿಂದ ನಗದು ಪ್ರೋತ್ಸಾಹ ಧನವನ್ನು ನೀಡುವುದಾಗಿ ಹೇಳಿದ್ದಾರೆ. ಅಪ್ಪಾ ನಾಯ್ಡು ಅವರ ಘೋಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಟಿಡಿಪಿ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಘೋಷಣೆಯನ್ನು ರೀಟ್ವೀಟ್ ಮಾಡುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ನಾಯ್ಡು ಈ ಘೋಷಣೆ ಮಾಡಿದ ಸಂಸದರನ್ನು ಶ್ಲಾಘಿಸಿದ್ದಾರೆ.
ಇದನ್ನು ಓದಿದ್ದೀರಾ? ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ, ವೇತನ ಸಹಿತ ಹೆರಿಗೆ ರಜೆ ಜಾರಿಗೊಳಿಸಿದ ಆಂಧ್ರಪ್ರದೇಶ
ವಿಜಯನಗರದ ರಾಜೀವ್ ಸ್ಪೋರ್ಟ್ಸ್ ಕಾಂಪೌಂಡ್‌ನಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಸಭೆಯಲ್ಲಿ ಸಂಸದರು ಈ ಘೋಷಣೆ ಮಾಡಿದ್ದಾರೆ.
On International Women’s Day, the GoAP has launched transformative initiatives to empower women spanning entrepreneurship, digital commerce, ensuring safety with Shakti Teams & Shakti App, partnering with Flipkart, Rapido, and others for livelihoods, and implementing gratuity… pic.twitter.com/5vCEapZsqJ
— N Chandrababu Naidu (@ncbn) March 8, 2025
ಮಾರ್ಚ್‌ನಲ್ಲಿ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ, ದಕ್ಷಿಣ ಭಾರತದಲ್ಲಿ ವೃದ್ಧಾಪ್ಯ ಜನಸಂಖ್ಯೆ ಹೆಚ್ಚಳ ಸವಾಲಾಗಿದೆ. ಆದರೆ ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಯುವಕರ ಸಂಖ್ಯೆ ಅಧಿಕವಾಗಿದೆ ಎಂದು ಹೇಳಿದರು. ಹಾಗೆಯೇ ಜನಸಂಖ್ಯಾ ನಿಯಂತ್ರಣಕ್ಕಿಂತ ದೀರ್ಘಾವಧಿಯ ಜನಸಂಖ್ಯಾ ನಿರ್ವಹಣೆ ಮಾಡುವುದು ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶ | ವಿದ್ಯುತ್ ಅವಘಡ; ನಾಲ್ವರು ಮೃತ್ಯು
“ನಾನು ಕುಟುಂಬ ಯೋಜನೆಯನ್ನು ಪ್ರತಿಪಾದಿಸುತ್ತಿದ್ದೆ. ಈಗ ನಾನು ನನ್ನ ಅಭಿಪ್ರಾಯಗಳನ್ನು ಬದಲಾಯಿಸುತ್ತಿದ್ದೇನೆ. ಈಗ ಜನಸಂಖ್ಯೆಯನ್ನು ಉತ್ತೇಜಿಸುತ್ತಿದ್ದೇನೆ. ಭವಿಷ್ಯಕ್ಕಾಗಿ ನಾವು ಜನಸಂಖ್ಯಾ ಲಾಭಾಂಶವನ್ನು ನಿರ್ವಹಿಸಬಹುದಾದರೆ, ಭಾರತ ಮತ್ತು ಭಾರತೀಯರು ಉತ್ತಮ ಸ್ಥಾನದಲ್ಲಿರುತ್ತಾರೆ. ಜಾಗತಿಕ ಸಮುದಾಯಗಳು ಜಾಗತಿಕ ಸೇವೆಗಳಿಗಾಗಿ ಭಾರತೀಯರಾದ ನಮ್ಮನ್ನು ಅವಲಂಬಿಸಿವೆ” ಎಂದು ಹೇಳಿದರು.
ಇನ್ನು ಚಂದ್ರಬಾಬು ನಾಯ್ಡು ಶನಿವಾರ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಮಕ್ಕಳ ಸಂಖ್ಯೆಯನ್ನು ಲೆಕ್ಕಿಸದೆ ಹೆರಿಗೆಯ ಸಮಯದಲ್ಲಿ ಮಾತೃತ್ವ ರಜೆ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಘೋಷಣೆಗಳನ್ನು ಮಾಡಿದರು.
