ಕಳೆದ ಲೋಕಸಭೆ ಅಧಿವೇಶನದಲ್ಲಿ ತನ್ನನ್ನು ಉಚ್ಚಾಟಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ “ಓರ್ವ ಸಂಸದೆಯ ಧ್ವನಿ ಹತ್ತಿಕ್ಕಿ ಬಿಜೆಪಿ ಭಾರೀ ಬೆಲೆ ತೆತ್ತಿದೆ, 63 ಸ್ಥಾನ ಕಳೆದುಕೊಂಡಿದೆ” ಎಂದು ಕುಟುಕಿದರು.
ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, “ಸರ್ಕಾರದ ಭಾಷಣ ಬರಹಗಾರರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮುಜುಗರಕ್ಕೀಡುಮಾಡಿದ್ದಾರೆ. ಆಡಳಿತ ಪಕ್ಷಕ್ಕೆ ಲೋಕಸಭೆಯಲ್ಲಿ ಬಹುಮತ ಇಲ್ಲದಿದ್ದರೂ ಕೂಡಾ ಭಾಷಣದಲ್ಲಿ ಸ್ಪಷ್ಟವಾದ ಸ್ಥಿರ ಸರ್ಕಾರಕ್ಕಾಗಿ ಬಹುಮತದ ಜನಾದೇಶವಾಗಿದೆ ಎಂದು ಬರೆಯಲಾಗಿದೆ” ಎಂದು ರಾಷ್ಟ್ರಪತಿ ಭಾಷಣವನ್ನು ಟೀಕಿಸಿದರು.
ಇದನ್ನು ಓದಿದ್ದೀರಾ? ಸಂಸತ್‌ನಿಂದ ಉಚ್ಛಾಟನೆ | ನನ್ನ ಗೆಲುವು ಉತ್ತರ ನೀಡುತ್ತದೆ: ಮಹುವಾ ಮೊಯಿತ್ರಾ
“ಇದು ಸ್ಥಿರ ಸರಕಾರವಲ್ಲ. ಇದು ಯು-ಟರ್ನ್‌ಗಳ ಇತಿಹಾಸ ಹೊಂದಿರುವ ಬಹು ಮಿತ್ರರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. 272 ಸ್ಥಾನ ಪಡೆಯುವುದಕ್ಕೆ ಬಿಜೆಪಿಗೆ 32 ಸ್ಥಾನ ಕಡಿಮೆಯಾಗಿದೆ. ಈ ಬಾರಿ 234 ಯೋಧರು ದೃಢವಾಗಿ ಒಗ್ಗೂಡಿದ್ದಾರೆ. ಈ ಬಾಗಿಲುಗಳ ಮೂಲಕ ನಡೆಯಲು ನಾವು ಬೆಂಕಿಯನ್ನು ದಾಟಿ ಬಂದಿದ್ದೇವೆ. ಹಾಗಾಗಿ ಈ ಬಾರಿ ನಮ್ಮನ್ನು ಮೌನವಾಗಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ನಗದು-ಪ್ರಶ್ನೆ ಆರೋಪದ ಮೇಲೆ 17ನೇ ಲೋಕಸಭೆಯಿಂದ ತನ್ನ ಉಚ್ಚಾಟನೆಯನ್ನು ಉಲ್ಲೇಖಿಸಿ ಮಾತನಾಡಿದ ಮಹುವಾ, “ಕಳೆದ ಬಾರಿ ನಾನು ಇಲ್ಲಿ ಮಾತನಾಡಲು ಎದ್ದಾಗ, ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಓರ್ವ ಸಂಸದೆಯ ಧ್ವನಿಯನ್ನು ಹತ್ತಿಕ್ಕಿ ಆಡಳಿತ ಪಕ್ಷ (ಬಿಜೆಪಿ) ಭಾರೀ ಬೆಲೆ ತೆತ್ತಿದೆ. ನೀವು ನನ್ನನ್ನು ಕೆಳಗಿಳಿಸಲು ಪ್ರಯತ್ನದಲ್ಲಿರುವಾಗ ಜನರು ನಿಮ್ಮ 63 ಸಂಸದರನ್ನು ಶಾಶ್ವತವಾಗಿ ಕೆಳಗಿಳಿಸಿದರು” ಟ್ಯಾಂಗ್ ನೀಡಿದರು.
#Breaking SHOCKWAVE to BJP ⚡️⚡️
“The last time I stood here, I was not allowed to speak. But the ruling party has paid a very heavy price for throttling the voice of one MP. They wanted to silence me, but the public permanently silenced 63 members of BJP”:
-MP Mahua Moitra🔥🔥 https://t.co/AHf8meLcft pic.twitter.com/M6pxjOTd1o— Mr. Misabh (@Misabh2020) July 1, 2024