ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭಾನುವಾರ (ಜೂನ್ 2) ಆರಂಭವಾಗಿದ್ದು, ಎರಡು ರಾಜ್ಯಗಳಲ್ಲಿ ಯಾವ ಪಕ್ಷ ಗದ್ದುಗೆ ಹಿಡಿಯಲಿದೆ ಎಂಬುವುದು ಇಂದು ತಿಳಿಯಲಿದೆ.
ಏಪ್ರಿಲ್ 19 ರಂದು ಅರುಣಾಚಲ ಪ್ರದೇಶದ 60 ವಿಧಾನಸಭೆ ಕ್ಷೇತ್ರಗಳಿಗೆ ಮತ್ತು ಸಿಕ್ಕಿಂನ 32 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದೆ. ಈ ಹಿಂದೆ ಎರಡು ರಾಜ್ಯಗಳ ಮತ ಎಣಿಕೆಯು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವ ದಿನವಾದ ಜೂನ್ 4ರಂದು ನಡೆಯಬೇಕಿತ್ತು.
ಇದನ್ನು ಓದಿದ್ದೀರಾ? ಅರುಣಾಚಲ ಪ್ರದೇಶ, ಸಿಕ್ಕಿಂ ಚುನಾವಣಾ ಫಲಿತಾಂಶ ದಿನಾಂಕ ಬದಲಾವಣೆ
ಆದರೆ ಶಾಸಕಾಂಗ ಸಭೆಗಳ ಅವಧಿ ಜೂನ್ 2ರಂದು ಕೊನೆಗೊಳ್ಳುವ ಕಾರಣದಿಂದಾಗಿ ಬಳಿಕ ಈ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆಯನ್ನು ಭಾನುವಾರವೇ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.
#WATCH | Sikkim: Supporters and workers of Sikkim Democratic Front (SDF) gather at the Zila Panchayat office in Mangan district as the counting of votes is underway for the Sikkim Assembly elections
Ruling Sikkim Krantikari Morcha (SKM) crossed the halfway mark; leading on 28… pic.twitter.com/f70rfX48Zw
— ANI (@ANI) June 2, 2024
ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರೆ, ಸಿಕ್ಕಿಂನಲ್ಲಿ ಎಸ್‌ಕೆಎಂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಅರುಣಾಚಲ ಪ್ರದೇಶದಲ್ಲಿ 50 ಸ್ಥಾನಗಳಿಗೆ ಇಂದು ಫಲಿತಾಂಶ ಪ್ರಕಟವಾಗಲಿದೆ. ಆಡಳಿತಾರೂಢ ಬಿಜೆಪಿ ಈಗಾಗಲೇ ಹತ್ತು ವಿಧಾನಸಭಾ ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಅರುಣಾಚಲ ಪ್ರದೇಶ ವಿಧಾನಸಭೆಯ ಎಲ್ಲಾ 60 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣದಲ್ಲಿದ್ದು, ಕಾಂಗ್ರೆಸ್ 34 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಸಿಕ್ಕಿಂ 32 ವಿಧಾನಸಭೆ ಸ್ಥಾನಗಳನ್ನು ಹೊಂದಿದೆ. ಸರ್ಕಾರ ರಚಿಸಲು, ಪಕ್ಷ ಅಥವಾ ಒಕ್ಕೂಟಕ್ಕೆ ಕನಿಷ್ಠ 17 ಸ್ಥಾನಗಳು ಬೇಕಾಗುತ್ತವೆ. ಸಿಕ್ಕಿಂ ಜನತೆ ಪಕ್ಷಕ್ಕೆ ಮತ್ತೊಂದು ಅವಧಿ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಪಿಎಸ್ ತಮಾಂಗ್ ಹೇಳಿದ್ದಾರೆ.
#WATCH | Arunachal Pradesh: Counting of votes for Assembly elections underway; visuals from a counting centre in the Papum Pare district
The ruling BJP crossed the halfway mark; won 10 seats leading on 23. National People’s Party is leading on 8 seats, People’s Party of… pic.twitter.com/r7DSc0code
— ANI (@ANI) June 2, 2024
ಸಿಕ್ಕಿಂನಲ್ಲಿ ವಿಧಾನಸಭೆ ಚುನಾವಣೆಯಲ್ಲಿ 4,64 ಲಕ್ಷ ಮತದಾರರ ಪೈಕಿ ಶೇಕಡ 79.77ರಷ್ಟು ಮತದಾರರು ಮತದಾನ ಮಾಡಿದ್ದಾರೆ. ಇದೇ ವೇಳೆ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇಕಡ 80.03ರಷ್ಟು ಮತದಾನವಾಗಿದೆ. ಎಸ್‌ಕೆಎಂ ಮತ್ತು ಎಸ್‌ಡಿಎಫ್ ನಡುವೆ ಸಿಕ್ಕಿಂನಲ್ಲಿ ಸ್ಪರ್ಧೆಯಿದೆ. ಬಿಜೆಪಿ 31 ಮತ್ತು ಕಾಂಗ್ರೆಸ್ 12 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಅರುಣಾಚಲ ಬಿಜೆಪಿ ನಾಯಕನನ್ನು ಅಪಹರಿಸಿದ ಬಂಡುಕೋರರು!
ಅರುಣಾಚಲ ಪ್ರದೇಶದಲ್ಲಿ, 25 ಜಿಲ್ಲೆಗಳಲ್ಲಿ 24 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಈ ಕೇಂದ್ರಗಳಲ್ಲಿ ಮತ್ತು ಸುತ್ತಮುತ್ತ ಮೂರು ಹಂತದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮತ ಎಣಿಕೆಗೆ 2,000ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಚುನಾವಣಾ ಆಯೋಗವು 27 ಎಣಿಕೆ ವೀಕ್ಷಕರನ್ನು ನೇಮಿಸಿದೆ.