ಜನ್ಮದಿನ | ಬಾಬು ಜಗಜೀವನ್ ರಾಮ್‌ ಅವರಿಗೆ ಆರ್‍ಎಸ್ಎಸ್ ಬಗ್ಗೆ ಕಡು ವಿರೋಧವಿತ್ತು

Date:

Advertisements
ಸಂಘಿಗಳು ತಮ್ಮ ಸುಳ್ಳು ಹಾಗೂ ದ್ವೇಷ ಅಭಿಯಾನದ ಭಾಗವಾಗಿ 2023ರ ರಾಜ್ಯ ಶಾಸನಸಭಾ ಚುನಾವಣೆಯಲ್ಲಿ ಮೋದಿಯವರು 1977ರಲ್ಲಿ ಜನತಾ ಪಕ್ಷದ ಸರ್ಕಾರ ಬಂದಾಗ ಜಗಜೀವನ್ ರಾಮ್ ಅವರಿಗೆ ಪ್ರಧಾನಿ ಸ್ಥಾನ ಕೊಡಿಸಬೇಕೆಂದು ಪ್ರಯತ್ನಿಸಿದ್ದರೆಂಬ ಹಸಿಸುಳ್ಳನ್ನೂ ಪ್ರಚಾರ ಮಾಡಿದ್ದರು. ಆದರೆ ಆ ವೇಳೆಗೆ ಮೋದಿ ರಾಷ್ಟ್ರಮಟ್ಟದಲ್ಲಿರಲಿ, ರಾಜ್ಯಮಟ್ಟದಲ್ಲೇ ನಾಯಕನ ಸ್ಥಾನದಲ್ಲಿ ಇರಲಿಲ್ಲ.

ಇಂದು ಜಗಜೀವನ್ ರಾಮ್ ಅವರ ಹುಟ್ಟಿದ ದಿನ. ಈ ವರ್ಷವೂ ಸಂಘಿಗಳು ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಇಬ್ಬರನ್ನು ತಮ್ಮವರೆಂದು ಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. ಇಂದಿನ ಸ್ವಲ್ಪ ಕದಡಿದ ಸಾಮಾಜಿಕ ಸಂದರ್ಭವನ್ನು ತಮ್ಮ ಬ್ರಾಹ್ಮಣಿಯ ಕುತಂತ್ರಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಅಂಬೇಡ್ಕರ್ ಅವರು ಭಾರತದ ದಲಿತರ ವಿಮೋಚನೆಯ ಮಟ್ಟಿಗೆ ಕಾಂಗ್ರೆಸ್ಸನ್ನು ‘ಅಪ್ರಾಮಾಣಿಕ’ವೆಂದು, ಹಿಂದೂ ಮಹಾಸಭಾವನ್ನು ಕೋಮುವಾದಿ ‘ಅಯೋಗ್ಯ’ರೆಂದೂ ‘ಕಾಂಗ್ರೆಸ್ ಅಸ್ಪೃಶ್ಯರಿಗೆ ಮಾಡಿದ್ದೇನು’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಅದೇ ಬಗೆಯ ಅಭಿಪ್ರಾಯವನ್ನು ಬಾಬು ಜಗಜೀವನ್ ರಾಮ್ ಅವರೂ ಕೂಡ ಹೊಂದಿದ್ದರು ಎಂಬುದು ಇತಿಹಾಸವನ್ನು ನೋಡಿದರೆ ಮತ್ತು ಜಗಜೀವನ್ ರಾಮ್ ಅವರ ಬರಹಗಳತ್ತ ಗಮನ ಹರಿಸಿದರೆ ಗೊತ್ತಾಗುತ್ತದೆ.

Advertisements

ಸಂಘಿಗಳು ತಮ್ಮ ಸುಳ್ಳು ಹಾಗೂ ದ್ವೇಷ ಅಭಿಯಾನದ ಭಾಗವಾಗಿ 2023ರ ರಾಜ್ಯ ಶಾಸನಸಭಾ ಚುನಾವಣೆಯಲ್ಲಿ ಮೋದಿಯವರು 1977ರಲ್ಲಿ ಜನತಾ ಪಕ್ಷದ ಸರ್ಕಾರ ಬಂದಾಗ ಜಗಜೀವನ್ ರಾಮ್ ಅವರಿಗೆ ಪ್ರಧಾನಿ ಸ್ಥಾನ ಕೊಡಿಸಬೇಕೆಂದು ಪ್ರಯತ್ನಿಸಿದ್ದರೆಂಬ ಹಸಿಸುಳ್ಳನ್ನೂ ಪ್ರಚಾರ ಮಾಡಿದ್ದರು.

ಆದರೆ ಆ ವೇಳೆಗೆ ಮೋದಿ ರಾಷ್ಟ್ರಮಟ್ಟದಲ್ಲಿರಲಿ, ರಾಜ್ಯಮಟ್ಟದಲ್ಲೇ ನಾಯಕನ ಸ್ಥಾನದಲ್ಲಿ ಇರಲಿಲ್ಲ. ಹೀಗಾಗಿ ಆ ಸುಳ್ಳು ಠುಸ್ ಪಟಾಕಿಯಾಯಿತು. ಮೋದಿಯನ್ನು ಬಿಡಿ ಆರೆಸ್ಸೆಸ್ ಆಗಲೀ, ಭಾರತೀಯ ಜನಸಂಘದ ಅಂದಿನ ರಾಷ್ಟೀಯ ನಾಯಕರಿಗಾಗಲೀ 1977ರಲ್ಲಿ ಜಗಜೀವನ್ ರಾಮ್ ಅವರನ್ನು ಪ್ರಧಾನಿಯವರನ್ನಾಗಿ ಮಾಡುವ ಉದ್ದೇಶವಿತ್ತೇ? ಖಂಡಿತಾ ಇಲ್ಲ. ಏಕೆಂದರೆ ಪ್ರಧಾನಿ ಹುದ್ದೆಗೆ ಅವರೆಲ್ಲರ ಸರ್ವಸಮ್ಮತ ಆಯ್ಕೆಯಾಗಿದ್ದುದು ಉಗ್ರ ಹಿಂದುತ್ವವಾದಿ ಮತ್ತು ಬ್ರಾಹ್ಮಣವಾದಿಯಾಗಿದ್ದ ಮುರಾರ್ಜಿ ದೇಸಾಯಿಯವರೇ ವಿನಾ ಜಗಜೀವನ್ ರಾಮ್ ಅವರಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಜಗಜೀವನ್ ರಾಮ್ ಅವರಿಗೆ ಆರೆಸ್ಸೆಸ್ ಮತ್ತು ಜನಸಂಘದ ಬಗ್ಗೆ ಏನು ಅಭಿಪ್ರಾಯವಿತ್ತು? ಇದರ ಬಗ್ಗೆ ಆರೆಸ್ಸೆಸ್ ಅಭಿಮಾನಿಯಾಗಿರುವ ಅಮೆರಿಕಾದ ವಿದ್ವಾಂಸ ವಾಲ್ತರ್ ಆಂಡರ್ಸನ್ ಮತ್ತು ಅಮೆರಿಕಾದ ಆರ್‍ಎಸ್ಎಸ್‌ನ ಅಂಗಸಂಸ್ಥೆಯಾದ ಹಿಂದೂ ಸೇವಾ ಸಂಘದ ಶ್ರೀಧರ್ ದಾಮ್ಲೆಯವರು ಜೊತೆಗೂಡಿ ಆರ್‍ಎಸ್ಎಸ್‌ನ ಇತಿಹಾಸದ ಬಗ್ಗೆ ರಚಿಸಿರುವ ‘Brotharhood in Saffron’ ಪುಸ್ತಕದಲ್ಲಿ ಸೂಚ್ಯವಾಗಿ ದಾಖಲಿಸಿದ್ದಾರೆ.

ಇಂದಿರಾ ಸರ್ವಾಧಿಕಾರದ ವಿರುದ್ದ ಏರ್ಪಟ್ಟ ಮೈತ್ರಿ ಸರ್ಕಾರದಲ್ಲಿ ಅತಿ ದೊಡ್ಡ ಬಿಕ್ಕಟ್ಟು ಉಂಟಾಗಿದ್ದೇ ಭಾರತೀಯ ಜನಸಂಘಕ್ಕೆ ಕೋಮುವಾದಿ ಆರ್‍ಎಸ್ಎಸ್ ಜೊತೆಗೆ ಇದ್ದ ನಂಟಿನ ಬಗ್ಗೆ. ಆರ್‍ಎಸ್ಎಸ್‌ನ ಜೊತೆಗೆ ನಂಟು ದೇಶಕ್ಕಿಂತ ಮುಖ್ಯ ಎಂದು ಜನಸಂಘ ಭಾವಿಸಿದ್ದರಿಂದಲೇ ಜನತಾ ಸರ್ಕಾರ ಕುಸಿದು ಬಿತ್ತು. ಮತ್ತು 1980ರ ಚುನಾವಣೆಯಲ್ಲಿ ಜನತಾ ಪಕ್ಷ ಇಂದಿರಾ ಕಾಂಗ್ರೆಸ್ಸಿನ ಎದಿರು ಹೀನಾಯವಾಗಿ ಸೋತಿತು.

ಇದನ್ನು ಓದಿದ್ದೀರಾ?: ಈ ನಾಡಿನ ನಿತ್ಯದ ರೋಗಕ್ಕೆ ‘ಕುವೆಂಪು’ ಎಂಬ ಮದ್ದು

ಇದರ ಬಗ್ಗೆ ಜನತಾ ಪಕ್ಷದ ಆಗಿನ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಬರೆದ ಪತ್ರದಲ್ಲಿ ಬಾಬು ಜಗಜೀವನ್ ರಾಮ್ ಅವರಿಗೆ ಆರ್‍ಎಸ್ಎಸ್ ಮತ್ತು ಜನಸಂಘದ ಬಗ್ಗೆ ಇದ್ದ ಅಭಿಪ್ರಾಯ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಇದು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ 1980ರ ಮಾರ್ಚ್ 8ರ ಆವೃತ್ತಿಯಲ್ಲಿ ಪ್ರಕಟವಾಗಿದೆ. ಇದನ್ನು ಆರೆಸ್ಸೆಸ್ ಅಭಿಮಾನಿ ಬರಹಗಾರರು ಬರೆದಿರುವ ‘Brotharhood in Saffron’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

“ಪಕ್ಷದ ಸೋಲಿಗೆ ‘hostile activities of the RSS’ -ಆರ್‍ಎಸ್ಎಸ್‌ನ ಪಕ್ಪವಿರೋಧಿ ಚಟುವಟಿಕೆಗಳು ಕಾರಣವೆಂದೂ” ಬಾಬು ಜಗಜೀವನ್ ರಾಮ್ ಬರೆದಿದ್ದರು. ಅಷ್ಟು ಮಾತ್ರವಲ್ಲ, ‘secret agreement existed between the RSS and Mrs Gandhi’s Congress Party’ -ಆರೆಸ್ಸೆಸ್ ಮತ್ತು ಇಂದಿರಾ ಗಾಂಧಿಯವರ ಕಾಂಗ್ರೆಸ್ಸಿನ ನಡುವೆ ಗುಪ್ತ ಒಪ್ಪಂದವೂ ಏರ್ಪಟ್ಟಿತ್ತು- ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಇದು ಬಾಬು ಜಗಜೀವನ್ ರಾಮ್ ಅವರಿಗೆ ಆರೆಸ್ಸೆಸ್ -ಜನಸಂಘದ ಬಗ್ಗೆ ಇದ್ದ ಅಭಿಪ್ರಾಯ.

ಇದನ್ನು ವಿರೋಧಿಸಿ ಆರ್‍ಎಸ್ಎಸ್‌ನ ‘ಆರ್ಗನೈಸರ್’ ಪತ್ರಿಕೆಯಲ್ಲಿ ಅಡ್ವಾಣಿಯವರು ಜಗಜೀವನ್ ರಾಮ್ ಅವರನ್ನು ಖಂಡಿಸಿ ತೀವ್ರವಾದ ಟೀಕಾತ್ಮಕ ಲೇಖನವನ್ನು ಬರೆದಿದ್ದರು. ಇದು ಬಾಬು ಜಗಜೀವನ್ ರಾಮ್ ಅವರ ಬಗ್ಗೆ ಆರ್‍ಎಸ್ಎಸ್‌ಗಿರುವ ನೈಜ ಧೋರಣೆ.

ದಲಿತರು ಮತ್ತು ದಮನಿತರ ಮತ್ತು ಈ ದೇಶದ ವಿಮೋಚನೆ ಬಿಜೆಪಿ, ಕಾಂಗ್ರೆಸ್ಸಿನಾಚೆಗೆ ಎಲ್ಲಾ ಶೋಷಿತ ಸಮುದಾಯಗಳು ಮಹಾಮೈತ್ರಿಯೊಂದಿಗೆ ನಡೆಸುವ ಜನಾಂದೋಲನಗಳಲ್ಲಿ ಮತ್ತು ಆ ಮೂಲಕ ಅಧಿಕಾರ ಕೇಂದ್ರಗಳನ್ನು, ಸಮಾಜವನ್ನು ಜನತಾಂತ್ರೀಕರಿಸುವ ಮಾರ್ಗದಲ್ಲಿದೆ.

maxresdefault 54 1
shivasundar
ಶಿವಸುಂದರ್
+ posts

ಚಿಂತಕ, ಬರಹಗಾರ. ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್‌ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಾಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ- ವಿಡಿಯೋ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶಿವಸುಂದರ್
ಶಿವಸುಂದರ್
ಚಿಂತಕ, ಬರಹಗಾರ. ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್‌ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಾಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ- ವಿಡಿಯೋ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X