- ಕೆ ಜೆ ಜಾರ್ಜ್ ಅವರನ್ನು ಹುಡುಕಿ ಕೊಡಿ ಎಂದ ಬಿಜೆಪಿ
- ಬಿಜೆಪಿ ಮಾಡಿರುವ ಟ್ವೀಟ್‌ಗೆ ಕಾಂಗ್ರೆಸ್ ತಿರುಗೇಟು
ಡಿಯರ್ ಬಿಜೆಪಿ, ಕಾಣೆಯಾಗಿರುವುದು ನಿಮ್ಮ ಪಕ್ಷದ ಅಧ್ಯಕ್ಷ, ಕಾಣೆಯಾಗಿರುವುದು ಬಿಜೆಪಿಯ 25 ಸಂಸದರು, ಕಾಣೆಯಾಗಿರುವುದು ವಿರೋಧ ಪಕ್ಷದ ನಾಯಕ! ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
“ಡಿಯರ್ ಕಾಂಗ್ರೆಸ್, ಕಾಣೆಯಾಗಿದ್ದ ಬಸ್ ಸ್ಟಾಂಡ್‌ನನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ, ಇರಲಿ ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ! ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ ಜೆ ಜಾರ್ಜ್ ಅವರನ್ನು ಹುಡುಕಿ ಕೊಡಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ” ಎಂದು ಬಿಜೆಪಿ ಮಾಡಿರುವ ಟ್ವೀಟ್‌ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
“ರಾಜ್ಯದಲ್ಲಿ ಬರದ ಕಾರಣ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ. ಹಾಗೂ ಬೇಡಿಕೆ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಸಚಿವ ಕೆ ಜೆ ಜಾರ್ಜ್ ಅವರು ನಿಮ್ಮದೇ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಚರ್ಚಿಸಲು ದೆಹಲಿಗೆ ಹೋಗಿದ್ದಾರೆ” ಎಂದು ಹೇಳಿದೆ.
ಡಿಯರ್ @BJP4Karnataka ,
ಕಾಣೆಯಾಗಿರುವುದು ನಿಮ್ಮ ಪಕ್ಷದ ಅಧ್ಯಕ್ಷ, ಕಾಣೆಯಾಗಿರುವುದು ಬಿಜೆಪಿಯ 25 ಸಂಸದರು, ಕಾಣೆಯಾಗಿರುವುದು ವಿರೋಧ ಪಕ್ಷದ ನಾಯಕ!ರಾಜ್ಯದಲ್ಲಿ ಬರದ ಕಾರಣ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ. ಹಾಗೂ ಬೇಡಿಕೆ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಸಚಿವ ಕೆ ಜೆ ಜಾರ್ಜ್ ಅವರು ನಿಮ್ಮದೇ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ… https://t.co/q6FsHg14x6 pic.twitter.com/guoHEEvLNc
— Karnataka Congress (@INCKarnataka) October 12, 2023
“ನಿಮ್ಮ ಕೇಂದ್ರ ಸಚಿವರ ಕಾರ್ಯಕ್ರಮಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲವೆಂದರೆ ನಿಮ್ಮಲ್ಲಿ ನೈತಿಕತೆ ಕಾಣೆಯಾಗಿರುವುದು ಸ್ಪಷ್ಟವಾಗುತ್ತದೆ. ನಮ್ಮ ಸಚಿವರು ಸದಾ ತಮ್ಮ ಹೊಣೆಗಾರಿಕೆಯ ಕೆಲಸಗಳಲ್ಲಿ ತೊಡಗಿರುತ್ತಾರೆ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಬೇಕಾದ ಮಾರ್ಗಗಳನ್ನು ಹುಡುಕುತ್ತಾರೆ” ಎಂದು ತಿಳಿಸಿದೆ.
“ಬಿಜೆಪಿ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಿ, ವಿರೋಧ ಪಕ್ಷದ ನಾಯಕನ ಆಯ್ಕೆ ಯಾವಾಗ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.