ಕಮಿಷನ್ ನಿರಾಕರಿಸಿದ ಗುತ್ತಿಗೆದಾರ : ಹೊಸ ರಸ್ತೆಯನ್ನೇ ಅಗೆದು ಹಾಕಿದ ಬಿಜೆಪಿ ಶಾಸಕನ ಬೆಂಬಲಿಗ!

Date:

Advertisements
  • ಉತ್ತರ ಪ್ರದೇಶದ ಬಿಜೆಪಿ ಶಾಸಕ ವೀರ ವಿಕ್ರಮ್ ಸಿಂಗ್ ಬೆಂಬಲಿಗನಿಂದ ಕೃತ್ಯ
  • ಕೃತ್ಯ ಎಸಗಿದವರಿಂದಲೇ ಹಾನಿಯ ವೆಚ್ಚ ವಸೂಲಿ ಮಾಡಲು ಸೂಚಿಸಿದ ಸಿಎಂ ಯೋಗಿ

ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದ್ದ ಕಮಿಷನ್ ವಿಚಾರ, ಈಗ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲೂ ಸದ್ದು ಮಾಡುತ್ತಿದೆ.

ಉತ್ತರ ಪ್ರದೇಶದ ಗುತ್ತಿಗೆದಾರನೊಬ್ಬ ಶೇ.5ರಷ್ಟು ಕಮಿಷನ್‌ ಪಾವತಿಸಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ಶಾಸಕನ ಬೆಂಬಲಿಗನೊಬ್ಬ, ಹೊಸದಾಗಿ ಡಾಂಬರ್ ಹಾಕಿ ಅಭಿವೃದ್ಧಿಪಡಿಸಿದ್ದ ರಸ್ತೆಯ ಸುಮಾರು ಅರ್ಧ ಕಿ.ಮೀ. ಅನ್ನು ಬುಲ್ಡೋಝರ್‌ ಬಳಸಿ ಕಿತ್ತು ಹಾಕಿರುವ ಘಟನೆ ನಡೆದಿದೆ.

ಷಹಜಹಾನ್‌ಪುರದಲ್ಲಿ ಈ ರೀತಿಯ ಘಟನೆ ನಡೆದಿದ್ದು, ಷಹಜಹಾನ್‌ಪುರದಿಂದ ನಾವಡಾ ಮತ್ತು ಜೈತಿಪುರ ಮಾರ್ಗವಾಗಿ ಬುಡೌನ್‌ ಜಿಲ್ಲೆಗೆ ಸಂಪರ್ಕ ಬೆಸೆಯುವ ರಸ್ತೆಯ ಕಾಮಗಾರಿಯನ್ನು ಹೊಸದಾಗಿ ಇತ್ತೀಚೆಗಷ್ಟೇ ಲೋಕೋಪಯೋಗಿ ಗುತ್ತಿಗೆದಾರ ಪೂರ್ಣಗೊಳಿಸಿದ್ದನು. ಆ ಬಳಿಕ ಕತ್ರಾ ಕ್ಷೇತ್ರದ ಬಿಜೆಪಿ ಶಾಸಕ ವೀರ ವಿಕ್ರಮ್ ಸಿಂಗ್ ಅವರ ಬೆಂಬಲಿಗ ಎಂದು ಪರಿಚಯಿಸಿಕೊಂಡ ಜಗವೀರ್ ಸಿಂಗ್, ಶೇ.5ರಷ್ಟು ಕಮಿಷನ್‌ ಪಾವತಿಸಲು ಬೇಡಿಕೆ ಇಟ್ಟಿದ್ದಾನೆ. ಆದರೆ ಇದನ್ನು ನೀಡಲು ಗುತ್ತಿಗೆದಾರ ನಿರಾಕರಿಸಿದ.

Advertisements

ಈ ಹಿನ್ನೆಲೆಯಲ್ಲಿ ಕಳೆದ ಅ.2ರಂದು ಜಗವೀರ್ ಸಿಂಗ್ ಸುಮಾರು 15ರಿಂದ 20 ಮಂದಿ ಅಪರಿಚಿತರ ಜನರೊಂದಿಗೆ ತೆರಳಿ ಕೆಲಸಗಾರರನ್ನು ಥಳಿಸಿ, ಬಳಿಕ ಹೊಸದಾಗಿ ಹಾಕಿದ್ದ ರಸ್ತೆಯನ್ನು ಅಗೆದು ಹಾಕಿದ್ದಾನೆ.

ರಸ್ತೆ ನಿರ್ಮಾಣ ಕಂಪನಿಯ ಮ್ಯಾನೇಜರ್‌ ಅ.3ರಂದು ನೀಡಿದ ದೂರಿನ ಅನ್ವಯ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತಪ್ಪಿತಸ್ಥ ಜಗವೀರ್ ಸಿಂಗ್ ಹಾಗೂ ಇತರರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶೋಕ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

BJ

ಇನ್ನು ಈ ಘಟನೆ ರಾಜ್ಯಾದ್ಯಂತ ಸುದ್ದಿಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಈ ಕೃತ್ಯ ಎಸಗಿದವರಿಂದಲೇ ಹಾನಿಯ ಸಂಪೂರ್ಣ ವೆಚ್ಚ ವಸೂಲಿ ಮಾಡುವಂತೆ ಸೂಚಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸಂಜಯ್‌ ಕುಮಾರ್‌ ಪಾಂಡೆ ಅವರು, ಈ ಕುರಿತು ಪಿಡಬ್ಲ್ಯುಡಿ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರಿಂದ ಮಾಹಿತಿ ಪಡೆದಿದ್ದು, ತಿಲ್ಹರ್ ಉಪ ವಿಭಾಗದ ಮ್ಯಾಜಿಸ್ಟೇಟ್‌ ನೇತೃತ್ವದಡಿ ತನಿಖೆಗೆ ಆದೇಶಿಸಿದ್ದಾರೆ. ತಂಡವು ವರದಿ ಸಲ್ಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ರಸ್ತೆ ಅಭಿವೃದ್ಧಿ ಕಾರ್ಯವನ್ನು ಮತ್ತೆ ಆರಂಭಿಸಲಾಗಿದ್ದು, ಕಾಮಗಾರಿಯಲ್ಲಿ ತೊಡಗಿರುವವರಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ವೀರ ವಿಕ್ರಮ್ ಸಿಂಗ್, ‘ಜಗವೀರ್ ಬಿಜೆಪಿ ಕಾರ್ಯಕರ್ತನಾಗಿರುವುದು ನಿಜ. ಆದರೆ, ಆತ ನನ್ನ ಬೆಂಬಲಿಗನಲ್ಲ. ಆತನಿಗೂ, ನನಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X