ಅರ್ಹತೆ ಇಲ್ಲದ ಅಸಮರ್ಥ ಕಾಂಗ್ರೆಸ್ ಸರ್ಕಾರ ಸರ್ಕಾರ ಪ್ರಶ್ನೆ ಕೇಳುವುದಕ್ಕೆ ಅವಕಾಶ ಕೊಡದೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿಯು ಸರ್ಕಾರದ ಮುಂದೆ ಹತ್ತು ಪ್ರಶ್ನೆಗಳನ್ನು ಇಟ್ಟಿದೆ.
- ಖಾಸಗಿ ರಾಜಕೀಯ ಕಾರ್ಯಕ್ರಮಕ್ಕೆ ಅನೈತಿಕವಾಗಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಹೇಗೆ?
- ಬಂಧಿತ ಐವರು ಉಗ್ರರ ವಿರುದ್ಧ ಪ್ರೈಮಾಫೇಸಿ ಸಾಕ್ಷಿಗಳಿದ್ದರೂ ಗೃಹ ಸಚಿವರು ಕ್ಲೀನ್ ಚೀಟ್ ಕೊಟ್ಟಿದ್ದೇಕೆ?
- ಮುಂಗಾರು ಕೈಕೊಟ್ಟು ಕಂಗಾಲಾದ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. 42 ರೈತರು ಸಾವಿಗೆ ಶರಣಾಗಿದ್ದಾರೆ. ಸರ್ಕಾರದ ಕ್ರಮಗಳೇನು?
- ಕಾನೂನು ಸುವ್ಯವಸ್ಥೆ ಹದಗೆಟ್ಟು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಶೇಕಡಾ 35 ರಷ್ಟು ಕ್ರೈಮ್ ರೇಟ್ ಹೆಚ್ಚಾಗಿದೆ. ಗೃಹ ಸಚಿವರು ಮಾಡುತ್ತಿರುವುದಾದರೂ ಏನು?
- ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಗದ್ದುಗೆ ಹಿಡಿದು ಇದೀಗ ಕಂಡೀಷನ್ ಹಾಕಿದ್ದು ಅಲ್ಲದೆ, ಅದನ್ನು ಜಾರಿ ಮಾಡದೆ ಕಾಲ ಹರಣ ಮಾಡುತ್ತಿರುವುದು ಏಕೆ?
- ತರಕಾರಿ, ಹಾಲು, ವಿದ್ಯುತ್, ನೀರು ಹೀಗೆ ಎಲ್ಲ ಬೆಲೆಗಳನ್ನು ಏರಿಸುತ್ತಾ ಜನರ ರಕ್ತವನ್ನು ಹೀರುತ್ತಿರುವುದು ಏಕೆ?
- ನೂರಾರು ಕೋಟಿ ಕೈಬದಲಾಗಿರುವ ಶ್ಯಾಡೋ ಸಿಎಂ ನೇತೃತ್ವದ ವರ್ಗಾವಣೆ ದಂಧೆಗೆ ಕೊನೆ ಎಂದು?
- ಸರ್ಕಾರಿ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ಮಾಡುವ, ಟಾರ್ಗೆಟ್ ನೀಡುವ ಅಧಿಕಾರ ಸುರ್ಜೇವಾಲಾರಿಗೆ ಕೊಟ್ಟಿದ್ದು ಯಾರು?
- ಕಲುಷಿತ ನೀರು ಪೂರೈಕೆ, ಬಿಸಿಯೂಟದಲ್ಲಿ ವಿಷಪ್ರಾಶನ, ಕೊಳೆತ ಮೊಟ್ಟೆಗಳನ್ನು ಕೊಟ್ಟು ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುತ್ತಿರುವುದು ಏಕೆ?
- ರೈತ ವಿರೋಧಿ, ಜನ ವಿರೋಧಿ, ನಾಡ ವಿರೋಧಿ, ಧರ್ಮ ವಿರೋಧಿ ನಿಲುವುಗಳನ್ನು ಕೈಗೊಂಡು ಏನನ್ನು ಸಾಧಿಸಲು ಹೊರಟಿದ್ದೀರಿ..?
ಈ ಸುದ್ದಿ ಓದಿದ್ದೀರಾ? ಅಧಿವೇಶನ | ಸಭಾಧ್ಯಕ್ಷರ ವಿರುದ್ಧ ಪ್ರತಿಭಟನೆ; ಎಚ್ಡಿಕೆ, ಬೊಮ್ಮಾಯಿ ಪೊಲೀಸರ ವಶಕ್ಕೆ
“ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳಲ್ಲಿ ನೂರೆಂಟು ಸಮಸ್ಯೆಗಳು, ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಕಾಂಗ್ರೆಸ್ ಈ ಪ್ರಶ್ನೆಗಳಿಂದ ದೂರ ಓಡುತ್ತಿದೆ, ಪ್ರಶ್ನಿಸುವ ನಮ್ಮ ಶಾಸಕರನ್ನು ಅಮಾನತು ಮಾಡಿ ಪ್ರಜಾಪ್ರಭುತ್ವವನ್ನು ದಮನಿಸುತ್ತಿದೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲಾಗುತ್ತಿದೆ ದಾಳಿ ಎಂದು ಬಿಜೆಪಿ ಆರೋಪಿಸಿದೆ.”