ಹೇಳಿಕೆ ವಾಪಸ್ ಪಡೆಯುವ ಜಾಯಮಾನ ನನ್ನದಲ್ಲ: ಬಿ ಕೆ ಹರಿಪ್ರಸಾದ್

Date:

Advertisements
  • ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಪರಿಷತ್ ಸದಸ್ಯ
  • ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಹರಿಪ್ರಸಾದ್ ಪಾತ್ರ ಕೂಡ ಇದೆ: ಪ್ರಣವಾನಂದ ಸ್ವಾಮೀಜಿ

‘ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಚೆನ್ನಾಗಿ ಗೊತ್ತು’ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್, ‘ನಾನು ಒಂದು ಪದ ಹೇಳಿದ್ದಿದ್ದರೆ ಅದನ್ನು ಹೇಳಿದ್ದೀನಿ ಅಂತ ಹೇಳ್ತೀನೇ ಹೊರತು, ಹೇಳಿಕೆಗಳನ್ನು ವಾಪಸ್ ಪಡೆಯುವ ಜಾಯಮಾನ ನನ್ನದಲ್ಲ’ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ(ಜು.21) ನಡೆದಿದ್ದ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಕರಾವಳಿ ಮೂಲದ ಬಿಲ್ಲವ ಮುಖಂಡ ಹರಿಪ್ರಸಾದ್, ‘ನಾನು ಮಂತ್ರಿ ಆಗೋದು ಬಿಡೋದು ಬೇರೆ ಪ್ರಶ್ನೆ. ಐವರನ್ನು ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರ ವಹಿಸಿದ್ದೇನೆ. ಮುಖ್ಯಮಂತ್ರಿ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ’ ಎಂದು ಹೇಳಿದ್ದರು.

ಅವರ ಈ ಹೇಳಿಕೆಯನ್ನು ಸಭೆಯಲ್ಲಿದ್ದವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಅದು ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲಿ ಹರಿದಾಡಿತ್ತು.

Advertisements

ಇದನ್ನು ಓದಿದ್ದೀರಾ? ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಚೆನ್ನಾಗಿ ಗೊತ್ತು : ಸಿಎಂ ವಿರುದ್ಧ ಪರೋಕ್ಷ ಬಾಣ ಬಿಟ್ಟ ಬಿ ಕೆ ಹರಿಪ್ರಸಾದ್

ಈ ಹೇಳಿಕೆ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌, ‘ಸಮುದಾಯದ ಸಭೆ ಇದೆ ಎಂದು ಸ್ವಾಮೀಜಿಗಳು ಕರೆದಿದ್ದರು. ಅದಕ್ಕಾಗಿ ಹೋಗಿ ಮಾತನಾಡಿದ್ದೆ. ಒಂದು ಪದ ಹೇಳಿದ್ದಿದ್ದರೆ ಅದನ್ನು ವಾಪಸ್ ತಗೊಂಡಿರೋ ಜಾಯಮಾನ ನನ್ನದಲ್ಲ. ಹೇಳಿದ್ದು ವಾಪಸ್ ತಗೊಳ್ಳಲ್ಲ. ಹೇಳದೇ ಇರೋದನ್ನು ಹೇಳೋದಕ್ಕೆ ಹೋಗಲ್ಲ. ಇದನ್ನು ಮತ್ತೆ ಮುಂದುವರಿಸುವುದಕ್ಕೂ ಹೋಗಲ್ಲ’ ಎಂದು ತಿಳಿಸಿದ್ದಾರೆ.

‘ಸಭೆಯಲ್ಲಿ ಕ್ಯಾಮರಾ ಇರಲಿಲ್ಲ ಅಂತ ಸ್ವಲ್ಪ ಏನೋ ಮಾತನಾಡಿದ್ದೆ. ಕ್ಯಾಮರಾ ಇದ್ದಾಗ ಎಷ್ಟು ಮಾತನಾಡಬೇಕೋ ಅಷ್ಟನ್ನೇ ಮಾತನಾಡ್ತೀನಿ. ನಾನು ಮಾತನಾಡಿದ್ದನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡು, ಬಳಿಕ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ’ ಎಂದು ಹೇಳುವ ಮೂಲಕ ತಾವು ಮಾತನಾಡಿರುವುದನ್ನು ನೇರವಾಗಿಯೇ ಒಪ್ಪಿಕೊಂಡಿದ್ದಾರೆ.

ಇದು ಅಸಮಾಧಾನವೇ ಎಂದು ಪ್ರಶ್ನಿಸಿದಾಗ, ‘ರಾಜಕಾರಣದಲ್ಲಿ ಅಸಮಾಧಾನದ ಪ್ರಶ್ನೆ ಇರೋದೇ ಇಲ್ಲ. ನನ್ನ ಜೀವನದಲ್ಲಿ ಆಗಲೇ ಇಲ್ಲ. ನಾನು ಮಂತ್ರಿ ಸ್ಥಾನಕ್ಕೂ ಲಾಬಿ ನಡೆಸಿದವನಲ್ಲ. ಇದನ್ನು ಮೊದಲೇ ಹೇಳಿದ್ದೇನೆ. ಮುಂದೆ ಬಹಳ ಮಜಾ ಇರುತ್ತದೆ. ಎಲ್ಲವನ್ನೂ ಒಂದೇ ದಿವಸಕ್ಕೆ ಮುಗಿಸಿಬಿಟ್ಟರೆ ಹೇಗೆ’ ಎಂದು ಮಾಧ್ಯಮದವರಿಗೆ ಹೇಳುವ ಮೂಲಕ ಬಿ ಕೆ ಹರಿಪ್ರಸಾದ್ ಕುತೂಹಲ ಸೃಷ್ಟಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಹರಿಪ್ರಸಾದ್ ಪಾತ್ರ ಕೂಡ ಇದೆ : ಪ್ರಣವಾನಂದ ಸ್ವಾಮೀಜಿ

“ಬಿ.ಕೆ ಹರಿಪ್ರಸಾದ್ 49 ವರ್ಷ ಸುದೀರ್ಘ ರಾಜಕಾರಣ ನಡೆಸಿದವರು. ಯಾವುದೇ ಜಾತಿ ರಾಜಕಾರಣ, ಕಳಂಕ ಇಲ್ಲ ವ್ಯಕ್ತಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಡಿಕೆಶಿ, ಸಿದ್ದರಾಮಯ್ಯ ಹಾಗೂ ಬಿ ಕೆ ಹರಿಪ್ರಸಾದ್ ಪಾತ್ರ ದೊಡ್ಡದು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಮೊದಲು ಎಂಟು ಮಂದಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಹರಿಪ್ರಸಾದ್ ಕೂಡ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಈ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರ ಗಮನಕ್ಕೂ ತಂದಿದ್ದೆ. ಆದರೂ ಅವರನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗಿದೆ. ಇದು ಈಡಿಗ, ಬಿಲ್ಲವ, ದೀವರ ಸಮಾಜಕ್ಕೆ ಆದ ಅವಮಾನ” ಎಂದು ಬ್ರಹ್ಮರ್ಶಿ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

WhatsApp Image 2023 07 22 at 1.42.30 PM

ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ನಮ್ಮ ಸಮುದಾಯ ದುಡಿದಿದೆ. ನಮಗೆ 11 ಸೀಟು ಫಿಕ್ಸ್ ಇತ್ತು. ಈ ಬಾರಿಯ ಚುನಾವಣೆಯಲ್ಲಿಯೂ ಮಂಗಳೂರು, ಗಂಗಾವತಿ, ಕುಮಟಾದಲ್ಲಿ ಎರಡು ಸೀಟು ಸೇರಿ ನಾಲ್ಕು ಸೀಟು ಕೊಡಬೇಕಿತ್ತು. ಕರಾವಳಿಯಲ್ಲಿ ಮೂರು ಸೀಟು ಕೊಟ್ಟರೂ ಗೆದ್ದಿಲ್ಲವಲ್ಲ ಎಂದು ನನಗೆ ನೇರವಾಗಿ ಕೇಳುತ್ತಾರೆ. ನಮ್ಮ ಸೀಟುಗಳನ್ನು ಬೇರೆಯವರಿಗೆ ಕೊಟ್ಟಾಗ ನಮ್ಮ ಸಮುದಾಯದಲ್ಲಿ ಗೊಂದಲ ಉಂಟಾಗುತ್ತದೆ. ನಮ್ಮ ಹಕ್ಕುಗಳಿಗೆ ನಾವು ಹೋರಾಟ ಮಾಡುತ್ತೇವೆ. ನಮ್ಮನ್ನು ಕಡೆಗಣಿಸಲಾಗ್ತಿದೆ. ಇದು ನಮಗೆ ನೋವು ತರಿಸಿದೆ’ ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ತನ್ನ ಸ್ವಾರ್ಥಕ್ಕಾಗಿ ರಾಜಕೀಯ ಮಾಡುವುದು ಸರಿಯಲ್ಲ. ತಮ್ಮ ಬಳಿ ಇದೀಗ ಒಂದು ಹುದ್ದೆ ಇದೆ. ಮತ್ತೊಂದಕ್ಕೆ ಯಾಕೆ ಆಸೆ ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X