ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯೋರ್ವರನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ಅಮಾನವೀಯ ಘಟನೆಗೆ ಸಂಬಂಧಿಸಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ‘ಘಟನೆ ನಾಚಿಕೆಗೇಡು’ ಎಂದು ಖಂಡಿಸಿದ್ದಾರೆ.
ಅಲ್ಲದೇ, ಈ ಸಂಬಂಧ ಜೆ.ಪಿ.ನಡ್ಡಾ ಅವರು 5 ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯೊಂದನ್ನು ರಚನೆ ಮಾಡಿದ್ದು, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳೆಯರ ಮೇಲೆ ಇಂತಹ ಘೋರ ಅಪರಾಧಗಳು ನಿಯಮಿತವಾಗಿ ನಡೆಯುತ್ತಿವೆ. ಇಂತಹ ಅಪರಾಧಗಳನ್ನು ದೇಶದ ಎಲ್ಲೆಡೆ ಕಾಂಗ್ರೆಸ್ ಸರ್ಕಾರ ತಡೆಗಟ್ಟುವಲ್ಲಿ ತನ್ನ ಬೇಜವಾಬ್ದಾರಿಯನ್ನು ತೋರಿಸಿದೆ” ಎಂದು ವಾಗ್ದಾಳಿಗೈದಿದ್ದಾರೆ.
Our National President Shri @JPNadda Ji has strongly condemned the shocking incident of parading a naked Tribal Woman in Belagavi, Karnataka.
Shri Nadda Ji has further constituted a five-member fact-finding committee to visit the incident site in CONgress ruled Karnataka and… pic.twitter.com/9Z9rHC7QBa
— C T Ravi 🇮🇳 ಸಿ ಟಿ ರವಿ (@CTRavi_BJP) December 15, 2023
ಸಮಿತಿಯಲ್ಲಿ ಸಂಸದೆಯರಾದ ಅಪ್ರಜಿತಾ ಸಾರಂಗಿ, ಸುನೀತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನು ಆಯ್ಕೆ ಮಾಡಿರುವುದಾಗಿ ಜೆ ಪಿ ನಡ್ಡಾ ತಿಳಿಸಿದ್ದಾರೆ.
ಇದೇ ಘಟನೆ ವಿರೋಧಿಸಿ ಕರ್ನಾಟಕದ ಬಿಜೆಪಿ ಸಂಸದರು ಶುಕ್ರವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
#WATCH | Delhi: Karnataka BJP MPs hold a protest in front of Gandhi Statue against the Karnataka Govt after a woman in Belagavi was allegedly assaulted. pic.twitter.com/WzZ3O5IpIH
— ANI (@ANI) December 15, 2023
“ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ವಿನಾಕಾರಣ ಎಸ್‌ಸಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಸ್ ಸಿ, ಎಸ್ ಟಿ ಮಹಿಳೆಯರಿಗೆ ಭದ್ರತೆ ನೀಡುತ್ತಿಲ್ಲ” ಎಂದು ಬಿಜೆಪಿ ನಾಯಕ, ಸಂಸದ ಡಿ.ವಿ. ಸದಾನಂದಗೌಡ ಆರೋಪಿಸಿದರು.
ನೆಟ್ಟಿಗರಿಂದ ಬಿಜೆಪಿ ಮುಖಂಡರಿಗೆ ಪ್ರಶ್ನೆಗಳ ಸುರಿಮಳೆ
ಜೆಪಿ ನಡ್ಡಾ ಅವರು ಹೊರಡಿಸಿರುವ ಸತ್ಯಶೋಧನಾ ಸಮಿತಿ ನೇಮಕ ಆದೇಶವನ್ನು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಿಟಿ ರವಿ ಸೇರಿದಂತೆ ಹಲವು ಮುಖಂಡರು ಹಂಚಿಕೊಳ್ಳುತ್ತಿದ್ದಾರೆ.
Did he issue such a statement when similar incidents were reported from Manipur or other BJP ruled states?
Hv real outrage & not just politically suited& motivated ones.
Politicians r indeed vultures waiting to capitalise on d plight of anyone & everyone provided it suits them!— 𝒜𝒷𝓎 𝒞𝒽𝒶𝒸𝓀𝑜 (@AbyChackoNgp) December 15, 2023
ಇದನ್ನು ಪ್ರಶ್ನಿಸಿರುವ ನೆಟ್ಟಿಗರು, “ಕಳೆದ ಹಲವಾರು ತಿಂಗಳುಗಳಿಂದ ಪ್ರಕ್ಷುಬ್ದಗೊಂಡಿರುವ ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಲಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕರ ಮೌನವೇಕೆ, ಸಂತ್ರಸ್ತೆ ಅಲ್ಲಿ ಕ್ರೈಸ್ತೆಯಾಗಿರುವುದು ಕಾರಣವೇ ಅಥವಾ ಅಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕಾರಣವೇ?” ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆಯುತ್ತಿದ್ದಾರೆ.
ಡಿ.16ರಂದು(ನಾಳೆ) ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಬೆಳಗಾವಿ ಘಟನೆಯನ್ನು ಖಂಡಿಸಿ ಡಿಸೆಂಬರ್ 16 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.
BJP strongly condemns the heinous incident in Belgaum where a tribal woman was stripped and paraded naked in the village. Rising crimes against women in the state highlights the collapse of Law & Order, besides showcasing the incompetency of the Congress government in preventing… pic.twitter.com/zyWXvzVfCe
— Vijayendra Yediyurappa (@BYVijayendra) December 15, 2023
ಬೆಳಗಾವಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಎಂಟು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿರುವುದರಿಂದ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಆಸ್ಪತ್ರೆಯಲ್ಲಿರುವವರನ್ನು ಭೇಟಿ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಮಹಿಳೆ ಮಗ ದುಂಡಪ್ಪ ನಾಯಕ್ ಮತ್ತು ಪ್ರಿಯಾಂಕ ಓಡಿ ಹೋಗಿದ್ದರು. ಇದರಿಂದ ಕೆರಳಿದ ಪ್ರಿಯಾಂಕಾ ಕುಟುಂಬಸ್ಥರು ದುಂಡಪ್ಪ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ತಾಯಿ ಕಮಲವ್ವಳ ಬಟ್ಟೆ ಬಿಚ್ಚಿ, ಮೆರವಣಿಗೆ ನಡೆಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು. ಮನೆಯನ್ನ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದರು. ಮನೆ ಮೇಲೆ ಕಲ್ಲು ತೂರಿ ಕಿಟಿಕಿ ಗಾಜು ಪುಡಿಪುಡಿ ಮಾಡಿದ್ದರು. ಮನೆಯ ಮೇಲ್ಛಾವಣಿಯನ್ನೂ ಹಾನಿ ಮಾಡಿದ್ದರು. ಘಟನೆ ಬಳಿಕ ಗಾಯಾಳು ಕಮಲವ್ವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
“ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಈ ನಡುವೆ ನಿನ್ನೆ(ಡಿ.14) ಹೈಕೋರ್ಟ್, “ದ್ರೌಪದಿಯ ವಸ್ತ್ರಾಪಹರಣದಿಂದ ಪಾರು ಮಾಡಲು ಕೃಷ್ಣನಿದ್ದ, ಇಲ್ಲಿ ಯಾರಿದ್ದಾರೆ?” ಎಂದು ಕಿಡಿಕಾರಿತ್ತು.