ವಿರೋಧ ಪಕ್ಷವು ವಿಫಲವಾಗಿರುವ ಕಾರಣ ಬಿಜೆಪಿ ಗೆಲ್ಲುತ್ತಲೇ ಇದೆ: ಅಸಾದುದ್ದೀನ್ ಓವೈಸಿ

Date:

Advertisements

ವಿರೋಧ ಪಕ್ಷವು ವಿಫಲವಾಗಿದೆ. ಹೀಗಾಗಿ ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಂಡು ಬಿಜೆಪಿ ನಿರಂತರವಾಗಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಹಾಗೆಯೇ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷ ಮೋದಿ ವಿರೋಧಿ ಮತಗಳನ್ನು ವಿಭಜಿಸುತ್ತದೆ ಎಂಬ ವಾದವನ್ನು ತಿರಸ್ಕರಿಸಿದರು.

ಈ ಬಗ್ಗೆ ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, “ನೀವು ನನ್ನ ಮೇಲೆ ಹೇಗೆ ಆರೋಪ ಹೊರಿಸಬಹುದು ಎಂದು ಹೇಳಿ? ನಾನು 2024ರ ಸಂಸತ್ ಚುನಾವಣೆಯಲ್ಲಿ ಹೈದರಾಬಾದ್, ಔರಂಗಾಬಾದ್, ಕಿಶನ್‌ಗಂಜ್ ಮತ್ತು ಇತರ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ 240 ಸ್ಥಾನಗಳನ್ನು ಪಡೆದಿದೆ. ಇದಕ್ಕೆ ನಾನು ಜವಾಬ್ದಾರನಾಗುತ್ತೇನೆಯೇ” ಎಂದು ಪ್ರಶ್ನಿಸಿದರು.

ಇದನ್ನು ಓದಿದ್ದೀರಾ? ದೆಹಲಿ | ಅಸಾದುದ್ದೀನ್ ಒವೈಸಿ ಮನೆ ಮೇಲೆ ಕಪ್ಪು ಮಸಿ ಎಸೆದ ದುಷ್ಕರ್ಮಿಗಳು; ‘ಹೆದರಲ್ಲ’ ಎಂದ ಸಂಸದ

Advertisements

“ವಿರೋಧ ಪಕ್ಷವು ವಿಫಲವಾಗಿರುವ ಕಾರಣದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಬಿಜೆಪಿ ಸುಮಾರು ಶೇಕಡ 50ರಷ್ಟು ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಂಡು ಚುನಾವಣೆಗಳಲ್ಲಿ ಗೆಲ್ಲುತ್ತಿದೆ. ಬಿಜೆಪಿ ಗೆಲುವಿಗೆ ನಮ್ಮನ್ನು ದೂಷಿಸುವುದು. ನಮ್ಮನ್ನು ಬಿಜೆಪಿಯ ಬಿ-ಟೀಮ್ ಎಂದು ಕರೆಯುವುದು ವಿಪಕ್ಷದ ದ್ವೇಷದ ಪ್ರತೀಕವೇ ಹೊರತು ಬೇರೇನಿಲ್ಲ. ನಮಗೆ ಹೆಚ್ಚಾಗಿ ಮುಸ್ಲಿಮರ ಮತ ಸಿಗುತ್ತದೆ ಎಂಬ ಸಿಟ್ಟು ಅವರಲ್ಲಿದೆ” ಎಂದು ಓವೈಸಿ ದೂರಿದರು.

AIMIM ಅನ್ನು ಭದ್ರಕೋಟೆಯಾದ ಹೈದರಾಬಾದ್‌ ಮಾತ್ರವಲ್ಲದೇ ಇತರೆ ಕಡೆಯೂ ಬೆಳೆಸಲು ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಅಪಹಾಸ್ಯ ಮಾಡಿವೆ. ಓವೈಸಿ ಬಿಜೆಪಿ ವಿರೋಧಿ ಮುಸ್ಲಿಮರ ಮತಗಳನ್ನು ಕಸಿದು ಕೊನೆಗೆ ಬಿಜೆಪಿಗೆ ಲಾಭ ಮಾಡಿಕೊಡುತ್ತದೆ ಎಂಬುದು ವಿಪಕ್ಷಗಳ ಅಭಿಪ್ರಾಯವಾಗಿದೆ. ಈ ವಾದವನ್ನು ಓವೈಸಿ ತಿರಸ್ಕರಿಸಿದ್ದಾರೆ.

“ಸಮಾಜದ ಪ್ರತಿಯೊಂದು ವಿಭಾಗವು ರಾಜಕೀಯ ನಾಯಕತ್ವವನ್ನು ಹೊಂದಿರುವಾಗ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಆದರೆ ಮುಸ್ಲಿಮರು ತಮ್ಮ ರಾಜಕೀಯ ಧ್ವನಿಯನ್ನು ಎತ್ತುವ, ರಾಜಕೀಯ ನಾಯಕತ್ವವನ್ನು ಹೊಂದಿರಬೇಕು ಎಂಬುದನ್ನು ನೀವು ಬಯಸುವುದಿಲ್ಲ” ಎಂದು ಓವೈಸಿ ಹೇಳಿದ್ದಾರೆ. ಕಾಂಗ್ರೆಸ್ ಅನ್ನು ಉಲ್ಲೇಖಿಸಿ ನೀವು ಈ ಹೇಳಿಕೆ ನೀಡುತ್ತಿದ್ದೀರಾ ಎಂಬ ಸಂದರ್ಶಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಓವೈಸಿ, ಬಿಎಸ್‌ಪಿ, ಎಸ್‌ಪಿ ಮತ್ತು ಬಿಜೆಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಉಲ್ಲೇಖಿಸುತ್ತಿರುವುದಾಗಿ ಹೇಳಿದ್ದಾರೆ.

“ಯಾದವ ಒಬ್ಬ ನಾಯಕನಾಗುತ್ತಾನೆ, ಮುಸಲ್ಮಾನ ಭಿಕ್ಷುಕನಾಗುತ್ತಾನೆ. ಮೇಲ್ಜಾತಿಯ ಒಬ್ಬ ನಾಯಕನಾಗುತ್ತಾನೆ, ಮುಸಲ್ಮಾನ ಭಿಕ್ಷುಕನಾಗುತ್ತಾನೆ. ಅದು ಎಷ್ಟು ನ್ಯಾಯ, ಹೇಳಿ” ಎಂದು ಓವೈಸಿ ಪ್ರಶ್ನಿಸಿದರು.

“ಭಾರತದ ಸಮಗ್ರತೆ ಮತ್ತು ಭದ್ರತೆಯ ಪ್ರಶ್ನೆ ಬಂದಾಗ ನಾವು ಮುಂದೆ ಬಂದು ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲುತ್ತೇವೆ. ಆದರೆ ನಾವು ನಮ್ಮ ಮನೆಯೊಳಗಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾಗಿದೆ, ಅಲ್ಲವೇ”ಎಂದು ಕೇಳಿದರು.

“ಸುಮಾರು ಶೇಕಡ 15ರಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪಾಗಿದ್ದರೂ, ಮುಸ್ಲಿಮರು ಶಾಸಕಾಂಗ ಮತ್ತು ಸಂಸತ್ತಿನಲ್ಲಿ ಕೇವಲ ಶೇಕಡ 4ರಷ್ಟು ಭಾಗಿತ್ವವನ್ನು ಹೊಂದಿದ್ದಾರೆ. ರಾಜಕೀಯ ಪಕ್ಷಗಳು ಮುಸ್ಲಿಮರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ. ಮತ್ತೆ ಜನರು ಮುಸ್ಲಿಮರಿಗೆ ಮತ ಹಾಕುವುದಿಲ್ಲ” ಎಂದು ಹೇಳಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X