ಸಾರ್ವಜನಿಕ ಜಮೀನನ್ನು ಕಬಳಿಸಿರುವ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶ ಮಾಡಿ ಐದು ತಿಂಗಳು ಕಳೆದರೂ ಈವರೆಗೆ ಕ್ರಮ ಕೈಗೊಂಡಿಲ್ಲವೆಂದರೆ ಈ ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾಲೆಷ್ಟು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಪತ್ರಿಕೆಯ ವರದಿ ಉಲ್ಲೇಖಿಸಿ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಬೇಲಿಯೇ ಎದ್ದು ಹೊಲ ಮೇಯ್ದಂತೆ’ ರಾಜ್ಯದ ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಸಾವಿರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ಗುಳುಂ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮತ್ತೊಂದು ಕರ್ಮಕಾಂಡ ಬಟಾಬಯಲಾಗಿದೆ” ಎಂದಿದ್ದಾರೆ.
“ಸರ್ಕಾರದ ಬೊಕ್ಕಸ ತುಂಬಿಸುವ ನೆಪದಲ್ಲಿ ಖಾಸಗಿ ಕನ್ಸಲ್ಟೆನ್ಸಿ ಕಂಪನಿ ಮೂಲಕ 25,000 ಎಕರೆ ಸರ್ಕಾರಿ ಜಮೀನನ್ನ ಬಳಸಿಕೊಳ್ಳುವ ವರದಿ ತರಿಸಿಕೊಂಡಿರುವುದೂ ಸಹ ಜಮೀನು ಕಬಳಿಸುವ ಈ ಸಂಚಿನ ಭಾಗವೇ ಸಿಎಂ ಸಿದ್ದರಾಮಯ್ಯ ಅವರೇ?” ಎಂದು ಕುಟುಕಿದ್ದಾರೆ.
‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ರಾಜ್ಯದ ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಸಾವಿರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ಗುಳುಂ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಭ್ರಷ್ಟ @INCKarnataka ಸರ್ಕಾರದ ಮತ್ತೊಂದು ಕರ್ಮಕಾಂಡ ಬಟಾಬಯಲಾಗಿದೆ.
ಸಾರ್ವಜನಿಕ ಜಮೀನನ್ನ ಕಬಳಿಸಿರುವ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲು ಕಂದಾಯ… pic.twitter.com/kTC5DuvcfY
— R. Ashoka (ಮೋದಿ ಅವರ ಕುಟುಂಬ) (@RAshokaBJP) June 20, 2024
