ಬಿಜೆಪಿ ಸೇರಲು ಮತ್ತು ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು, ಚಿತ್ರಹಿಂಸೆ ನೀಡಲಾಯಿತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿರುವ ಸಾಕೇತ್ ಗೋಖಲೆ, ಸುಮಾರು ಒಂದು ವರ್ಷ ತಾವು ಜೈಲಿನಲ್ಲಿ ಅನುಭವಿಸಿದ ಸಂಕಷ್ಟಗಳ ಬಗ್ಗೆ ವಿವರಿಸಿದ್ದಾರೆ. ಜೊತೆಗೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅಡಳಿತದಲ್ಲಿ ವಿಪಕ್ಷಗಳ ನಾಯಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಬಿಚ್ಚಿಟ್ಟಿದ್ದಾರೆ.
“ನಾನು ಬಿಜೆಪಿಗೆ ಮಾರಾಟವಾಗಲು ಮತ್ತು ಸೇರಲು ನಿರಾಕರಿಸಿದ್ದೆ. ಆದ್ದರಿಂದ ನನಗೆ ಜೈಲಿನಲ್ಲಿ ಹೊಡೆದು ಚಿತ್ರಹಿಂಸೆ ನೀಡಲಾಯಿತು. ಇದು ನನ್ನೊಬ್ಬನ ಕುರಿತಾದುದ್ದಲ್ಲ” ಎಂದು ಅವರು ಹೇಳಿದ್ದಾರೆ.
“ಇಂತಹ ಹಿಂಸೆಗಳು ನನಗೆ ಮಾತ್ರವಲ್ಲ ಅಥವಾ ನಾನೊಂದು ನಿದರ್ಶನವೂ ಅಲ್ಲ. ಆದರೆ, ಭಾರತೀಯ ರಾಜಕೀಯದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿದ ಲಕ್ಷಣವನ್ನು ನಾನು ಎದುರಿಸಿದ ಸಂಕಷ್ಟಗಳು ಎತ್ತಿ ತೋರಿಸುತ್ತವೆ” ಎಂದಿದ್ದಾರೆ.
It took almost a year to process the pain but it needed to be said:
𝐈 𝐰𝐚𝐬 𝐛𝐞𝐚𝐭𝐞𝐧 & 𝐭𝐨𝐫𝐭𝐮𝐫𝐞𝐝 𝐢𝐧 𝐣𝐚𝐢𝐥 𝐟𝐨𝐫 𝐫𝐞𝐟𝐮𝐬𝐢𝐧𝐠 𝐭𝐨 𝐬𝐞𝐥𝐥 𝐨𝐮𝐭 & 𝐣𝐨𝐢𝐧 𝐭𝐡𝐞 𝐁𝐉𝐏.
But this isn’t about me nor am I the story.
This is only so that the people of… pic.twitter.com/7r9DrMI7tp
— Saket Gokhale MP (@SaketGokhale) April 30, 2024
“ಪ್ರಜಾಪ್ರಭುತ್ವದ ತತ್ವಗಳ ಅವನತಿ ಎದುರಾಗುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಮೋದಿ ಮತ್ತು ಬಿಜೆಪಿಯಿಂದ ಪ್ರತಿಪಕ್ಷಗಳ ಮೇಲೆ ದಾಳಿ ಮಾಡುತ್ತಿದೆ. ಇದನ್ನು ಭಾರತದ ಜನರಿಗೆ ಅರ್ಥ ಮಾಡಿಸಲು ನಾನು ಹೇಳುತ್ತಿದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
“ಮೋದಿಯವರ ದಾಳಿಗೆ ಒಳಗಾದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಈಗಲೇ ಎಚ್ಚೆತ್ತು ನಿಲ್ಲದಿದ್ದರೆ, ನಾವು ಸರ್ವಾಧಿಕಾರ ದೇಶದನ್ನು ಆಳಲು ಆರಂಭಿಸುತ್ತದೆ” ಎಂದು ಅವರು ವಿವರಿಸಿದ್ದಾರೆ.
ಕ್ರೌಡ್ ಫಂಡ್ ಮಾಡಿದ ಹಣವನ್ನು ವೈಯಕ್ತಿಕ ಬಳಕೆಗಾಗಿ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಗೋಖಲೆ ಅವರನ್ನು ಬಂಧಿಸಿ, ಜೈಲಿನಲ್ಲಿರಿಸಲಾಗಿತ್ತು.