ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕನೋರ್ವ, ಕರ್ತವ್ಯನಿರತ ಪೊಲೀಸ್ ಅಧಿಕಾರಿಯೋರ್ವರಿಗೆ ಕಪಾಳಮೋಕ್ಷಗೈದ ಘಟನೆ ನಡೆದಿದೆ.
ಘಟನೆಯ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಅಜಿತ್ ಪವಾರ್ ಅವರ ಕಾರ್ಯಕ್ರಮವೊಂದರ ವೇದಿಕೆಯಿಂದ ಇಳಿಯುತ್ತಿದ್ದ ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ ಅವರು ಸಮತೋಲನ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ಹಿಡಿದಿದ್ದಾರೆ. ಅಷ್ಟಕ್ಕೇ ಕೋಪಗೊಂಡ ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ.
BJP MLA Sunil Kamble slapped a Maharashtra Police officer during a public event.
Police officers work day and night to deserve this? pic.twitter.com/N5uZjhwjtU
— Shantanu (@shaandelhite) January 5, 2024
ಈ ಘಟನೆಯ ದೃಶ್ಯಾವಳಿಗಳು ಕ್ಯಾಮರಾವೊಂದರಲ್ಲಿ ದಾಖಲಾಗಿವೆ. ಈ ಸಮಯದಲ್ಲಿ ನಿಜವಾಗಿಯೂ ಏನಾಯಿತು ಎಂದು ಯಾರಿಗೂ ತಿಳಿದುಬಂದಿಲ್ಲವಾದರೂ, ಎಡಗೈ ಬಳಸಿ ಕಪಾಳಮೋಕ್ಷ ಮಾಡಿರುವುದು ಸೆರೆಯಾಗಿದೆ. ಕಪಾಳಕ್ಕೆ ಬಾರಿಸಿಕೊಂಡ ಪೊಲೀಸ್ ಅಧಿಕಾರಿ ಸಿವಿಲ್ ಬಟ್ಟೆಯನ್ನು ಧರಿಸಿದ್ದರು.
ಪುಣೆಯ ಸಾಸೂನ್ ಆಸ್ಪತ್ರೆಯಲ್ಲಿ ತೃತೀಯಲಿಂಗಿಗಳ ಆರೈಕೆಗಾಗಿ ವಿಶೇಷ ವಾರ್ಡ್ ಅನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಪುಣೆ ಜಿಲ್ಲೆಯ ಉಸ್ತುವಾರಿ ಸಚಿವ ಅಜಿತ್ ಪವಾರ್ ಉದ್ಘಾಟನೆ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
In a viral video, an incident occurred in a program which saw presence of Deputy Chief Minister Ajit Pawar, where BJP MLA Sunil Kamble slapped a police officer. #bjp #BJPMLA #SunilKamble #Pune #AjitPawar #PuneBJP #Policeofficer #Punecity #आमदार #सुनीलकांबळे @BJP4Maharashtra… pic.twitter.com/obL0ggS6Z0
— Pune Pulse (@pulse_pune) January 5, 2024
ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ ಅವರು ಮಹಾರಾಷ್ಟದಲ್ಲಿ ಸದಾ ವಿವಾದಗಳಲ್ಲಿ ಸಿಲುಕುತ್ತಲೇ ಬಂದಿದ್ದಾರೆ. ಈ ಹಿಂದೆ ಪಿಎಂಸಿಯಲ್ಲಿ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿ ಬಂದಿತ್ತು. ಇದೀಗ ಈ ಘಟನೆಯ ಬಳಿಕ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದು, ಶಾಸಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ಈ ಘಟನೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಅವರ ಎದುರೇ ನಡೆದಿದ್ದು, ಶಾಸಕರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.