ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್ ದೋಷಿ ಎಂದು ತಿಳಿಸಿದ್ದ ನ್ಯಾಯಾಲಯವು, ಇಂದು(ಡಿ.15) 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್‌ಗೆ ಸೋನಭದ್ರ ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 10 ಲಕ್ಷ ದಂಡ ವಿಧಿಸಿ, ಸೋನಭದ್ರಾ ಜಿಲ್ಲೆಯ ಜನಪ್ರತಿನಿಧಿಗಳ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಎರಡು ವರ್ಷಗಳಿಗಿಂತಲೂ ಹೆಚ್ಚು ಜೈಲು ಶಿಕ್ಷೆ ವಿಧಿಸಲ್ಪಟ್ಟಿರುವುದರಿಂದ ಶಾಸಕ ಸ್ಥಾನವೂ ರದ್ದಾಗಲಿದೆ. ಡಿ.12ರಂದು ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯವು ಡಿ.15ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತ್ತು.
BJP MLA Ramdular Gond convicted in the rape of a minor girl, Court sentenced the MLA to 25 years of imprisonment and a fine of Rs 10 lakh. pic.twitter.com/wiA1iyC7k2
— Mohammed Zubair (@zoo_bear) December 15, 2023
ರಾಮ್ದುಲರ್ ಗೊಂಡ್ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ, ಬಳಿಕ ಹೇಳಿಕೆ ಬದಲಿಸಲು ಬಾಲಕಿಗೆ 40 ಲಕ್ಷ ರೂ. ಆಮಿಷವೊಡ್ಡಿದ್ದನು.
ಉತ್ತರ ಪ್ರದೇಶದ ದುದ್ಧಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್ ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಡಿ.12ರಂದು ದೋಷಿ ಎಂದು ತೀರ್ಪು ನೀಡಿತ್ತು.
नाबालिग से रेप के मामले में बीजेपी विधायक रामदुलार को 25 साल की सजा, 10 लाख का जुर्माना
सोनभद्र की एमपी/एमएलए कोर्ट ने 25 साल की सजा सुनाई
पीड़िता की ससुराल जाकर विधायक ने दी थी धमकी #RapeCase | #RamdularGond https://t.co/MflPEPwSLR pic.twitter.com/sQgjHFCIiX
— Mobin LLB (@immobink) December 15, 2023
ಏನಿದು ಪ್ರಕರಣ?
2014ರಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯ ಅಪರಾಧಿ ಎಂದು ಸಾಬೀತಾಗಿದೆ.
ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ಬರುವ ದುದ್ಧಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ರಾಮ್ದುಲರ್ ಗೊಂಡ್ ಸುಮಾರು ಎಂಟು ವರ್ಷಗಳ ಹಿಂದೆ ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದರು. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಮೈರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆಗ ರಾಮ್ದುಲರ್ ಗೊಂಡ್ ಶಾಸಕರಾಗಿರಲಿಲ್ಲ.