ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರಿಗೆ ವೈಎಸ್‌ಆರ್‌ಸಿಪಿ ಶಾಸಕರೊಬ್ಬರು ತಮ್ಮ ಎರಡೂ ಚಪ್ಪಲಿಗಳನ್ನು ತೋರಿಸಿ ಎಚ್ಚರಿಕೆ ಸಂದೇಶ ನೀಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಪತ್ರಿಕಾಗೋಷ್ಠಿಯ ನೇರ ಪ್ರಸಾರದಲ್ಲಿ ಮಾತನಾಡಿದ ಮಾಜಿ ಸಚಿವ ಮತ್ತು ವೈಎಸ್‌ಆರ್‌ಸಿಪಿ ಶಾಸಕ ಪರ್ನಿ ನಾನಿ, “ನೀನು ಎಲ್ಲ ಸಮಯದಲ್ಲೂ ಚಪ್ಪಲಿಯನ್ನು ತೋರಿಸುತ್ತೀಯಲ್ಲ ನೀನೇನು ದೊಡ್ಡ ಗಂಡಸಾ? ನಾನು ಎರಡು ಚಪ್ಪಲಿಗಳನ್ನು ತೋರಿಸುತ್ತೇನೆ. ನಿನಗಿಂತ ದೊಡ್ಡವನು ನಾನು. ನನ್ನ ಬಳಿಯೂ ಎರಡು ಚಪ್ಪಲಿಗಳಿವೆ ಹುಷಾರ್! ಎರಡು ಕೂಡ ಹರಿದಿವೆ ಎಂದು ಚಪ್ಪಲಿಗಳನ್ನು ಪ್ರದರ್ಶಿಸಿ ಪವನ್ ಕಲ್ಯಾಣ್ ಅವರಿಗೆ ಎಚ್ಚರಿಕೆ ಸಂದೇಶ ನೀಡಿದರು.
ಈ ಸುದ್ದಿ ಓದಿದ್ದೀರಾ? ‘ಬಿಜೆಪಿಗೆ ಮತ ಹಾಕದಿದ್ದರೆ ರಾಜ್ಯಕ್ಕೆ ಮೋದಿ ಆಶೀರ್ವಾದ ಸಿಗುವುದಿಲ್ಲ’ ಎಂಬ ಅರ್ಥ ಇದೇನಾ? ಅಕ್ಕಿ ಕಡಿತಕ್ಕೆ ಕಾಂಗ್ರೆಸ್ ಆಕ್ರೋಶ
ಈ ಮೊದಲು ನಟ ಪವನ್ ಕಲ್ಯಾಣ್ ಕಾಕಿನಾಡದ ಕಥಿಪುಡಿಯ ಸಾರ್ವಜನಿಕ ಸಮಾರಂಭದಲ್ಲಿ ದ್ವೇಷದ ಭಾಷಣ ಮಾಡಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪರ್ನಿ ನಾನಿ ಅವರು ತಿರುಗೇಟು ನೀಡಿದ್ದು, ಪವನ್ ಅವರ ಇಬ್ಬಗೆಯ ಮಾತು ತುಂಬಾ ಅಪಾಯಕಾರಿ. ತಮ್ಮ ನಯವಾದ ಮಾತುಗಳಿಂದ ಅಮಾಯಕರನ್ನು ವಂಚಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರು ಹಿಂದಿನ ಟಿಡಿಪಿ ಸರ್ಕಾರದ ಭಾಗವಾಗಿದ್ದರು ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ.
“ಚಂದ್ರಬಾಬು ನಾಯ್ಡು ಮತ್ತು ಟಿಡಿಪಿಗಾಗಿ ಪವನ್ ಅವರು ಮತಯಾಚಿಸುತ್ತಿದ್ದಾರೆ. ಪವನ್ ಅವರ ಜನಸೇನಾ ಪಕ್ಷ ಮುಂದಿನ ಚುನಾವಣೆಯಲ್ಲಿ ಕೇವಲ 15 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಜನಸೇನಾ ಸರ್ಕಾರ ರಚಿಸುವ ಪ್ರಶ್ನೆ ಎಲ್ಲಿದೆ ಎಂದರು. ವೈಎಸ್‌ಆರ್‌ಸಿಪಿ ಸರ್ಕಾರವು ಮುಂದಿನ ಅವಧಿಯಲ್ಲೂ ಎಲ್ಲ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಿದೆ” ಎಂದು ನಾನಿ ತಿಳಿಸಿದ್ದಾರೆ.