ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ದಿನನಿತ್ಯ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದ್ದು, ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಕಾಫಿ ಕಪ್ಅನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
“ಕಳೆದ ಬಾರಿಯೂ ಸಮಯಕ್ಕೆ ಸರಿಯಾಗಿ ಬಂದವರಿಗೆ ಉಡುಗೊರೆ ನೀಡುವುದಾಗಿ ಮತ್ತು ಅವರ ಹೆಸರನ್ನು ಘೋಷಿಸುವುದಾಗಿ ಹೇಳಿದ್ದೆವು. ಹಲವರು ಸರಿಯಾದ ಸಮಯಕ್ಕೆ ಸದನದಲ್ಲಿ ಹಾಜರಿದ್ದರು. ಅವರನ್ನು ಪ್ರೋತ್ಸಾಹಿಸಲಾಗಿತ್ತು. ಈ ಬಾರಿಯೂ ಉಡುಗೊರೆ ನೀಡುತ್ತೇವೆ” ಎಂದು ಹೇಳಿದ್ದಾರೆ.
ಸಚಿವ ಜಮೀರ್ ಅವರ ಹೇಳಿಕೆ ಬಗ್ಗೆ ಮಾತನಾಡಿದ ಖಾದರ್, “ಚುನಾವಣಾ ಸಮಯದ ರಾಜಕೀಯ ಹೇಳಿಕೆಗೆ ನಾನು ಉತ್ತರ ಕೊಟ್ಟಿದ್ದೇನೆ. ವಿಪಕ್ಷದವರೂ ಅವರ ಹೇಳಿಕೆ ನೀಡಿದ್ದಾರೆ. ಅದನ್ನು ಅಧಿವೇಶನಕ್ಕೆ ತರಬಾರದು. ಸದನದ ಅವಧಿಯನ್ನು ಅಭಿವೃದ್ಧಿ ಕುರಿತ ಚರ್ಚೆಗಳಿಗಾಗಿ ಬಳಸಿಕೊಳ್ಳಬೇಕು” ಎಂದರು.