- ಎಲ್ಲ ಹಂತದಲ್ಲೂ ವರ್ಗಾವಣೆಯಲ್ಲಿ ಸರ್ಕಾರ ಭಾಗಿಯಾಗಿದೆ: ಬಿ ಸಿ ನಾಗೇಶ್
- ಜೈಲುಗಳು ಭಯೋತ್ಪಾದನೆ ಟ್ರೈನಿಂಗ್ ಕೇಂದ್ರಗಳಾಗಿವೆ: ಶ್ರೀನಿವಾಸ ಪೂಜಾರಿ
ವರ್ಗಾವಣೆ ಮತ್ತು ಪೊಲೀಸ್ ಅಧಿಕಾರಿಗಳ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮತ್ತು
ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ ಹೊರ ಹಾಕಿದ್ದಾರೆ.
“ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಎಲ್ಲ ಹಂತದಲ್ಲೂ ವರ್ಗಾವಣೆಯಲ್ಲಿ ಸರ್ಕಾರ ಭಾಗಿಯಾಗಿದೆ. ಶಾಸಕರು ಅಸಮಾಧಾನ ತೋಡಿಕೊಂಡಿರುವುದು ಎಲ್ಲರಿಗೂ ಅರ್ಥ ಆಗುತ್ತದೆ” ಎಂದು ಬೆಂಗಳೂರಿನಲ್ಲಿ ಬಿ ಸಿ ನಾಗೇಶ್ ಆರೋಪಿಸಿದರು.
ಮುಂದುವರಿದು, “ಸಚಿವರು ಅವರವರೇ ಮಾತಾಡಿಕೊಂಡು ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ‘ಡಿ ದರ್ಜೆ’ ನೌಕರರನ್ನೂ ಬಿಡದಂತೆ ವರ್ಗಾವಣೆ ದಂಧೆ ಈ ಸರ್ಕಾರದಲ್ಲಿ ನಡೆಯುತ್ತಿದೆ” ಎಂದರು.
“ವರ್ಗಾವಣೆ ದಂಧೆ ಬಗ್ಗೆ ನಾವು ಮಾತಾಡಿದರೆ ಸಾಕ್ಷ್ಯ ನೀಡಿ ಅಂತಾರೆ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆಗೆ ಏಜೆಂಟರು ಹುಟ್ಟಿಕೊಂಡಿದ್ದಾರೆ. ಈ ಸರ್ಕಾರಕ್ಕೆ ವರ್ಗಾವಣೆ ದಂಧೆ ಬಿಟ್ಟು ಬೇರೆ ಕೆಲಸ ಇಲ್ಲ. ಶಿಕ್ಷಕರ ಅನೇಕ ಸಮಸ್ಯೆಗಳ ನ್ಯಾಯಾಲಯದಲ್ಲಿವೆ. ಆ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಜೀವಕ್ಕೆ ಕಂಟಕ ತರುತ್ತಿರುವ ಜೀವಜಲ; ಆಡಳಿತಶಾಹಿಯೇ ಹೊಣೆ
ಹಣ ಕೊಟ್ಟರೆ ಎಲ್ಲ ವ್ಯವಸ್ಥೆ: ಕೋಟಾ ಶ್ರೀನಿವಾಸ ಪೂಜಾರಿ
“ರಾಜ್ಯದ ಜೈಲುಗಳು ಭಯೋತ್ಪಾದನೆ ಟ್ರೈನಿಂಗ್ ಕೊಡುವ ಕೇಂದ್ರಗಳಾಗಿ ಬದಲಾಗಿವೆ. ಹಣ ಕೊಟ್ಟರೆ ಎಲ್ಲ ವ್ಯವಸ್ಥೆ ಬೇಕಾದರೆ ಸಿಗುತ್ತದೆ. ಅಧಿಕಾರಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಕೇವಲ ಹಿಂಡಲಗಾ ಜೈಲಿನಲ್ಲಿ ಮಾತ್ರ ಅಲ್ಲ ರಾಜ್ಯದ ಬಹುತೇಕ ಎಲ್ಲ ಜೈಲಿನಲ್ಲಿ ಇದೇ ವ್ಯವಸ್ಥೆ ಇದೆ ಎಂದು ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
“ಬೆಂಗಳೂರಿನ ಜೈಲಿನಲ್ಲಿ ಕುಳಿತು ಉಗ್ರ ಚಟುವಟಿಕೆ ಕೆಲಸ ಮಾಡುತ್ತಾರೆ. ಇದಕ್ಕೆ ಸರ್ಕಾರ ಮತ್ತು ಗೃಹ ಇಲಾಖೆ ನೇರ ಕಾರಣ. ಇದನ್ನ ನಾನು ಖಂಡಿಸುತ್ತೇನೆ” ಎಂದರು.
ಉಡುಪಿ ಪ್ರಕರಣ ಎಸ್‌ಐಟಿಗೆ ನೀಡಲಿ
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಬೇಕು. ನಾಳೆ ಮಧ್ಯಾಹ್ನ ರಾಜ್ಯಪಾಲರಿಗೆ ಈ ವಿಚಾರವಾಗಿ ದೂರು ನೀಡುತ್ತಿದ್ದೇವೆ. ಉಡುಪಿ, ಮಂಗಳೂರು ಭಾಗದ ಶಾಸಕರು ರಾಜಭವನಕ್ಕೆ ತೆರಳುತ್ತೇವೆ” ಎಂದು ಹೇಳಿದರು.