ಬಿಹಾರ ಫಲಿತಾಂಶ ಮತದಾನಕ್ಕೂ ಮುನ್ನವೇ ನಿರ್ಧಾರವಾಗಿತ್ತಾ? ವರದಿ ಹೇಳುವುದೇನು?

Date:

ಬಿಹಾರ ಚುನಾವಣೆಯಲ್ಲಿ ಮತದಾನ ಪ್ರಮಾಣದ ದಿಢೀರ್ ಏರಿಕೆ, ಚುನಾವಣಾ ಕಾರ್ಯಗಳಲ್ಲಿ ಜೀವಿಕಾ ದೀದಿಯರ ಬಳಕೆ, ಎಸ್‌ಐಆರ್ ಪ್ರಕ್ರಿಯೆ, ಬಿಎಲ್‌ಒಗಳ ಮೇಲಿನ ಒತ್ತಡ, ಎನ್‌ಡಿಎ ಅಭ್ಯರ್ಥಿಗಳ ಗೆಲುವಿನ ಅಂತರಗಳನ್ನು ವರದಿಯೊಂದು ವಿಶ್ಲೇಷಿಸಿದೆ. ಈ ಎಲ್ಲ ಕಾರಣಗಳಿಂದಾಗಿ, ಬಿಹಾರ ಚುನಾವಣೆಯ ಫಲಿತಾಂಶವು ಮತ ಎಣಿಕೆಗೂ ಮೊದಲೇ ನಿರ್ಧಾರಿತವಾಗಿತ್ತಾ ಎಂಬ ಪ್ರಶ್ನೆಗೆ ಮತ್ತಷ್ಟು ಪುಷ್ಟಿ ನೀಡಿದೆ.

- Advertisement -

ಮಾಜಿ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ, ಕಂಪ್ಯೂಟರ್ ವಿಜ್ಞಾನಿ ಪ್ರೊ. ಹರೀಶ್ ಕರ್ಣಿಕ್ ಹಾಗೂ ಡಾ. ಪ್ಯಾರಾ ಲಾಲ್ ಗರ್ಗ್ ಅವರನ್ನು ಒಳಗೊಂಡ ತಜ್ಞರಿರುವ ‘ವೋಟ್ ಫಾರ್ ಡೆಮಾಕ್ರಸಿ’ (VFD) ಸಂಸ್ಥೆಯು ‘ದಿ ಬಿಹಾರ ವರ್ಡಿಕ್ಟ್-2025’ ಹೆಸರಿನಲ್ಲಿ ವರದಿ ಬಿಡುಗಡೆ ಮಾಡಿದೆ. ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಗಂಭೀರ ವಿಚಾರಗಳು ಮತ್ತು ದೋಷಗಳನ್ನು ಮುನ್ನೆಲೆಗೆ ತಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಬಿಹಾರದಲ್ಲಿ ಮತದಾನದ ಅಂಕಿಅಂಶಗಳು ಏಕಾಏಕಿ ಏರಿಕೆಯಾಗಿವೆ ಎಂಬುದನ್ನು ಗಮನಿಸಿರುವ ವರದಿಯು, ಈ ಏರಿಕೆಯನ್ನು ‘ಮಿಡ್‌ನೈಟ್‌ ಹೈಕ್’ ಎಂದು ಕರೆದಿದೆ. ಮತದಾನ ಮುಗಿದ ಬಳಿಕ, ಶೇಕಡಾವಾರು ಮತದಾನ ಪ್ರಮಾಣ ಬದಲಾಗುವುದು ಸಹಜ. ಆದರೆ, ಬಿಹಾರದಲ್ಲಿ ಮತದಾನ ಮುಗಿದು, ಫಲಿತಾಂಶದ ಹಿಂದಿನ ದಿನ, ನವೆಂಬರ್ 12ರಂದು ಮತದಾನದ ಪ್ರಮಾಣವನ್ನು ಚುನಾವಣಾ ಆಯೋಗ ಏಕಾಏಕಿ ಏರಿಕೆ ಮಾಡಿದೆ. ಮೊದಲ ಹಂತದ ಮತದಾನದ ಪ್ರಮಾಣವು 64.46% ರಿಂದ 65.08%ಗೆ ಏರಿದ್ದರೆ, ಎರಡನೇ ಹಂತದ ಮತದಾನದ ಮೂಲ ಪ್ರಮಾಣವು 68.76% ಇದ್ದದ್ದು, ಸುಮಾರು 4%ರಷ್ಟು ಎಚ್ಚಾಗಿದೆ. ಒಟ್ಟು 1,34,145 ಮತಗಳನ್ನು ಕೃತಕವಾಗಿ ಸೇರಿಸಲಾಗಿದೆ ಎಂದು ವರದಿ ಆಪಾದಿಸಿದೆ. ಈ ಕೃತಕವಾಗಿ ಸೇರ್ಪಡೆಗೊಂಡ ಮತಗಳು ಸುಮಾರು 20 ಕ್ಷೇತ್ರಗಳ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ವರದಿ ವಿಶ್ಲೇಷಿಸಿದೆ.

ಜೊತೆಗೆ, ಸಣ್ಣ ಅಂತರದ ಗೆಲುವು ಮತ್ತು ಅಂಚೆ ಮತಗಳ ಎಣಿಕೆಯನ್ನೂ ವರದಿ ವಿಶ್ಲೇಷಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು, ಅದರಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿರುವ ಅನೇಕ ಕ್ಷೇತ್ರಗಳಲ್ಲಿ ಗೆಲುವಿನ ಅಂತರವು ತೀರಾ ಕಡಿಮೆಯಿದೆ. ಬಿಜೆಪಿ ಗೆದ್ದಿರುವ 14 ಮತತು ಜೆಡಿಯು ಗೆದ್ದಿರುವ 5 ಕ್ಷೇತ್ರಗಳು ಸೇರಿದಂತೆ ಒಟ್ಟು 21 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವು 15 ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಅದರಲ್ಲೂ, ಕುರ್ಹಾನಿ ಮತ್ತು ರಾಜ್ಗೀರ್ ರೀತಿಯ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಒಂದೇ ಸಂಖ್ಯೆಯ ಮತಗಳನ್ನು ಪಡೆದು ಗೆದ್ದಿದ್ದಾರೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಈ ಲೇಖನ ಓದಿದ್ದೀರಾ?: ಸಾಮಾಜಿಕ ಬಹಿಷ್ಕಾರ ಹಾಕಿದ್ರೆ ಕಂಬಿ ಎಣಿಸೋದು ಪಕ್ಕಾ!

ಇನ್ನು, ಸುಮಾರು 1.8 ಲಕ್ಷ ‘ಜೀವಿಕಾ ದೀದಿ’ಯರನ್ನು ಚುನಾವಣಾ ಕೆಲಸಗಳಿಗೆ ಸ್ವಯಂಸೇವಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ, ಮತದಾನಕ್ಕೂ ಕೆಲವೇ ದಿನಗಳ ಮುನ್ನ ಅವರೆಲ್ಲರಿಗೂ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ಹಣ ನೀಡಲಾಗಿತ್ತು. ಸರ್ಕಾರದಿಂದ ಆರ್ಥಿಕ ಲಾಭ ಪಡೆದವನ್ನು ಚುನಾವಣಾ ಕೆಲಸಕ್ಕೆ ಬಳಸಿರುವ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.ಚುನಾವಣಾ ನಿಷ್ಪಕ್ಷತೆಯನ್ನು ಕಾಪಾಡಬೇಕಾದ ಚುನಾವಣಾ ಆಯೋಗವು ಆಡಳಿತಾರೂಢ ಮೈತ್ರಿಕೂಟದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿದೆಯೇ ಎಂಬ ಸಂದೇಹವನ್ನು ಹೆಚ್ಚಿಸಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗಾಗಿ (ಎಸ್‌ಐಆರ್) ಬಿಎಲ್ಒಗಳ ಮೇಲೆ ಒತ್ತಡ ಹೇರಲಾಗಿದೆ. 2025ರ ಜೂನ್ 24ರಂದು ಎಸ್‌ಐಆರ್ ಘೋಷಿಸಿದ ಆಯೋಗವು, ಆಗಸ್ಟ್‌ 1ರಂದು ಕರಡು ಪಟ್ಟಿ ಬಿಡುಗಡೆ ಮಾಡಿತು. ಈ ತ್ವರಿತ ಕೆಲಸಕ್ಕಾಗಿ ಬಿಎಲ್‌ಒಗಳಾಗಿ ನಿಯೋಜಿತರಾಗಿದ್ದ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡವಿತ್ತು. ಅಲ್ಲದೆ, ಎಸ್‌ಐಆರ್ ಘೋಷಣೆಯಾದ ಬಿಹಾರದಲ್ಲಿ 7.89 ಕೋಟಿ ಮತದಾರರಿದ್ದರು. ಆದರೆ, ಆಗಸ್ಟ್ 1ರಂದು ಕರಡು ಪಟ್ಟಿಯಲ್ಲಿ ಬಿಡುಗಡೆಯಾದಾಗ 7.24 ಕೋಟಿ ಮತದಾರರಿಗೆ ಕುಸಿದಿತ್ತು. ಕೇವಲ 37 ದಿನಗಳಲ್ಲಿ 65.69 ಲಕ್ಷ ಮತದಾರರನ್ನು ಪಟ್ಟಿಯಿಂದ ಆಯೋಗವು ಹೊರಹಾಕಿತು. ಅವರಲ್ಲಿ ಬಹುಸಂಖ್ಯಾತರು ಮುಸ್ಲಿಮರು, ದಲಿತರು ಹಾಗೂ ವಲಸೆ ಕಾರ್ಮಿಕರೇ ಇದ್ದಾರೆ ಎಂದು ವರದಿ ವಿವರಿಸಿದೆ.

ಚುನಾವಣಾ ಆಯೋಗ ‘ವಿದೇಶಿಯರನ್ನು’ ಪತ್ತೆ ಹಚ್ಚುವ ನೆಪದಲ್ಲಿ ಎಸ್‌ಐಆರ್ ನಡೆಸಿತು. ಆದರೆ, ಒಬ್ಬನೇ ಒಬ್ಬ ವಿದೇಶಿಗನನ್ನು ಪತ್ತೆ ಹಚ್ಚಲಿಲ್ಲ. ಆದರೆ, ದೇಶದ ಬಡವರು ಮತ್ತು ಹಿಂದುಳಿದವರನ್ನು ಹೊರಹಾಕಿತು. ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಂಡಿತು. ಇದರಲ್ಲಿ, ಸ್ಪಷ್ಟವಾಗಿ ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಆಧಾರ್ ಅಥವಾ ಇತರ ದಾಖಲೆಗಳಿಲ್ಲ ಎಂಬ ಹೆಸರಿನಲ್ಲಿ ಮತದಾನದ ಹಕ್ಕನ್ನೇ ಕಸಿದುಕೊಳ್ಳುವುದು ಸಂವಿಧಾನ ಬಾಹಿರವೆಂದು ವರದಿ ಪ್ರತಿಪಾದಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...